ದೇಶವನ್ನು ಕಟ್ಟುವುದಕ್ಕೆ ಕಾರ್ಮಿಕರಿಂದ ಮಾತ್ರ ಸಾಧ್ಯ: ವಕೀಲರ ಸಂಘದ ಅಧ್ಯಕ್ಷ ಕೆ.ಜಗದಪ್ಪ
ಹರಪನಹಳ್ಳಿ :ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ದೇಶದ ಕಾರ್ಮಿಕರಿಂದ ಮಾತ್ರ ಸಾಧ್ಯ. ಕಾರ್ಮಿಕರ ರಕ್ಷಣೆಗೆಸರ್ಕಾರ ಗಳು ಮುಂದಾಗಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ ಪ್ರತಿಪಾದಿಸಿದರು.
ಪಟ್ಟಣದ ರಾಜೀವ್ ಗಾಂಧಿ ಸಭಾಂಗಣದಲ್ಲಿ ಬುಧವಾರ ತಾಲೂಕು ಕರ್ನಾಟಕ ರಾಜ್ಯ ಕಟ್ಟಡ ಮಟ್ಟವ, ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘಟನೆಯಿಂದ ಆಯೋಜಿಸಲಾಗಿದ್ದ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾಲೆಂಡರ್ ಬಿಡುಗಡೆಮಾಡಿ ಬಳಿಕ ಮಾತನಾಡಿದರು.
ಕಾರ್ಮಿಕರು ದೇಶವನ್ನು ಕಟ್ಟುವಂತ ಕಾರ್ಮಿಕರಾಗಿ , ನಿಮ್ಮ ಮಕ್ಕಳನ್ನು ಶಿಕ್ಷಣ ಕೋಡಿಸಿ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ದೇಶದ ಅಭಿವೃದ್ದಿಗಾಗಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಕಾರ್ಮಿಕರ ಸಂಘಟ ನೆಯ ಪೋಷಕರಿಗೆ ಮನವಿ ಮಾಡಿದರು.
ಹೆಚ್.ಎಂ.ಸಂತೋಷ, ಮಾತನಾಡಿ ಕೆಲವು ಸಂಘಟನೆಗಳು ಅನ್ಯ ಮಾರ್ಗದ ಮೂಲಕ ಕಾರ್ಮಿಕರಿಗೆ ದಾರಿತಪ್ಪಿಸುತ್ತಿದ್ದಾರೆ ಇಂತಹ ಸಂಘಟನೆಯಿಂದ ದೂರವಿದ್ದು ಪ್ರಮಾಣಿಕ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುವ ಹಂತಹ ಸಂಘಟನೆಯನ್ನು ಬೆಂಬಲಿಸಿ ಸಂಘಟನೆಗೆ ಒಂದಾಗಿ ಹೋರಾಟವನ್ನು ಸರಿ ದಾರಿಗೆ ತರುವಂತಹ ಕೆಲಸಮಾಡಬೇಕು ಎಂದು ಹೇಳಿದರು.
ಸಾಹಿತಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ದೇಶಕ್ಕಾಗಿ ಬೇವರು ಸುರಿಸು ತ್ತಿರುವ ಕಾರ್ಮಿಕರ ಕಾರ್ಯ ಶ್ಲಾಘನೀಯ, ನಾನು ಒಬ್ಬ ಶಿಕ್ಷನಾಗಿದ್ದೆ ಈಗ ಸಮಾಜದ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಪ್ರಗತಿ ಪರರಲ್ಲಿ ಗುರಿ ಒಂದೇ ಆಗಿರಲಿ ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು, ಒಂದು ಸಂಘಟನೆಯಿಂದ ಸಮಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಎಂದರು.
ಸಂದರ್ಭದಲ್ಲಿ ರಾಜ್ಯ ಸಂಘಟನೆಯ ಮುಖಂಡ ಹೆಚ್.ಎಂ.ಸಂತೋಷ, ಸಂಘಟನೆಯ ಪ್ರಧಾನ ಕಾರ್ಯದರ್ಶಿ. ಗುಡಿಹಳ್ಳಿ ಹಾಲೇಶ್, ಸಂಘಟನೆಯ ಗೌರವ ಅಧ್ಯಕ್ಷ ಜಕಣಚಾರಿ,ಅಧ್ಯಕ್ಷ ದಾದಪೀರ್, ಸಂಘಟನೆಯ ಕಾರ್ಯದರ್ಶಿ ಬಳಿಗನೂರು ಕೋಟ್ರೇಶ್, ಉಪಾಧ್ಯಕ್ಷ ಕೋಟೆಪ್ಪ ಮಾತನಾಡಿದರು. ದ್ವಾರಕೀಶ್, ಹಾಗೂ ಕಾರ್ಯಮಿಕ ಸಂಘಟನೆಯ ಮುಖಂಡರು ಹಾಜರಿದ್ದರು.,