ಇ.ಒ ಪ್ರಕಾಶ್ ನಾಯ್ಕಗೆ, ಕರ್ನಾಟಕ ಸೇವಾ ರತ್ನ ಪ್ರಶಸ್ತಿ : ಅಭಿನಂದನೆ
ಹರಪನಹಳ್ಳಿ:ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿAಗ್ ಮತ್ತು ಸಾಂಸ್ಕಿçತಿಕ ಅಕಾಡೆಮಿ ಕೊಡುವ ಕನ್ನಡ ನಾಡು, ನುಡಿ, ನೆಲ, ಜಲ, ಕಲೆ ಮತ್ತು ಸಾಹಿತ್ಯ ಗ್ರಾಮೀಣಾಭಿವೃದ್ಧಿಗಾಗಿ ರಾಜ್ಯದ ಇಂಜಿನಿಯರ್ ಮತ್ತು ಪ್ರತಿಭವಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಬಂಜಾರ್ ಸಮಾಜದಹಿರಿಯರು ಹಾಗೂ ತಾಲೂಕು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಕೆ.ಆರ್. ಪ್ರಕಾಶ್ ನಾಯ್ಕ ಇವರಿಗೆ ಬಂಜಾರ್ ಸಮಾಜದ ಹಿರಿಯ ಮುಖಂಡರಿOದ ಸನ್ಮಾನಿಸಲಾಯಿತು.
ಪಟ್ಟಣದ ಸಂತ ಶ್ರೀ ಸೇವಾಲಾಲ್ ಸಮುದಾಯ ಭವನದಲ್ಲಿ ಬಂಜಾರ್ ಸಮಾಜದ ವತಿಯಿಂದ ಆಯೋಜಿಸ ಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಇ.ಒ ಕೆ.ಆರ್. ಪ್ರಕಾಶ್ ನಾಯ್ಕನಿಗೆ ಬಂಜಾರ್ ಸಮಾಜದ ಹಿರಿಯ ಮುಖಂಡರು ಪ್ರೀತಿಯಿಂದ ಆಹ್ವಾನಿಸಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಭಜನರಾದ ಪ್ರಕಾಶ್ ನಾಯ್ಕರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಂಡ ಅಭಿವೃದ್ಧಿ ನಿಗಮದ ನಿರ್ಧೇಶರಾದ ಎಸ್.ಪಿ. ಲಿಂಭ್ಯಾನಾಯ್ಕ, ತಾಲೂಕು ಪಂಚಾತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಸಮಾಜದ ಮುಖಂಡರಾದ ಬಿ, ವೈ, ವೆಂಕಟೇಶ್ ನಾಯ್ಕ, ಇಂಜನಿಯರ್‌ಗಳಾದ ಕುಭೇಂದ್ರನಾಯ್ಕ, ಪ್ರಕಾಶ್ ನಾಯ್ಕ ,ಡಾ|| ಕಠಾರ ಲಕ್ಷö್ಮಣನಾಯ್ಕ, ಆನಂದನಾಯ್ಕ, ಚಂದ್ರನಾಯ್ಕ, ಮೇಗ್ಯನಾಯ್ಕ, ಹನುಮಂತನಾಯ್ಕ, ಜಗ್ಯನಾಯ್ಕ, ಪಂಪಾನಾಯ್ಕ, ಮಾಂತೇಶ್ ನಾಯ್ಕ, ರವಿನಾಯ್ಕ, ಗಾಂಗ್ಯ ನಾಯ್ಕ, ರಾಜುನಾಯ್ಕ, ವಿಜಯನಾಯ್ಕ, ಉಮೇಶ್ ನಾಯ್ಕ, ಮತ್ತು ಸಮಾಜದ ಮುಖಂಡರು ಉಪಸ್ಥೀತರಿದ್ದರು.