ಜ್ಞಾನೇಂದ್ರ ಸಂಭಾವಿತ ವ್ಯಕ್ತಿ, ನನಗೆ ಗೃಹ ಖಾತೆ ಕೊಟ್ಟು ನೋಡಲಿ: ಯತ್ನಾಳ
ವಿಜಯಪುರ: ಕೋಮು ಗಲಭೆಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಅವರು ನನಗೆ ಗೃಹ ಖಾತೆ ಕೊಟ್ಟು ನೋಡಲಿ ಎಂದು ವಿಜಯಪುರ ಶಾಸಕಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಶನಿವಾರ ಮಾತನಾಡಿ, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಭಾವಿತ ವ್ಯಕ್ತಿ. ಅವರಿಗೆ ಕಂದಾಯ, ಅರಣ್ಯ ಖಾತೆಗಳು ಸೂಕ್ತ ಎಂದರು.
ದೇಶ ಬಾಂಧವರು ದೇಶ ವಿರೋಧಿ ಕೃತ್ಯದಲ್ಲಿ ತೊಡಗುವವರು ಎಂದಿಗೂ ನಮ್ಮ ಅಣ್ಣ- ತಮ್ಮಂದಿ ರಾಗಲು ಸಾಧ್ಯವಿಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುತ್ತಿವೆ. ಮತೀಯ ಭಾವನೆ ಕೆರಳಿಸುವ ಗಲಾಟೆಗಳು ಹೆಚ್ಚುತ್ತಿವೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಏನಾಗಿದೆ. ಇಂಥ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದೇನೆ. ಮೆತ್ತಗೆ ಮಾತನಾಡಿದರೆ ಅರ್ಥವಾಗುವುದಿಲ್ಲ, ಇದರಿಂದ ಕಾನೂನು ಪಾಲನೆ ಅಸಾಧ್ಯ. ನನಗೆ ಗೃಹ ಖಾತೆ ಕೊಟ್ಟರೆ ಕೋಮು ಗಲಭೆಯ ಮಾತಿರಲಿ, ಒಬ್ಬನೂ ಕಮಕ್ ಕಿಮಕ್ ಎನ್ನದಂತೆ ಮಾಡುತ್ತೇನೆ ಎಂದರು.