ಫಲಾನುಭವಿಗಳಿಗೆ ಕೊಳವೆಬಾವಿಯ ಪಂಪು, ಮೋಟರ್ ಸೇರಿ ಪೂರಕ ಸಾಮಗ್ರಿ ವಿತರಣೆ
ಹರಪನಹಳ್ಳಿ:ಪಟ್ಟಣದ ಬಾಬು ಜಗಜೀವನ್‌ರಾಮ ಭವನದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳಿಂದ ಆಯ್ಕೆಯಾದ ಒಟ್ಟು ೩೧ ಅರ್ಹ ಫಲಾನುಭವಿಗಳಿಗೆ ಕೊಳವೆಬಾವಿಯಪಂಪು, ಮೋಟರ್ ಸೇರಿದಂತೆ ಇತರೆ ಪೂರಕ ಸಾಮಾಗ್ರಿಗಳನ್ನು ಶಾಸಕ ಜಿ.ಕರುಣಾಕರರೆಡ್ಡಿ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದ ಹಿರೇಕೆರಿಯನ್ನು ಮಾದರಿಯಾಗಿ ಅಭಿವೃದ್ಧಿ ಗೊಳಿಸಲು ಈಗಾಗಲೇ ಕ್ರೀಯಾ ಯೋಜನೆಯನ್ನು ತಯಾರಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಾನು ಕೂಡ ಸಚಿವ ಆಕಾಂಕ್ಷಿ: ಸಂಪುಟ ವಿಸ್ತರಣೆ ಅಥವಾ ಪುನರಚನೆ ಸಂದರ್ಭದಲ್ಲಿ ನಾನು ಒಬ್ಬ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಆ ನಿಟ್ಟಿನಲ್ಲಿ ನನ್ನ ಪ್ರಯತ್ನವಿರುತ್ತದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ನಂತರ ವಿಸ್ತರಣೆಯಾಗಬಹುದು ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಕೆರೆಗಳಿಗೆ ಸೇರ್ಪಡೆಗೆ ಕ್ರಮ: ಕೆರೆಗಳಿಗೆ ನೀರು ತುಂಬಿಸುವ ಕುರಿತು ಕೆಲಸ ಪ್ರಗತಿಯಲ್ಲಿದೆ, ಕೆಲವು ಭಾಗದ ರೈತರಿಂದ ಸಮಸ್ಯೆಯಾಗಿದೆ ಆದಷ್ಟು ಆ ಸಮಸ್ಯೆಯನ್ನು ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
ನಾವು ಹಿಂದೆ ಸಚಿವರಾಗಿದ್ದಾಗ ತಾಲೂಕಿನ ೬೦ ಕೆರೆಗಳಿಗೆ ತುಂಬಿಸುವ ಬಗ್ಗೆ ಪ್ರಸ್ತಾವನೆಯನ್ನು ಕಳಿಸಲಾಗಿತ್ತು, ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ ೫೦ ಕೆರೆಗಳಿಗೆ ಮಾತ್ರ ಸೀಮಿತಗೊಳಿಸಿ, ೧೦ ಕೆರೆಗಳನ್ನು ಕೈಬಿಡಲಾಗಿದ್ದು ಈ ಬಗ್ಗೆ ಕೆಲವು ರೈತರು ನಮ್ಮ ಕೆರೆಗಳಿಗೂ ನೀರು ತುಂಬಿಸುವ0ತೆ ಮನವಿ ಮಾಡಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಉಳಿದ ೧೦ ಕೆರೆಗಳಿಗೆ ನೀರು ತುಂಬಿಸಲು ಕ್ರಮವಹಿಸಲಾಗುವುದು ಎಂದರು.
ಖರೀದಿ ಕೇಂದ್ರ ಆರಂಭ: ರಾಗಿ ಖರೀದಿ ಕೇಂದ್ರ ಆರಂಭಿಸುವAತೆ ಸಾಕಷ್ಟು ರೈತರಿಂದ ಬೇಡಿಕೆ ಇದ್ದು, ಈಗಾಗಲೇ ಖರೀದಿ ಕೇಂದ್ರ ಆರಂಭ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಸಂಬAಧಿಸಿದ ಅಧಿಕಾರ ಬಳಿ ಮಾತನಾಡಿದು,್ದ ಕೂಡಲೇ ಆರಂಭ ಮಾಡಲಾಗುವುದು ಎಂದು ಹೇಳಿದರು.
ಹರಪನಹಳ್ಳಿ ಪಟ್ಟಣದಲ್ಲಿ ೨ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಳಿಸಲು ಹಿರೇಕೆರಿಯಲ್ಲಿ ನದಿ ನೀರು ಸಂಗ್ರಹಿಸಿ ಕ್ರಮವಹಿಸಲು ಚಿಂತನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸತ್ತೂರು ಹಾಲೆಶ್, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ತಾಂಡ ಅಭಿವೃದ್ಧಿ ನಿಗಮ ನಿರ್ದೇಶಕ ಎಸ್.ಪಿ.ಲಿಂಬ್ಯನಾಯ್ಕ, ಮುಖಂಡರಾದ ಎಂ.ಪಿ.ನಾಯ್ಕ, ಸಣ್ಣ ಹಾಲಪ್ಪ, ಆರ್.ಲೋಕೇಶ್, ಮಲ್ಲೇಶ್, ಭಂಗಿ ಚಂದ್ರಪ್ಪ, ಯುಪಿನಾಗರಾಜ, ರಾಘವೇಂದ್ರಶೆಟ್ಟಿ, ಮಂಜ್ಯನಾಯ್ಕ, ಡಿವೈಎಸ್‌ಪಿ ಹಾಲಮೂರ್ತಿರಾವ್, ಅರುಣಕುಮಾರ, ಮಂಜುಳಾ, ಅಭಿವೃದ್ಧಿ ನಿಗಮದ ಅಧಿಕಾರಿಗಳು ಇತರರು ಇದ್ದರು.