ಸಿಬ್ಬಂದಿಗಳ ದಕ್ಷ ಸೇವೆಯಿಂದಾಗಿ ಠಾಣೆಗೆ ಗೌರವ ದೊರೆತಿದೆ: ಪಂಚಮುಖ
ಮಾನ್ವಿ:ತಾಲ್ಲೂಕಿನ ಜನರ ಸಹಕಾರದಿಂದ ಹಾಗೂ ಠಾಣೆಯ ಸಿಬ್ಬಂದಿಗಳ ದಕ್ಷ ಸೇವೆಯಿಂದಾಗಿ ಪಟ್ಟಣದ ಪೊಲೀಸ್ ಠಾಣೆಗೆ ಗೌರವ ದೊರೆತಿದೆ ಎಂದು ಪಿ.ಐ.ಮಹದೇವಪ್ಪ ಪಂಚಮುಖಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದವತಿಯಿAದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಟ್ಟಣದ ಪೊಲೀಸ್ ಠಾಣೆಯು ದೇಶದ ಅತ್ಯುತ್ತಮ ಠಾಣೆಯಾಗಿ ಆಯ್ಕೆಯಾಗಿರುವುದಕ್ಕೆ ಹಾಗೂ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಪೊಲೀಸ್ ಅಧಿಕಾರಿಗಳ ಹಾಗೂ ಪೊಲೀಸ್ ಸಿಬ್ಬಂದಿಗಳು ಸಲ್ಲಿಸುತ್ತಿರುವ ಸೇವೆ ಕಾರಣ ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಆರ್.ಮುತ್ತುರಾಜ್ ಶೆಟ್ಟಿ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. ಉಪಾಧ್ಯಕ್ಷರಾದ ಡಿ.ರಾಘವೇಂದ್ರ ಶೆಟ್ಟಿ, ಕಾರ್ಯದರ್ಶಿ ಬಿ.ರಾಘವೇಂದ್ರ ಶೆಟ್ಟಿ, ಜಿ.ರಾಮಾಂಜನೇಯ ಶೆಟ್ಟಿ, ಆರ್.ಪುರುಷೋತ್ತಮ ಶೆಟ್ಟಿ, ಆರ್.ದ್ವಾರಕನಾಥ್ ಶೆಟ್ಟಿ,ಬಿ.ಸತ್ಯನಾರಾಯಣ ಶೆಟ್ಟಿ, ಎಂ.ವೆAಕಯ್ಯ ಶೆಟ್ಟಿ, ಬಿ.ಟಿ. ಆಂಜನೇಯ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.