ಹಿರೇಕೇರೆ ಪಟ್ಟಣವನ್ನು ಅಭಿವೃದ್ಧಿಪಡಿಸುತ್ತೇನೆ : ಶಾಸಕ ಜಿ. ಕರುಣಾಕರ ರೆಡ್ಡಿ
ಹರಪನಹಳ್ಳಿ:೨೦೨೦-೨೧ ನೇ ಸಾಲಿನ ಡಿ ಎಂ. ಎಫ್. ಯೋಜನೆಯಡಿಯಲ್ಲಿ ೧೫೦.೦೦ ಲಕ್ಷ ರೂ ಅನುದಾನದಲ್ಲಿ ಪಟ್ಟಣದ ಹಿರೆಕೆರೆ ಅಭಿವೃದ್ಧಿ ಹಾಗೂ ಸೈಡ್ ವಾಲ್ ಪಿಚ್ಚಿಂಗ್ ಗೊಳಿಸಲಾಗುವುದೆಂದು ಶಾಸಕ ಜಿ. ಕರುಣಾಕರ ರೆಡ್ಡಿ ತಿಳಿಸಿದರು.
ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಪಟ್ಟಣದ ಹಿರೇಕೇರೆ ವೃತ್ತದಿಂದ ರಾಜ್ಯ ಹೆದ್ದಾರಿ ೨೫ ರ ರಸ್ತೆಯ ಪರಿಮಿತಿಯ ೯೦೦ ಮೀಟರ್ ವರೆಗೂ ರಸ್ತೆ ಅಭಿವೃದ್ಧಿ ಪಡಿಸುವುದರ ಜೊತೆಗೆ ಉಳಿದ ಅನುದಾನದಲ್ಲಿ ಕೆರೆ ಅಭಿವೃದ್ಧಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಬಿಜೆಪಿ ಮುಖಂಡ ರಾದ ಆರ್. ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಯಡಿಹಳ್ಳಿ ಶೇಖರಪ್ಪ, ಬಿಜೆಪಿ ಮಂಡಲ ಕಾರ್ಯದರ್ಶಿ ಪರ‍್ಯಾ ನಾಯ್ಕ್, ತಾ. ಮಾಜಿ ಸದಸ್ಯ ಎಂ. ಮಲ್ಲೇಶ್, ಪುರಸಭೆ ಸದಸ್ಯರಾದ ಡಿ. ರೋಕ್ಕಪ್ಪ, ಎಂ. ಕೆ. ಜಾವೀದ್, ಪ್ರಚಾರ್ಯ ಮಲ್ಲಿಕಾರ್ಜುನ ಗೌಡ, ಅಭಿಯಂತರರಾದ ಬಿ. ನಿಂಗಪ್ಪ, ಪ್ರಕಾಶ್ ನಾಯ್ಕ್, ನಾಗೇಶ್, ಅಶೋಕ, ಕುಬೇಂದ್ರ ನಾಯ್ಕ್ ಗುತ್ತಿಗೆದಾರ ಆರ್. ವೀರ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.