ವಾಲ್ಮೀಕಿ ಜಾತ್ರೆಗೆ ಅನುದಾನ ನೀಡದಂತೆ ಬುಡಕಟ್ಟು ಸಮುದಾಯದ ಮುಖಂಡರ ಆಗ್ರಹ
ಹರಪನಹಳ್ಳಿ: ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ವಾಲ್ಮೀಕಿ ಜಾತ್ರೆಗೆ ನೀಡ ದಂತೆ ಆಗ್ರಾಹಿಸಿ ತಾಲೂಕು ಬುಡಕಟ್ಟು ಸಮು ದಾಯದ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕು ಮಿನಿವಿಧಾನ ಸೌಧಕ್ಕೆ ತೆರಳಿದ ಬುಡಕಟ್ಟು ಸಮುದಾಯದ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಸಂಘಟನಕಾರರು ಆರ್ಥಿಕವಾಗಿ ಹಿಂದುಳಿದಿರುವ ಬುಡಕಟ್ಟು ಸಮುದಾಯಕ್ಕಾಗಿ ಮೀಸಲಿಟ್ಟಿ ರುವ ಹಣವನ್ನು ಯಾವುದೇ ಕಾರಣಕ್ಕೂ ನೀಡಬಾರದು ಒಂದು ವೇಳೆ ನೀಡಿದರೆ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ಸಂಚಾಲಕ ವಕೀಲ ಬಿ. ಕರಿಯಪ್ಪ, ನಾಗರಾಜನಾಯಕ ಡಿ, ಓಬಪ್ಪ, ದ್ವಾರಕೇಶ್, ಕೃಷ್ಣಪ್ಪ, ಮಂಜುನಾಥ್, ಮಲ್ಲಿಕಾರ್ಜುನ್, ವೆಂಕಟೇಶ್, ಡಿಳ್ಯಾಪ್ಪ, ವಿ. ಮಲ್ಲಿಕಾರ್ಜುನ್, ಕಾಮಣ್ಣ, ಬಿ. ಮೂಗಪ್ಪ, ಬಿ. ಪಾಲಪ್ಪ, ಮತ್ತು ಇತರರು ಇದ್ದರು.