ಬಿಜೆಪಿಯವರ ಸುಳ್ಳಿನ ಮಾತಿಗೆ ಮರಳಾಗದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ : ಮಾಜಿ ಸಚಿವ ಸಂತೋಷ್ ಲಾಡ್
ಹರಪನಹಳ್ಳಿ:ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು ಬಿಜೆಪಿಯರವ ಮಾತಿಗೆ ಮರಳಾಗದೇ ವಿಧಾನ ಪರಿಷತ್ತಿನ ಕಾಂಗ್ರೆಸ್ ಅಭ್ಯಾರ್ಥಿಯಾದ ಕೆ.ಸಿ.ಕೊಂಡಯ್ಯ ರವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ಕೊಡಿಸಿ ಎಂದು ತಾಲೂಕಿನ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಪಟ್ಟಣದ ತೆಗ್ಗಿನ ಮಠ ಸಂಸ್ಥಾನದ ಸಭಾ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ವಿಧಾನ ಪರಿಷತ್ತ್ ಚುನಾವಾಣೆ ಪ್ರಚಾರದಲ್ಲಿ ತಾಲೂಕಿನ ಚುನಾಯಿತ ಪ್ರತಿನಿಧಿಗಳಿಗೆ ಮತಯಾಚನೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಏರೆಯುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಈಗ ಬಿಜೆಪಿಯವರು ನಾವು ಮಾಡಿದ್ದು ಎಂದು ಹೇಳಿಕೊಂಡು ಸುಳ್ಳು ಪ್ರಚಾರಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ದೇಶದಲ್ಲಿ ಗ್ರಾಮ ಪಂಚಾಯತಿ ಎಂದು ನಾಮಕರಣ ಮಾಡಿದ್ದು ಅಂದಿನ ಕಾಂಗ್ರೆಸ್ ಸರ್ಕಾರವೆ ಹೋರತು ಯಾವ ಬಿಜೆಪಿ ಪಕ್ಷವಲ್ಲ ದೇಶಕ್ಕೆ ಗ್ರಾಮಪಂಚಾಯತಿ ವಿಕೇಂದ್ರ ಕರಣ ಮಾಡಿ ಅಧಿಕಾರ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಹೇಳಿ. ದೇಶಕ್ಕೆ ನರೆಗಾ ಯೋಜನೆ ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ ಎಂದು ವಿಶ್ಲೇಷಿಸಿದರು. ಮಿಸಲಾತಿ ವಿಚಾರದಲ್ಲಿ ಹಸ್ತಕ್ಷೆಪಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ತೀರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಲು ನಿಮ್ಮ ಚುನಾಯಿತ ಪ್ರತಿನಿಧಿ ಗಳಿಗೆ ಹೇಳಿ ಎಂದರು.
ದಾವಣಗೇರಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಟಿ. ಸುಭಾಷ್ ಚಂದ್ರ ಮಾತನಾಡಿ, ಹರಪನಹಳ್ಳಿಯಲ್ಲಿ ದ್ವೇಷರಾಜಕಾರಣ ನಡೆಯುತ್ತಿದೆ. ಯಾರೇ ಇರಲಿ ತಮ್ಮ ವೈಯಕ್ತಿಕ ವಿಚಾರವನ್ನು ಬದಿಗೋತ್ತಿ ಪಕ್ಷ ಸಂಘಟನೆಗಾಗಿ ಎಲ್ಲಾರೂ ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರು ಅವರ ಪರವಾಗಿ ಪಕ್ಷಸಂಘಟನೆ ಮಾಡಬೇಕಾಗಿದೆ ತಾಲೂಕಿನ ಬಣ ರಾಜಕೀಯದಿಂದ ಪಕ್ಷ ಸಂಘಟನೆ ಕುಗ್ಗುತ್ತಿದೆ ಆದ್ದರಿಂದ ಎಲ್ಲಾರೂ ಕಾಂಗ್ರೆಸ್ ಪಕ್ಷಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಗಾಗಿ ಸಂಘಟಿಸೋಣ ಎಂದು ಸಲಹೆ ನೀಡಿದರು. ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್, ಮಾತನಾಡಿದರು.
ಈ ಸಂದರ್ಭದಲ್ಲಿ ಸಂಡೂರು ಶಾಸಕ ಈ.ತುಕರಾಂ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿಸ್ವಾಮಿ, ಮುಖಂಡರಾದ ಮುಂಡರಿಗಿ ನಾಗರಾಜ್, ಸಿದ್ದು ಹಳ್ಳೇಗೌಡ, ನಿಖಿಲ್ ಕೊಂಡಜ್ಜಿ, ವೆಂಕಟೇಶ್, ವಕೀಲರಾದ ಹಲಗೇರಿ ಮಂಜುನಾಥ್, ನೀಲಗುಂದ ವಾಗೀಶ್, ಮೂಸಾಸಾಬ್, ಪುಷ್ಪಾ ದಿವಾಕರ್, ಇರ್ಫಾನ್, ರಫೀಕ್, ಆನಂದ , ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು.