ದಟ್ಟ ಮಂಜು: ಟಿ.ಬೇಗೂರು ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ
ತುಮಕೂರು:ನೆಲಮಂಗಲ ಮತ್ತು ಟಿ.ಬೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಕಂಡು ಬಂದಿತ್ತು.
ಬೆಳಗ್ಗೆಯಿಂದಲೂ ಮಂಜು ಕವಿದ ವಾತಾವರಣ ಇದ್ದ ಕಾರಣ ಈ ರೀತಿ ಸರಣಿ ಅಪಘಾತ ನಡೆದಿದೆ. ಟೆಂಪೋ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಂದರ ಹಿಂದೊಂದರಂತೆ ಸರಣಿ ವಾಹನಗಳು ಡಿಕ್ಕಿ ಹೊಡೆದಿದೆ.
ಸುಮಾರು ಮೂರು ಕಿ.ಮೀ ಗಟ್ಟಲೇ ವಾಹನ ದಟ್ಟಣೆ ಕಂಡು ಬಂದಿತ್ತು. ಸರಣಿ ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಟ ಪಡುವಂತಾಯಿತು.