ಸಾಹಿತ್ಯದ ಬಹುತ್ವ ಪ್ರತಿಭೆ ಚನ್ನಪ್ಪ ಕಟ್ಟಿ: ಗೀತಯೋಗಿ
ಇಂಡಿ:ಸಂಯಮ, ಸೃಜನಶೀಲತೆಯ ಆಯಾಮಗಳಿಂದ ಸಾಹಿತ್ಯ ಕಟ್ಟಿದ ಸಿಂದಗಿಯ ಡಾ.ಚನ್ನಪ್ಪ ಕಟ್ಟಿ ಅವರು ಸಾಹಿತ್ಯಕ್ಷೇತ್ರದ ಎಲ್ಲ ಪ್ರಾಕಾರಗಳಲ್ಲಿ ಅದ್ಭುತವಾದ ಸಾಹಿತ್ಯ ಕೃಷಿ ಮಾಡಿದವರು ಹಾಗೂ ಪ್ರಸ್ತುತ ಈ ನಾಡಿನ ಹೆಸರಾಂತ ಕಥೆಗಾರ, ವಿಮರ್ಶಕ, ಕವಿ, ಅನು ವಾದಕರಾಗಿ  ಕನ್ನಡ ಸಾಹಿತ್ಯದ ಓದಿಗೆ ಹೊಸ ದಾರಿಗಳನ್ನು ಸೃಷ್ಟಿ ಮಾಡುವ ಮೂಲಕ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸುವಲ್ಲಿ ನಿರತರಾದವರು ಡಾ. ಚನ್ನಪ್ಪ ಕಟ್ಟಿಯವರು ಎಂದು ಸಾಲೋಟಗಿಯ ಸಾಹಿತಿ ಗಳಾದ ಗೀತಯೋಗಿ ಹೇಳಿದರು.
ಅವರು ಇಂದು ಇಂಡಿ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ವತಿಯಿಂದ ಜರುಗಿದ “ಡಾ.ಚನ್ನಪ್ಪ ಕಟ್ಟಿ ಅವರ ಸಾಹಿತ್ಯ ದರ್ಶನ” ಕುರಿತು ಆನ್ ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಸಗರಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಪುರಸ್ಕೃತರಾದ ಕಟ್ಟಿಯವರು ಸಿಂದಗಿಯ ಪೋರವಾಲ್ ಕಾಲೇಜನಲ್ಲಿ 30 ವರ್ಷ ಉಪಾಧ್ಯಾಯ ವೃತ್ತಿ ಮಾಡಿ ಸಹಸ್ರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತಂತ್ರ-ತಿರುವು-ಧ್ವನಿಪೂರ್ಣವಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳನ್ನು ಒಟ್ಟೊಟ್ಟಿಗೆ ಪರಿಶೀಲಿಸಿ ವಿಮರ್ಶೆ ಮಾಡಿ,ಸಂಶೋಧನೆ ಮಾಡಿದ ಕಟ್ಟಿ ಅವರ ಚಾಣಾಕ್ಷತನ ಆದರ್ಶಪ್ರಾಯವಾದುದು.
ರಾಷ್ಟ್ರನಾಯಕರ ಚಿಂತನೆಗಳಿಗೆ ತಮ್ಮ ಕೃತಿಗಳಲ್ಲಿ ಪ್ರಾಧಾನ್ಯತೆ ನೀಡಿದ ಅವರು ಸಾಹಿತ್ಯವು ಸಮಾಜದ ವಿವಿಧ ಸಮುದಾಯಗಳೊಂದಿಗೆ ಪ್ರಭಾವ ಬೀರುತ್ತದೆ ಎಂಬು ದನ್ನು ವ್ಯಕ್ತ ಪಡಿಸಿದ ರೀತಿ ಅಮೋಘವಾದುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟಣ್ಣವರ ಮಾತನಾಡಿ, ವಿವಿಧ ಪರಂಪರೆಗಳ ಬೆಳಕಿನಲ್ಲಿ ಸಾಹಿತ್ಯ ವನ್ನು ಅರಿಯುವ ಪ್ರಯತ್ನ ಸಾಗಿಸಿದ ಡಾ.ಕಟ್ಟಿ ಅವರು ಸಾಹಿತ್ಯ ಅಧ್ಯಯನಗಳು ಸಮಾಜದ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ಸೂಚಿಸುವಂತಿರಬೇಕು ಎಂಬ ಅಂಶವನ್ನು ಕೃತಿಗಳಲ್ಲಿ ಬಿಂಬಿಸಿದ್ದು ಗಮನಾರ್ಹವಾಗಿದೆ ಎಂದು ಹೇಳಿದರು.
ಡಾ. ಬಸವರಾಜ ಡೋಣೂರ, ಸಿದ್ದಲಿಂಗ ದೇವರು, ಸಂಶೋಧಕರಾದ ಡಿ ಎನ್ ಅಕ್ಕಿ, ಡಾ.ಎಂ ಎಂ ಪಡಶೆಟ್ಟಿ, ಬಿ ಆರ್ ಪೊಲೀಸ್ ಪಾಟೀಲ, ಡಾ. ರಮೇಶ ಕತ್ತಿ, ದೊಡ್ಡಪ್ಪ ಭಜಂತ್ರಿ, ಮಹೇಶ ಡೆoಬ್ರೆ, ರಾಘವೇಂದ್ರ ಕುಲಕರ್ಣಿ, ಬಸವರಾಜ ಕಿರಣಗಿ, ಬಸವರಾಜ ಗೋರನಾಳ, ಎ ಜಿ ಚೌಧರಿ, ಶ್ರೀಧರ ಹಿಪ್ಪರಗಿ, ಈರಣ್ಣ ಕಂಬಾರ, ವೈ ಜಿ ಬಿರಾದಾರ, ಲಕ್ಷ್ಮಣ ಝಳಕಿ, ಡಾ. ರಾಜಶ್ರೀ ಮಾರನೂರ, ರಾಜೇಶ್ವರಿ ಕೋಳೆಕರ, ನಿಂಗನಗೌಡ ದೇಸಾಯಿ,ಸಿದ್ರಾಮಪ್ಪ ಮಾರನೂರ ಸೇರಿದಂತೆ ಸಾಹಿತಿಗಳು, ಸಾಹಿತ್ಯಾಸಕ್ತರು ಭಾಗವಹಿ ಸಿದ್ದರು.
ಸಾಹಿತಿ ಸಂತೋಷ ಬಂಡೆ ಸ್ವಾಗತಿಸಿದರು, ಸಾಹಿತಿ ಸಿ ಎಂ ಬಂಡಗರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.