ಸಂವಿಧಾನ ಯಾರಪ್ಪನ ಸ್ವತ್ತೂಲ್ಲಾ ಮಿಸಲಾತಿ ನಮ್ಮ ಜನ್ಮಸಿದ್ದ ಹಕ್ಕು : ಕೆ. ಅಶೋಕ
ಹರಪನಹಳ್ಳಿ:ಸಂವಿಧಾನ ಯಾರಪ್ಪನ ಸ್ವತ್ತಲ್ಲಾ ಮಿಸಲಾತಿ ನಮ್ಮ ಜನ್ಮಸಿದ್ದ ಹಕ್ಕು ಮಿಸಲಾತಿಯನ್ನು ಪ್ರಶ್ನೇಸುವವರು ನೀವು ಯಾರು? ಎಂದು ಪರೋಕ್ಷವಾಗಿ ಮಾದಿಗ ಮಹಾಸಭಾದ ಮುಂಖಡರಿಗೆ ಕೊರಚ ಸಮಾಜದ ತಾಲೂಕು ಅದ್ಯಕ್ಷ ಕೆ. ಅಶೋಕ ಆಗ್ರಹಿಸಿ ದರು.
ಪಟ್ಟಣದ ಪ್ರವಾಸಿ ಮಂಧಿರದಲ್ಲಿ ನಡೆಸಲಾಗಿದ್ದ, ನ್ಯಾಯಾಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ವಿರೋಧಿಸಿ ಮತ್ತು ಮಾದಿಗ ಮಹಾಸಭಾದ ನಡೆಯನ್ನು ಖಂಡಿಸಿ ಕರೆಯಲಾಗಿದ್ದ ಭೋವಿ, ಬಂಜಾರ, ಕೊರಮ, ಕೊರಚ, ಹಾಗೂ ಇತರೆ ಸಹೋದರ ಸಂಬAಧಿಗಳ ಸಮುದಾಯ ಮುಖಂಡರಿAದ ಸೆ. ೨೮ ರಂದು ನಡೆಯಲಿರುವ ಬೃಹತ್ ಪ್ರತಿಭಟನೆ ಕುರಿತು ನಡೆಸಿದಲಾಗಿದ್ದ ಸುದ್ಧಿ ಗೋಷ್ಠಿಯಲ್ಲಿ ಮತನಾಡಿದ ಅವರು ನಾವುಗಳು ಇಲ್ಲಿಯವರಿಗೂ ಅಸ್ಪೃಶ್ಯತೆಯ ನೋವನ್ನು ಇನ್ನು ನಮ್ಮನ್ನು ಕಾಡುತ್ತಿದ್ದೆ, ಯಾರೋ ಒಬ್ಬರು ಇಬ್ಬರು ಶಾಸಕರಾದರೆ, ಶ್ರೀಮಂತರಾದರೆ ಎಲ್ಲಾರೂ ಶ್ರೀಮಂತರು ಎಲ್ಲರೂ ಮುಂದುವರೆದ ಜನಾಂಗ ಎಂದು ಭಾವಿಸುವುದು ತಪ್ಪು. ಎಂದು ಮಿಸಲಾತಿ ವಿರೋಧಿಗಳಿಗೆ ಟಾಂಗ್ ನೀಡಿದರು.
