ಅಜಾಗರೂಕತೆಯ ಚಾಲನೆ: ೬ ತಿಂಗಳು ಶಿಕ್ಷೆ, ೧೦ ಸಾವಿರ ದಂಡ
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ
ಹರಪನಹಳ್ಳಿ :ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿ ಮೋಟರ್ ಸೈಕಲ್ ನಲ್ಲಿ ಬರುತ್ತಿದ್ದ ಯುವಕನಿಗೆ ಡಿಕ್ಕಿ ಹೊಡಿಸಿ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಜೆ.ಎಂ.ಎಫ್.ಸಿ. ಹಿರಿಯ ನ್ಯಾಯಾಲಯದ ನ್ಯಾಯಾ ಧೀಶೆ ಎಂ. ಭಾರತಿಯವರು ೬ ತಿಂಗಳ ಕಾರಾಗೃಹವಾಸ ೧೦. ಸಾವಿರ ರೂ. ದಂಡ ವಿಧಿಸಿ ತಿರ್ಪು ನೀಡಿದ್ದಾರೆ.
ತಾಲ್ಲೂಕಿನ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ, ಭಾರತಿಯ ದಂಡ ಸಂಹಿತೆ ಕಲಂ. ೨೭೯, ೩೦೪(ಎ), ಮೋಟರು ವಾಹನ ಕಾಯ್ದೆ ಕಲಂ.೧೮೭ ರ ಅಡಿಯಲ್ಲಿ ಪ್ರಕಣವನ್ನು ದಾಖಲು ಮಾಡಲಾ ಗಿತ್ತು. ಈ ಪ್ರಕರಣವು ಆರೋಪಿಯಾದ ಲಾರಿ ಚಾಲಕನು ಯರಬಾಳು ಮಾರ್ಗ ವಾಗಿ ಅತಿವೇಗವಾಗಿ ಹಾಗೂ ಅಜಾಗರುಕತೆಯಿಂದ ನಿರ್ಲಕ್ಷೆಯಿಂದ ಮೋಟರ್ ಸೈಕಲ್ ನಲ್ಲಿ ಬರುತ್ತಿದ್ದ ಅನಂದಪ್ಪ ಮತ್ತೂರು ಮಾರ್ಗ ವಾಗಿ ಬರುತ್ತಿರುವಾಗ ಲಾರಿ ಚಾಲಕನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಪಡಿಸಿದ ಪರಿಣಾಮ ಸ್ಥಳದಲ್ಲೇ ಅನಂದಪ್ಪ ಎಂಬ ಯುವಕ ಮೃತಪಟ್ಟಿದ್ದನು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದಾಗ ಆರೋಪಿತನ ವಿರುದ್ಧ ಆರೋಪ ಸಾಬೀತು ಆದ ಹಿನ್ನಲೆಯಲ್ಲಿ ಲಾರಿ ಚಾಲಕ ಆರೋಪಿಗೆ ೬ ತಿಂಗಳು ಕಾರಗೃಹವಾಸ, ಶಿಕ್ಷೆ ಹಾಗೂ ೧೦. ಸಾವಿರ ರೂ. ಗಳ ದಂಡವನ್ನು ವಿಧಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ ರವರು ಪ್ರಕರಣದ ವಾದ ಮಂಡಿಸಿದ್ದರು.
