ಜ, 1ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ: ಎಸ್.ಎಂ.ಶಾನವಾಜ್
ಮಾನ್ವಿ:ಜನಶಕ್ತಿ ಕೇಂದ್ರ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳನ್ನು ಒಳಗೊಂಡAತೆ ಶಾಸಕರ ಭವನದ ಎದುರುಗಡೆ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಜ, 1ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಮೇಜರ್ ಶಾನವಾಜ್ ಕಲ್ಯಾಣ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಎಂ.ಶಾನವಾಜ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ತಾಯಿ-ಮಕ್ಕಳ ಆಸ್ಪತ್ರೆ ಪೂರ್ಣಗೊಂಡು ಒಂದು ವರ್ಷವಾದರೂ ಇನ್ನು ಉದ್ಘಾಟಿಸದೆ ಇರುವುದರಿಂದ ಜನರ ಬಳಕೆಗೆ ಲಭ್ಯವಾಗದೆ ರೋಗಿಗಳು ಪಟ್ಟಣದ ಹೊರವಲಯದಲ್ಲಿನ ಸರಕಾರಿ ಆಸ್ಪತ್ರೆಗೆ ಹೊಗಲು ಪ್ರಾಯಾಸ ಪಡುವಂತಾಗಿದ್ದರು. ಜನಪ್ರತಿನಿಧಿಗಳು ನಿರ್ಲಕ್ಷ ವಹಿಸು ತ್ತಿರುವುದು ಸರಿಯಲ್ಲ ಹಾಗೂ ತಾಲ್ಲೂಕಿನಲ್ಲಿ ಸ್ಥಳಂತಾರ ಗೊಂಡಿರುವ ಗ್ರಾಮಗಳಾದ ದೇವಿಪುರ, ಚೀಕಲಪರ್ವಿ, ಯರಮಲದೊಡ್ಡಿ ಬಸವಣ್ಣ ಕ್ಯಾಂಪ್, ಲಕ್ಕಂದಿನ್ನಿ,ಜಿಲಾಪೂರು ಕ್ಯಾಂಪ್ ಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಅಭೀವೃದ್ಧಿ ಪಡಿಸಬೇಕು.
ತಾಲ್ಲೂಕಿನಲ್ಲಿ ಕೆಲವರು ವಕ್ಫ್ ಆಸ್ತಿಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದು ಅಂತಹ ಆಸ್ತಿಗಳನ್ನು ಪುನಃ ಸರಕಾರದ ವಶಕ್ಕೆ ಪಡೆಯಬೇಕು, ಪಟ್ಟಣದಲ್ಲಿ ಡಾ.ಬಿ.ಆರ್.ಅಬೇಡ್ಕರ್ ಮತ್ತು ಜಗಜೀವನರಾಮ್ ಭವನ ನಿರ್ಮಿಸಬೇಕು ಎನ್ನುವ ಬೇಡಿಕೆಗಳನ್ನು ಇಟ್ಟುಕೊಂಡು ಮೇಜರ್ ಶಾನವಾಜ್ ಕಲ್ಯಾಣ ಕರ್ನಾಟಕ ಸಂಘ, ದಲಿತ ಸಂಘರ್ಷ ಸಮಿತಿ, ಆಧಿಜಾಂಬವ ಜನ ಸಂಘ, ಕರ್ನಾಟಕ ಮಹಾಸಭಾ, ಅಬ್ರಾಹಿಂ ಪನ್ನೂರು, ಯೇಸುರಾಜ್,ಈರಣ್ಣ, ಜಯರಾಜ್ ಕೊಡ್ಲಿ, ರಾಮು ದೊಡ್ಡಿ, ಹನುಮಂತ ಮಾನ್ವಿ, ಸುರೇಶ ಜಲಾಲಪೂರ, ಮೈನುದ್ದೀನ್, ಶಂಕರ ಜಗ್ಲಿ ಇದ್ದರು.