ಡಿ.೧೫ ಕ್ಕೆ ಶ್ರೀ ವರಸದೋಜಾ ಶಿವಾಚಾರ್ಯ ಸ್ವಾಮಿಗಳ ೬ನೇ ವರ್ಷದ ಪಟ್ಟಾಧಿಕಾರ ವಾರ್ಷಿಕೋತ್ಸವ ಸಮಾರಂಭ
ಹರಪನಹಳ್ಳಿ:ಮಧ್ಯ ಕರ್ನಾಟಕದ ಶೈಕ್ಷಣಿ ಕ್ರಾಂತಿಯನ್ನೆ ಬಿತ್ತಿದ ಹರಪನಹಳ್ಳಿ ತೆಗ್ಗಿನ ಮಠ ಸಂಸ್ಥಾನದ ಶ್ರೀ ಲಿಂಗೈಕ್ಯ ಚಂದ್ರಮೌಳೀಶ್ವರ ಶಿವಾಚಾರ್ಯಸ್ವಾಮಿಜಿಗಳ ರವರ ೭ನೇ ವಾರ್ಷಿಕ ಪುಣ್ಯರಾಧನೆ, ಹಾಗೂ ಶ್ರೀ ವರಸದೋಜ್ಯಾತ ಶಿವಾಚಾರ್ಯ ಮಹಾ ಸ್ವಾಮಿಗಳ ೬ನೇ ವರ್ಷದ ಪಟ್ಟಾಧಿಕಾರದ ಸಮಾ ರಂಭೋತ್ಸವ ಕಾರ್ಯಕ್ರಮವನ್ನು ತೆಗ್ಗಿನ ಮಠ ಸಂಸ್ಥಾನದ ಆವರಣದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದು ತೆಗ್ಗಿನ ಮಠ ಸಂಸ್ಥಾನ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರಯ್ಯ ತಿಳಿಸಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥಾನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ತೆಗ್ಗಿನ ಮಠ ಸಂಸ್ಥಾನವನ್ನು ಮಧ್ಯ ಕರ್ನಾಟಕದ ಶೈಕ್ಷಣಿಕ ಕ್ರಾಂತಿ ಎಂದು ಕರೆಯುತ್ತಾರೆ ಈ ಸಂಸ್ಥೆಯ ವಿಧ್ಯಾಸಂಸ್ಥೆಯಲ್ಲಿ ಅನೇಕ ಬಡ ವಿಧ್ಯಾರ್ಥಿಗಳು ಶಿಕ್ಷಣವನ್ನು ಪಡೆದುಕೊಂಡು ಉನ್ನತ ಸ್ಥಾನದಲ್ಲಿದ್ದಾರೆ ಇಂತಹ ಸಂಸ್ಥೆಯ ಕೀರ್ತಿ ಯನ್ನು ಉಳಿಸಿ ಬೆಳೆಸಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಡಿ.೧೫, ಮತ್ತು ೧೬ ರಂದು ನಡೆಯಲಿರುವ ಶ್ರೀಮಠದಿಂದ ಆರೋಗ್ಯ ತಪಾಸಣೆ ಶಿಬಿರ. ಪ್ರಶಸ್ತಿ ಪ್ರಧಾನ ಸಮಾರಂಭ, ವೀರಮಾಹೇಶ್ವರರಿಗೆ ಶಿವದೀಕ್ಷೆ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ರಂಭಾಪುರಿ ಜಗದ್ಗುರುಗಳ ಮಂಗಲ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಪಾಧಿಸಿದರು.
ಡಿ.೧೫ ರಂದು ಶ್ರೀಮಠದ ಆವರಣದಲ್ಲಿ ಎಸ್.ಸಿ.ಎಸ್. ಔಷಧ ಮಹಾವಿಧ್ಯಾಲಯ , ಹರಪನಹಳ್ಳಿ ಹಾಗೂ ಎಸ್.ಎಸ್.ಐ.ಎಂ.ಎಸ್- ಸ್ವರ್ಶ್ ಮತ್ತು ನಾರಯಣ ಹೃದಯಾಲಯದ ಸಹಯೋಗದೊಂದಿಗೆ ಉಚಿತ ಕೀಲು ಮೂಳೆ ತಪಾಸಣೆ ಮತ್ತು ಹೃದಯ ರೋಗ ತಪಾಸಣೆ ಶಿಬಿರ ನಡೆಯಲಿದ್ದು ತಾಲೂಕಿನ ಸಾರ್ವಜನಿಕರು ಸದುಪಯೋಗ ಪಡಿಸಿಕೋಳ್ಳಬೇಕು ಎಂದರು.
ಈ ಸದಂರ್ಭದಲ್ಲಿ ಶ್ರೀ ವರಸದೋಜ್ಯಾತ ಶಿವಾರ್ಚಾ ಮಹಾಸ್ವಾಮಿಗಳು, ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಟಿ.ಎಂ. ರಾಜಶೇಖರ್ ಇದ್ದರು.