ಕರಾಟೆಯಲ್ಲಿ ಚಿನ್ನದ ಪದಕ ಪಡೆದ ನಿಹಾರಿಕ
ಪಾವಗಡ: ಗಡಿ ತಾಲೂಕಿನ ನಾಗಚಂದ್ರ ಎಂಬವರ ಪುತ್ರಿ ನಿಹಾರಿಕಾ ದೆಹಲಿಯಲ್ಲಿ ನಡೆದ ಕರಾಟೆಯ ದಕ್ಷಿಣ ಕೊರಿಯಾವನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಪಾವಗಡ ಹಾಗೂ ರಾಜ್ಯಕ್ಕೆ ಹೆಸರು ತಂದಿರುವ ನಾಗಚಂದ್ರ ಜೈನ್ ರವರ ಮಗಳಿಗೆ ಅಭಿನಂದನೆ ಗಳ ಸುರಿಮಳೆಯಾಗಿದೆ.
ಸ್ಥಳೀಯ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ. ಸಂಸದ ಎ.ನಾರಾಯಣ ಸ್ವಾಮಿ, ಮಾಜಿ ಶಾಸಕರುಗಳಾದ ಸೂಮ್ಲನಾಯ್ಜ್, ಕೆ.ಎಂ.ತಿಮ್ಮರಾಯಪ್ಪ, ಸಮಾಜ ಸೇವಕರಾದ ಕೃಷ್ಣನಾಯ್ಕ್, ರಾಮಾಂಜಿನಪ್ಪ, ನಾಗೇಂದ್ರ, ಹೆಲ್ಮ್ ಸೊಸೈಟಿ ಅಧ್ಯಕ್ಷ ಶಶಿಕಿರಣ್ ಇತರರು ಅಭಿನಂದನೆಗಳು ಸಲ್ಲಿಸಿದ್ದಾರೆ.