ವರ್ಧಮಾನ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಕು.ಪರ್ಣಿಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಆಯ್ಕೆ
ಶಿರಾ:ಶಿರಾ ನಗರದ ವರ್ಧಮಾನ್ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ ವ್ಯಾಸಂಗ ಮಾಡು ತ್ತಿರುವ ಕು. ಪರ್ಣಿಕ.ಎಂ. ಎಂಬ ಬಾಲಕಿ ೨೦೨೧ ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ವಿಜಯರಾಜ್ ಹೇಳಿದರು.
ಅವರು ನಗರದ ವರ್ಧಮಾನ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕು. ಪರ್ಣಿಕಗೆ ಅಭಿನಂದಿಸಿ ಮಾತನಾಡಿದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿರುವ ಕು. ಪರ್ಣಿಕಾ ಮಹಾಭಾರತದ ಮೂರು ಅಧ್ಯಾಯ ಗಳು, ೬ ವೇದ ಪಠಣೆ, ೪ ಪದ್ಯಗಳು, ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ತಿಂಗಳುಗಳು, ವಾರಗಳು, ಅಕ್ಷರಗಳು, ೩ ಶ್ಲೋಕಗಳು, ಒಂದರಿ0ದ ಹತ್ತು ಅಂಕಿಗಳು ಹಾಗೂ ಇನ್ನೂ ಹಲವಾರು ಶ್ಲೋಕಗಳನ್ನು ಸರಾಗವಾಗಿ ಹೇಳುತ್ತಾಳೆ. ಈ ಮಗುವಿನ ಸಾಧನೆಯ ಹಿಂದೆ ಅವರ ಪೋಷಕರ ಶ್ರಮ ಮೆಚ್ಚುವಂತಹದ್ದು, ಮಗುವಿನ ಸಾಧನೆಗೆ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸಹಕಾರ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕು. ಪರ್ಣಿಕಳ ಪೋಷಕರಾದ ಮೋಹನ್, ಡಾ.ಕಾವ್ಯಶ್ರೀ, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಂಜಯ್‌ ಎಸ್. ಗೌಡ, ಕಾರ್ಯದರ್ಶಿ ಕಪಿಲ್ ದೇವ್, ಪ್ರಾಂಶುಪಾಲರಾದ ಪ್ರಿಯಾಂಕ, ಶಿಕ್ಷಕಿಯರಾದ ಸುಭಾಷಿನಿ, ದಿವ್ಯ, ಗೀತ, ರಮ್ಯ, ಓಬರಾಜು, ಸುಜಾತ, ಸಹನ, ಮಹೇಶ್ ಮತ್ತಿತರರು ಹಾಜರಿದ್ದರು.