ಸಮಾಜದಲ್ಲಿ ಯಾರನ್ನು ಕಡೆಗಾಣಿಸಬೇಡಿ ಎಲ್ಲರನ್ನು ಗೌರವಿಸಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಹರಪನಹಳ್ಳಿ:ಸಮಾಜದಲ್ಲಿ ಯಾರನ್ನು ಕಡೆಗಾಣಿಸಬೇಡಿ ಎಲ್ಲಾರನ್ನು ಗೌರವಿಸಿ ಅಂಬೇಡ್ಕರ್ ಅವರು ಸಂವಿಧಾನ ಬರೆಯದೇ ಹೋಗಿದ್ದರೆ ನನ್ನಂತವರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗುತ್ತಿರಲಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ಪಟ್ಟಣದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾ ಶ್ರಯದಲ್ಲಿ ಅಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ದರು.
ಪದ್ಮಶ್ರೀ ಪ್ರಶಸ್ತಿಯ ಮೌಲ್ಯನೇ ಗೊತ್ತಿಲದ ನನ್ನಂತವರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್, ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಎಲ್ಲಾರಿಗೂ ಆವಕಾಶ ಸಿಗುತ್ತಿದೆ ಎಂದು ತಿಳಿಸಿದರು.
ನೀವು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ನನಗೆ ದೆಹಲಿಯಿಂದ ಪೋನ್ ಕರೆ ಬರುತ್ತೆ ನಾನು ಯಾರೋ ತಮಾಷೆ ಮಾಡುತ್ತಾರೆಂದು ಪೋನ್ ಕಟ್ ಮಾಡಿದೆ, ಮತ್ತೆ ಪೋನ್ ಕರೆ ಬರಲು ಪ್ರರಂಭವಾದವು ನನಗೆ ಆಶ್ಚರ್ಯ ಏನಿಸಿತು ತಕ್ಷಣ ದೆಹಲಿಗೆ ಬರಲು ಹೇಳಿದರು ಆಗ ನಾನು ಮೊದಲ ಬಾರಿಗೆ ವಿಮಾನ ದಲ್ಲಿ ಪ್ರಯಾಣ ಮಾಡಿ ರಾಷ್ಟçಪತಿಯವರಿಂದ ಪ್ರಶಸ್ತಿ ಪಡೆದುಕೊಂಡ ಸಂದರ್ಭವನ್ನ ಮರೆಯಲು ಸಾದ್ಯವಿಲ್ಲ ಎಂದು ವೇದಿಕೆಯಲ್ಲಿ ಹಂಚಿಕೊ0ಡರು.
ನಾನು ಯಾವ ಸಮಾಜದಿಂದ ಅವಮಾನ ತಿರಸ್ಕಾರಕ್ಕೆ ಒಳಗಾಗಿದ್ದೆ ಇಂದು ಅದೇ ಸಮಾಜದಲ್ಲಿ ನಾನು ಪುರಸ್ಕಾರ, ಸನ್ಮಾನ ಪಡೆದುಕೊಳ್ಳುತ್ತಿದ್ದೇನೆ, ಎಂದ ಅವರು ನಾನು ಬಸ್ ಸೀಟ್‌ನಲ್ಲಿ ಕುಳಿತುಕೊಂಡರೆ ಯಾರು ನನ್ನ ಹತ್ತಿರ ಬಂದು ಕುಳಿತುಕೊಳ್ಳುತ್ತಿರಲಿಲ್ಲ ಭಯ ಪಡುತ್ತಿದ್ದರು, ಇಂದು ಅದೇ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಟೀಕೆಟ್‌ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿಗೆ ಅಭಿನಂದನೆಗಳು ಎಂದು ನನ್ನ ಹೆಸರು ಬರುತ್ತದೆ ಎಂದು ನೋವು ತೊಡಿ ಕೊಂಡರು.
ಹಿರಿಯ ಸಿವಿಲ್ ನ್ಯಾಯಧೀಶೆ ಎಂ. ಭಾರತಿ ಮಾತನಾಡಿ, ಸಮಾಜದಲ್ಲಿ ನಾವುಗಳು ಘನತೆಯಿಂದ ಬಾಳಬೇಕು ಮನುಷ್ಯ ಮನುಷ್ಯರಿಂದ ಬೇರ್ಪಡಿಸಬಾರದು ಬೇರೆಯವರ ಘನತೆಗೆ ದಕ್ಕೆ ತರುವಂತ ಕೆಲಸ ಯಾರು ಕೂಡ ಮಾಡಬಾರದು ಸಮಾಜದಲ್ಲಿ ಮಾನಸಿಕ ಬದಲಾವಣೆಯಿಂದ ಹೋರಬಂದು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ತೀಯ ಲಿಂಗಿಗಳೆ0ದು ಸಮಾಜದಿಂದ ಅವರನ್ನು ದೂರ ಮಾಡಲು ಪ್ರಯತ್ನಿಸಿದರೆ ಮತ್ತು ಅವರನ್ನು ಸಮಾಜ ಒಪ್ಪಿಕೊಳ್ಳದಿದ್ದರೆ ಅವರು ಅನಿವಾರ್ಯವಾಗಿ ಬಿಕ್ಷಾಟನೆ, ಸೆಕ್ಸ್ ವರ್ಕ್ರ್‌ಗಳಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಿರಿಯ ಸಿವಿಲ್ ನ್ಯಾಯದೀಶೆ ಎಂ.ಭಾರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು, ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಚಂದ್ರೆಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯದೀಶರು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಫಕ್ಕಿರವ್ವ ಕೆಳಗೆರೆ, ಅಪಾರ ಸರ್ಕಾರಿ ವಕೀಲ ವಿ.ಜಿ ಪ್ರಕಾಶ್‌ ಗೌಡ, ಸಹಾಯಕ ಸರ್ಕಾರಿ ಅಭಿಯೊಜಕರಾದ ಮಿನಾಕ್ಷಿ, ನಿರ್ಮಲ, ಹಿರಿಯ ವಕೀಲರಾದ ಎಂ.ಅಜ್ಜಣ್ಣ, ಟಿ.ವೆಂಕಟೇಶ್, ಬಸವರಾಜ್, ದೇವದಾಸಿ ಪುರ್ನವಸತಿ ಯೋಜನೆ ಅನುಷ್ಠಾನಾಧಿಕಾರಿ ಪ್ರಾಜ್ಞಾಜಯರಾಜ್, ಮಂಜುಳಾ , ಸೀಮಾ, ದ್ರಕ್ಷಾಯಣಿ, ಸೇರಿದಂತೆ ಇತರರು ಇದ್ದರು.