ಸಹೋದರನನ್ನು ಕಳೆದುಕೊಂಡ ಭಾವನೆ ಆವರಿಸಿದೆ: ಎಂ.ಪಿ.ಲತಾ ಸಂತಾಪ
ನಟ ಪುನೀತ್ ರಾಜಕುಮಾರ್ ಶ್ರದ್ದಾಂಜಲಿ ಕಾರ್ಯಕ್ರಮ
ಹರಪನಹಳ್ಳಿ:ಸಹೋದರ, ಮಾಜಿ ಶಾಸಕ ದಿ.ಎಂ.ರವೀAದ್ರ ಅವರನ್ನು ಕಳೆದುಕೊಂಡಾಗ ಆಗಿರುವ ನೋವು ನಟ ಪುನೀತ್ ರಾಜುಕುಮಾರ್ ನಿಧನರಾದಗಲೂ ಆಗುತ್ತಿದೆ. ನಿಜಕ್ಕೂ ಸಹೋದರನ್ನು ಕಳೆದುಕೊಂಡ ಭಾವನೆ ನಮ್ಮಲ್ಲಿ ಆವರಿಸಿದೆ ಎಂದುಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ನಟ ಪುನೀತ್ ರಾಜಕುಮಾರ್ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಅವರು ಮಾತನಾಡಿದರು.
ವರ ನಟ ಡಾ.ರಾಜಕುಮಾರ್ ಕುಟುಂಬ ಮತ್ತು ನಮ್ಮ ತಂದೆ, ಮಾಜಿ ಉಪಮುಖ್ಯ ಮಂತ್ರಿ ಎಂ.ಪಿ.ಪ್ರಕಾಶ್ ಅವರ ಕುಟುಂಬದ ಒಡನಾಟಗಳನ್ನು ನೆನಪಿಸಿಕೊಂಡ ಅವರು, ಅಕಾಲಿಕವಾಗಿ ನಮ್ಮೆಲ್ಲರನ್ನು ಆಗಲಿರುವ ಪ್ರೀತಿಯ ಅಪ್ಪು ಇನ್ನೂ ಬರೀ ನೆನಪಾಗಿ ಉಳಿಯಲಿದ್ದಾರೆ. ಎಂ.ಪಿ.ರವೀAದ್ರ ಅವರೊಂದಿಗಿನ ಅಪ್ಪುವಿನ ಒಡನಾಟ ಮತ್ತು ಇವರಿಬ್ಬರ ಹೃದಯ ಶ್ರೀಮಂತಿಕೆ, ಸಾವಿನಲ್ಲೂ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರೂ ನಮ್ಮೆಲ್ಲರನ್ನು ಆಗಲಿರುವುದು ನಿಜಕ್ಕೂ ಕಾಕಾತಾಳಿಯವಾಗಿದೆ ಎಂದರು.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಸಿರಿಸಿದ ಪುನೀತ್ ‘ಬೆಟ್ಟದ ಹೂವು’ ಚಿತ್ರಕ್ಕೆ ರಾಷ್ಟç ಪ್ರಶಸ್ತಿ ಗಳಿಸುವ ಮೂಲಕ ಎಲ್ಲರ ಹೃದಯವನ್ನು ಗೆದ್ದರು. ಪುನೀತ್ ಕೇವಲ ನಾಯಕ ನಟರಾಗಿರದೇ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಅನಾಥಶ್ರಮಗಳಿಗೆ ನೆರವು, ಬಡಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ನಾನಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಅವರ ಅಗಲಿಕೆ ಕೇವಲ ಕರ್ನಾಟಕ್ಕೆ ಅಲ್ಲ, ಇಡೀ ಭಾರತ ದಾದ್ಯಂತ ಅವರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ ಎಂದು ತಿಳಿಸಿದರು.
ಮಾಜಿ ಶಾಸಕ, ಸಹೋದರ ಎಂ.ಪಿರವೀAದ್ರ ಕೂಡ ೪೯ ವರ್ಷಕ್ಕೆ ಅಕಾಲಿಕ ನಿಧಾನ ಹೊಂದಿದ. ಪುನೀತ್ ಕೂಡ ೪೬ ವರ್ಷಕ್ಕೆ ಅಕಾಲಿಕ ನಿಧನರಾಗಿದ್ದಾರೆ. ದುರಂತವೆAದರೆ ಇಬ್ಬರೂ ಕೂಡ ಇದೇ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರು ಬಿಟ್ಟಿದ್ದಾರೆ. ಹೀಗಾಗಿ ಎಂ.ಪಿ.ರವೀAದ್ರ ಅವರ ೩ನೇ ಪುಣ್ಯಸ್ಮರಣೆ ಅಂಗವಾಗಿ ಅ.೨೧ರಂದು ವಿದ್ಯಾರ್ಥಿಗಳಿಗಾಗಿ ಹಮ್ಮಿ ಕೊಂಡಿದ್ದ ಚಿತ್ರ ಕಲಾ ಸ್ಪರ್ಧೆಯನ್ನು ರದ್ದುಗೊಳಿಸಿ ಪುನೀತ್ ಅವರಿಗೆ ಗೌರವ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಎಂ.ವಿ.ಅAಜಿನಪ್ಪ, ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಪೈಲ್ವಾನ್ ಗಣೇಶ್, ಮುಖಂಡರಾದ ಚಿಕ್ಕೇರಿ ಬಸಪ್ಪ, ವಸಂತಪ್ಪ, ಕಣವಿಹಳ್ಳಿ ಚಂದ್ರಶೇಖರ್, ಕಡಬಗೆರೆ ಗ್ರಾ.ಪಂ ಅಧ್ಯಕ್ಷೆ ಅನುಷಾ ಮಂಜುನಾಥ, ನಂದಿಬೇವೂರು ಗ್ರಾ.ಪಂ ಉಪಾಧ್ಯಕ್ಷೆ ಲಕ್ಷಿö್ಮ ಚಂದ್ರಶೇಖರ್, ಕಂಚಿಕೇರಿ ಜಯಲಕ್ಷಿö್ಮ, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಹರಪನಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ಚಿಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕೆ.ರಿಯಾಜ್, ಬಸಪ್ಪ, ಎಂ.ವಿ.ಕೃಷ್ಣಕಾAತ್, ಉಮಾಮಹೇಶ್ವರಿ, ದಾದಪುರ ಶಿವಪುತ್ರ, ಮಾಡ್ಲೀಗೆರೆ ಹನುಮಂತ, ಕವಿತಾ ಸುರೇಶ್, ಸುಮ ಜಗದೀಶ್ ಮತ್ತಿತರರು ಭಾಗವಹಿಸಿದ್ದರು.