ಸಮರಸಭಾವದ ಜೀವನ ರೂಢಿಸಿಕೊಳ್ಳಿ: ಸಂತೋಷ ಬಂಡೆ
ಇಂಡಿ:ಮನುಷ್ಯನು ಜಾತಿ, ಮತದ ಹೆಸರಿನಲ್ಲಿ ಸಂಕುಚಿತ ಭಾವದಿಂದ ಇನ್ನೊಬ್ಬರ ಮಾನವ ಘನತೆಯನ್ನು ಗೌರವಿಸದೇ, ಕವಲು ದಾರಿಯಲ್ಲಿ ನಡೆಯದೇ ಎಲ್ಲರನ್ನೂ ತನ್ನಂತೆಯೇ ಎಂದು ಭಾವಿಸಿ ಸಮರಸ ಭಾವದಿಂದ ಮುಂದುವರಿಯಬೇಕೆಂಬ ಜೀವನ ಮಾರ್ಗವೇಕುವೆಂಪುರವರ ವಿಶ್ವಪಥವಾಗಿದೆ ಎಂದು ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ದರು.
ಹುಟ್ಟುತ್ತಾ ವಿಶ್ವಮಾನವನಾಗಿಯೇ ಇರುವ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಮತ ಜನಾಂಗ, ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಕರ್ತವ್ಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಟಿಜಿಟಿ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,ಸಾಮಾಜಿಕ ಅಸಮಾನತೆ, ಜಾತಿ, ಮತ, ಅನಕ್ಷರತೆ, ಮೌಢ್ಯಗಳನ್ನು ಬುಡಸಮೇತ ಕಿತ್ತಹಾಕಲು ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,ಕುವೆಂಪು ಅವರ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ, ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು. ಎಸ್ ಬಿ ಹೆಬ್ಬಾಳ, ನರಸಮ್ಮ ದಳವಾಯಿ, ಬೇಗಂ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.