ಹೊಸ ತಲೆಮಾರು ಪ್ರಕೃತಿದತ್ತ ಆಹಾರದಿಂದ ದೂರ ಸರಿದಿವೆ: ತೆಂಡ್ರಲ್.ಕೆ.
ಚಿಕ್ಕನಾಯಕನಹಳ್ಳಿ :ಆಧುನಿಕ ಯುಗದಲ್ಲಿ ಫಾಸ್ಟ್ಪುಡ್ ಸಂಸ್ಕೃತಿಯನ್ನು ನೆಚ್ಚಿಕೊಂಡಿರುವ ಹೊಸ ತಲೆಮಾರು, ಪ್ರಕೃತಿದತ್ತ ಆಹಾರದಿಂದ ದೂರ ಸರಿದಿದ್ದಾರೆ ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರು ತೆಂಡ್ರಲ್.ಕೆ. ಬೇಸರ ವ್ಯಕ್ತಪಡಿದರು.
ಪಟ್ಟಣದ ಉಡೇವು ಬೀದಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲ್ಲೂಕು ಆರೋಗ್ಯ ಧಿಕಾರಿಗಳ ಕಚೇರಿ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟಿçÃಯ ಪೌಷ್ಠಿಕಾಂಶ ಸಪ್ತಾಹದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದರಿಂದ ಮನುಷ್ಯನ ಶರೀರವು ದಿನದಿಂದ ದಿನಕ್ಕೆ ರೋಗದ ದಾಸರಾಗಿದೆ. ಹಿಂದಿನ ಕಾಲದಲ್ಲಿ ಪಾರಂಪರಿಕ ಪ್ರಕೃತಿ ದತ್ತವಾದ ಆಹಾರವನ್ನು ಸೇವಿಸುತ್ತಿದ್ದ ಹಿರಿಯರು ಉತ್ತಮ ಆಹಾರವನ್ನು ಪಡೆದು ರೋಗಗಳಿಂದ ದೂರ ಉಳಿದಿದ್ದರು. ಪ್ರಕೃತಿಯಿಂದ ದೊರೆಯುವ ಆಹಾರವನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುವ ವಿಧಾನ ವನ್ನು ನಮ್ಮ ಹಿರಿಯರು ಕಂಡುಕೊ0ಡಿದ್ದರು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ರೇಖಾ ಮಾತನಾಡಿ ಅವೈಜ್ಞಾನಿಕ ಚಿಂತನೆಗಳ ಪರಿಣಾಮವಾಗಿ ಅನೇಕ ಮಕ್ಕಳು ಮರಣ ಹೊಂದಿವೆ. ಇಂದು ನಾವು ರಾಸಾಯನಿಕಯುಕ್ತ ಆಹಾರವನ್ನು ಸೇವಿಸುತ್ತಿದ್ದೇವೆ. ಪುಟ್ಟ ಮಕ್ಕಳಿಗೆ ಪೋಷಕಾಂಶವುಳ್ಳ ಆಹಾರವನ್ನು ತಾಯಂದಿರು ನೀಡಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹಳ ಬದ್ದತೆಯಿಂದ ತಮ್ಮ ಕಾಯಕವನ್ನು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪ್ರಸೂತಿ ಮತ್ತು ಸ್ರೀ ರೋಗ ತಜ್ಞ ಡಾ. ನಟರಾಜು ಪೌಷ್ಠಿಕಾಂಶದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ರಾಜಶೇಖರ್, ವಕೀಲ ರಾದ ರತ್ನರಂಜಿನಿ, ದಿಲೀಪ್, ಪುರಸಭಾ ಸದಸ್ಯ ಮಲ್ಲೇಶ್, ಹಾಗು ಅಂಗನವಾಡಿ ಶಿಕ್ಷಕರು ಮಹಿಳೆಯರು ಭಾಗವಹಿಸಿದ್ದರು.