ನರೇಗಾ ಯೋಜನೆಯಲ್ಲಿ ಪರದಾರ್ಶಕತೆ ಮೂಡಿಸಲಾಗುವುದು : ವಿರೇಶ
ಮಾನ್ವಿ:ನರೇಗಾ ಯೋಜನೆ ಆಡಿಯಲ್ಲಿ ಪರದಾರ್ಶಕತೆ ಮೂಡಿಸಲು ಕೂಲಿ ಕಾರ್ಮಿಕರ ಹಾಜರಾತಿಯನ್ನು ಪ್ರತಿದಿನ ಮೇಟಿಗಳು ಅನ್ಲೈನ್ ಮೂಲಕವೇ ತೆಗದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಹಾಗೂ ದಾಖಲಾತಿಗಳನ್ನು ಅಧಾರ ಸಿಡಿಂಗ್ ಮಾಡಲಾಗುವುದು ಎಂದು ತಾಲ್ಲೂಕ ಐ.ಇ.ಸಿ ಸಂಯೋಜಕ ವಿರೇಶ ತಿಳಿಸಿದರು.
ತಾಲ್ಲೂಕಿನ ಜಾನೇಕಲ್ ಗ್ರಾಮದಲ್ಲಿನ ಹಳ್ಳದಲ್ಲಿ ಕೈಗೊಂಡಿರುವ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಜಾನೇಕಲ್ ಗ್ರಾಮ ಪಂಚಾಯತಿ ವತಿಯಿಂದ ನಡೆದ ರೋಜಾಗಾರ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತರು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ ಮೂಲಕ ನೀಡುವ ವೈಯುಕ್ತಿಕ ಕಾಮಗಾರಿಗಳ ಸದಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಲ್ಲೇಶ ಮಾತನಾಡಿ ಕೂಲಿ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜೋತಿ ಭೀಮ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಸಹಾಯಕರಾದ ವಿರುಪಾಕ್ಷಿ, ಸಿದ್ದಪ್ಪ, ಬಸವ. ಕಿರಣ್ ಹಾಗೂ ಮೇಟಿ ಮತ್ತು ಕೂಲಿಕಾರರು ಇದ್ದರು.