ಕನ್ನಡ ಭಾಷೆ ಸ್ವಾಭಿಮಾನದ ಸಂಕೇತ : ಕೋಡಿಹಳ್ಳಿ ಭೀಮಣ್ಣ
ಹರಪನಹಳ್ಳಿ:ಯುವಕರು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು ಅನ್ಯಭಾಷೆ ವ್ಯಾಮೋಹ ಕಡಿಮೆಮಾಡಿಕೊಳ್ಳಬೇಕು. ಸ್ವಾಭಿಮಾನದ ಕನ್ನಡ ಭಾಷೆ, ನಾಡು ನೂಡಿಯ ಬಗ್ಗೆ ಹೆಚ್ಚಿನ ಪ್ರೀತಿ ತೋರಬೇಕಾಗಿದೆ ಎಂದು ಪ್ರಗತಿಪರ ಸಂಘಟನೆ ಮುಖಂಡರು ಸರ್ವಜನಾಂಗದ ನಾಯಕ ರಾದ ಕೋಡಿಹಳ್ಳಿ ಭೀಮಣ್ಣ ಪ್ರತಿಪಾದಿಸಿದರು.
ಪಟ್ಟಣದ ಹೊಸಪೇಟೆ ರಸ್ತೆಯ ಮಾರ್ಗದಲ್ಲಿರುವ ಖಾಸಗಿ ಸಮತಾ ರೆಸಾರ್ಟ್ನಲ್ಲಿ ಕೋಡಿಹಳ್ಳಿ ಭೀಮಣ್ಣ ಅಭಿಮಾನಿಗಳ ಬಳಗದಿಂದ ಆಯೋಜಿಸಲಾಗಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಬೌದ್ಧ ವಿಹಾರ ಮುಂದೆ ಕನ್ನಡ ಧ್ವಜಕ್ಕೆ ಪುಷ್ಪಾ ನಮನ ಅರ್ಪಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಕನ್ನಡ ನಾಡು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಸಾಧು-ಸಂತರು-ದಾಸರು- ಶಿವಶರಣರು – ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮAತ ಶಕ್ತಿ. ಇAತಹ ನಾಡಿನಲ್ಲಿ ಹುಟ್ಟಿರು ವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ ಒಂದರAದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿAದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ನಾವು ನಮ್ಮ ಕನ್ನಡ ನಾಡು, ನುಡಿ, ಭಾಷೆ, ನವೆಂಬರ್‌ನಲ್ಲೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಏಕೆ ಎಂಬ ಬಗ್ಗೆಯೂ ತಿಳಿದುಕೊಳ್ಳಲೇಬೇಕು.
ಕನ್ನಡಿಗರ ನಾಡನ್ನು ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ಹೆಸರಿಡಬೇಕು ಎಂದು ಮೊದಲು ೧೯೭೨ ರ ಜುಲೈನಲ್ಲಿ ಈ ಬಗ್ಗೆ ಚರ್ಚೆ ಭುಗಿಲೆದ್ದಿತು. ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲೂ ಇದಕ್ಕೆ ಸರ್ವಾನುಮತದಿಂದ ಅನುಮತಿ ದೊರೆಯಿತು.
ಆಲೂರು ವೆಂಕಟರಾವ್ ರವರು ೧೯೦೫ ರಲ್ಲಿ ಕರ್ನಾಟಕ ಏಕೀಕರಣ ಚಟುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ೧೯೫೦ ರಲ್ಲಿ ಭಾರತವು ಗಣರಾಜ್ಯವಾಯಿತು. ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳು ರಚನೆಯಾದವು. ಇದು ಮೈಸೂರು ರಾಜ್ಯಕ್ಕೆ ಜನ್ಮ ನೀಡಿತು. ನವೆಂಬರ್ ೧, ೧೯೫೬ ರಂದು ಮೈಸೂರು ಸಂಸ್ಥಾನವು ಹಿಂದಿನ ಮೈಸೂರು ಸಂಸ್ಥಾನದ ಬಹುತೇಕ ಪ್ರದೇಶವನ್ನು ಒಳಗೊಂಡಿತ್ತು. ಉತ್ತರ ಕರ್ನಾಟಕದ ಜನರು ಮೈಸೂರು ಹೆಸರನ್ನು ಉಳಿಸಿಕೊಳ್ಳಲು ಒಲವು ತೋರಲಿಲ್ಲ. ಏಕೆಂದರೆ ಇದು ಹಿಂದಿನ ಸಂಸ್ಥಾನದ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬAಧ ಹೊಂದಿತ್ತು ಎಂದರು.
ಈ ಸಂದರ್ಭದಲ್ಲಿ ಆಲದಹಳ್ಳಿ ಷಣ್ಮುಖಪ್ಪ, ಈಶ್ವರ್ ನಾಯ್ಕ, ಕೆ. ಚವ್ಹಾಣ್ ಕುಮಾರ್, ಗುರುಬಸವರಾಜ್, ವೆಂಕಟೇಶ್,ಪ್ರಸನ್ನ, ಮಂಜುನಾಥ್, ಶ್ರೀಕಾಂತ್ ಮತ್ತು ಇತರರು ಇದ್ದರು.