ನಾಳೆಯಿಂದ ಪ್ರಾಥಮಿಕ ಶಾಲೆಗಳ ಪೂರ್ಣ ಅವಧಿ ತರಗತಿ ಆರಂಭ
ಬೆಂಗಳೂರು :ನವೆಂಬರ್ 2 ರಿಂದ ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರಾಥಮಿಕ ಶಾಲೆಗಳು ಪೂರ್ಣ ಅವಧಿ ತರಗತಿಗಳು ಆರಂಭವಾಗಲಿವೆ.
ರಾಜ್ಯಯ ಸರ್ಕಾರವು ಅ.25 ರಿಂದ 1 ರಿಂದ 5 ನೇ ತರಗತಿಗಳನ್ನು ಆರಂಭಿಸಿತ್ತು. ಆದರೆ ಅರ್ಧ ದಿನ ಮಾತ್ರ ತರಗತಿಗಳು ನಡೆಸಲು ಸೂಚಿಸಿತ್ತು. ನ.2 ರ ಮಂಗಳವಾರದಿಂದ ಪಾರ್ಥಮಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಇದಕ್ಕೆ ಸಕಲ ಸಿದ್ಧತೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ.
ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅ.25 ರಿಂದ ಪ್ರಾಥಮಿಕ ಶಾಲೆ ಗಳನ್ನು ಆರಂಭಿಸಲಾಗಿತ್ತು. ಇದೀಗ ನ.2 ರಂದು ಪೂರ್ಣ ತರಗತಿಗಳು ಆರಂಭವಾಗಲಿವೆ.