ಮಿಸಲಾತಿ ಸಂರಕ್ಷಣ ಒಕ್ಕೂಟ ಮುಖಂಡ ಡಾ|| ಎಲ್.ಪಿ. ಕಠಾರಿ ನಾಯ್ಕ, ಮಾತ ನಾಡಿ, ನಮ್ಮನ್ನು ಆಳುವ ಸರ್ಕಾರಗಳು ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ, ಅದರಲ್ಲೂ ನಮ್ಮ ಸಹೋದರ ಸುಮುದಾಯ ದವರಾದ ಮಾದಿಗ ಸಮುದಾಯದವರು ಬಂಜಾರ್ ಸಮುದಾಯದ ಕುಲ ದೇವರನ್ನು, ಹಾಗೂ ಬಂಜಾರ್ ಸಮಾಜದ ಸಚಿವರನ್ನು ಆಸಂಸ್ಕçತಿಕ ಅವಾಚ್ಯಕ ಶಬ್ದಗಳಿಂದ ನಿಂಧನೆಮಾಡಿರುವುದು ಎಷ್ಟೋರ ಮಟ್ಟಿಗೆ ಸರಿ? ರಾಜ್ಯದ ಜನ ನಿಮ್ಮ ನಿಂದನೆಗೆ ಉತ್ತರ ಕೊಡಲಿದ್ದಾರೆ ನೀವು ಇದೇ ರೀತಿ ಮುಂದುವ ರೆದರೆ ನಿಮ್ಮ ವಿರುದ್ದ ಉಗ್ರವಾದ ಕ್ರಾಂತಿ ನಡೆಯಲಿದೆ ಎಂದು ಮಾದಿಗ ಸಮುದಾಯದ ಮುಖಂಡಿಗೆ ಎಚ್ಚರಿಕೆ ಸಂದೇಶ ವನ್ನು ನಿಡಿದರು.
ನಿವೃತ್ತ ಶಿಕ್ಷಕ ರಾಮೂರ್ತಿ ಮಾತನಾಡಿ, ಬಂಜಾರ್ ಸಮಾಜದವರು ಇಂದಿಗೂ ವಲಸೆ ಹೋಗುತ್ತಿರುವುದು ನಮ್ಮ ಕಣ್ಣು ಮುಂದೆ ನಡೆಯುತ್ತಿದ್ದೆ, ಕೋರಚ ಸಮುದಾಯದವರಯ ಇಂದಿಗೂ ಗ್ರಾಮದ ಹೋರಗೆ ಗುಡ್ಡಗಾಡು ಪ್ರದೇಶದಲ್ಲಿ ಜೀವನ ಮಾಡುತ್ತಿದ್ದಾರೆ. ಭೋವಿ ಸಮಾಜದವರು ಕಲ್ಲುಹೊಡೆದು ಜೀವನ ಮಾಡುತ್ತಿದ್ದಾರೆ, ಇನ್ನು ನಮ್ಮ ಸಹೋದರ ಸುಮದಾಯದವರು ಇವರವರ ಕುಲಕ ಸಭೆನ್ನೆ ನಂಬಿಕೊAಡು ಜೀವಿಸುತ್ತಿರುವ ಸಮುದಾಯಕ್ಕೆ ಮಿಸಲಾತಿ ಬೇಕಾಗಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕೊರಮ ಸಂಘದ ಮುಖಂಡ ರಾಜಕುಮಾರ್, ಗೋರ್ ಸೇನಾ ಸಂಘಟನೆಯ ಮುಖಂಡ ಸತೀಶ್ ನಾಯ್ಕ, ಭೋವಿ ಸಮಾಜದ ಮುಖಂಡ ಎಂ.ವಿ.ಕೃಷ್ಣಪ್ಪ, ಬಳ್ಳಾರಿ ಗೋರ್ ಸೇನಾ ಮುಖಂಡ ರಾಜುನಾಯ್ಕ, ಮುಂಜುನಾಥ್ ಪಂಪಾನಾಯ್ಕ, ಮಾತನಾಡಿದರು, ಸಿ.ಸಿ. ರಾಮಚಂದ್ರಪ್ಪ, ಶೆಶಿಕುಮಾರು, ವರ‍್ಯಾನಾಯ್ಕ, ಜಗ್ಯಾನಾಯ್ಕ, ಬಸವರಾಜ್, ಜಿ. ಶಾಂತನಾಯ್ಕ, ಶಿವಮೂರ್ತಿ, ದೇವಿಂದ್ರ, ನೀಲಾನಾಯ್ಕ, ಪ್ರಕಾಶ್ ನಾಯ್ಕ, ಮತ್ತು ಇತರರು ಪ್ರತಿಭಟನೆಗೆ ಹಾಜರಾಗಲು ಕರೆ ನೀಡಿದರು.