ಪೊಲೀಸ್ ಠಾಣೆ ಜನಸ್ನೇಹಿಯಾಗಬೇಕು: ಶಾಸಕ ಕರುಣಾಕರರೆಡ್ಡಿ
ಹರಪನಹಳ್ಳಿ:ಸಾರ್ವಜನಿಕರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಪೋಲೀಸ್ ಠಾಣೆ ಜನಸ್ನೇಹಿ ಯಾಗಿ ಕಾರ್ಯನಿರ್ವಹಿಸಬೇಕು ಎಂದು ಇಲ್ಲಿಯ ಶಾಸಕ ಜಿ.ಕರುಣಾಕರರೆಡ್ಡಿ ತಿಳಿಸಿದರು.
ಅವರು ಪಟ್ಟಣದ ಪೋಲೀಸ್ ಬಡಾವಣೆಯಲ್ಲಿ ಪೋಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಪೋಲೀಸರು ರಾಜಕೀಯ ಮಾಡಬಾರದು, ಕಾಂಗ್ರೆಸ್ ಮೈಂಡ್, ಬಿಜೆಪಿ ಮೈಂಡ್ ಆಗದೆ ಸಾರ್ವಜನಿಕ ಮೈಂಡ್ ನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಇಲ್ಲಿಯ ಡಿವೈಎಸ್ಪಿ ಕಚೇರಿಗೆ ೧೧ ಲಕ್ಷ ರು.ಗಳ ವೆಚ್ಚದಲ್ಲಿ ವಾಹನ ಸೌಲಭ್ಯ ಕಲ್ಪಿಸಲು ನನ್ನ ಅನುದಾನ ಒದಗಿಸಿದ್ದೇನೆ ಎಂದ ಅವರು ಪಟ್ಟಣದಲ್ಲಿ ಪೋಲೀಸ್ ವಸತಿಗೃಹಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲು ಸಂಬAಧ ಪಟ್ಟವರಿಗೆ ಶಾಸಕರು ಸೂಚಿಸಿದರು.
ಈಗ ನಿರ್ಮಿಸುತ್ತಿರುವ ಪೋಲೀಸ್ ಠಾಣೆ ಕಟ್ಟಡದ ಕಾಮಗಾರಿ ಗುಣ ಮಟ್ಟದಿಂದ ಕೂಡಿರಬೇಕು ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲೀಸ್ ಇಲಾಖೆಗೆ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇದೆ, ಪೋಲೀಸರ ಕೆಲಸ ಕಷ್ಟದ ಕೆಲಸ ಎಂದ ಅವರು ಪೋಲೀಸರು ಸಾರ್ವಜನಿಕರಿಗೆ, ಸಾರ್ವಜನಿಕರು ಪೋಲೀಸರಿಗೆ ಪರಸ್ಪರ ಗೌರವ ಕೊಡಬೇಕು ಎಂದು ಹೇಳಿದರು.
ವಿಜಯನಗರ ಜಿಲ್ಲಾ ಪೋಲೀಸ್ ವರಿಷ್ಟಾಽಕಾರಿ ಡಾ.ಕೆ.ಅರುಣ್ ಮಾತನಾಡಿ ೨.೮೦ ಕೋಟಿ ರು.ವೆಚ್ಚದಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ಪೋಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣವಾಗುತ್ತಲಿದ್ದು, ಪಿಎಸ ಐ, ಸಿಪಿಐ ಕಚೇರಿಗಳು ಹಾಗೂ ಮೀಟಿಂಗ್ ಹಾಲ್ ಒಳಗೊಂಡಿವೆ ಎಂದು ತಿಳಿಸಿದರು.
ಡಿವೈಎಸ್ಪಿ ವಿ.ಎಸ್ .ಹಾಲಮೂರ್ತಿರಾವ್ ಮಾತನಾಡಿ ಪೋಲೀಸ್ ಬಡಾವಣೆಯಲ್ಲಿ ಪರೇಡ್ ಮಾಡಲು ಮೈದಾನ ಹಾಗೂ ಉದ್ಯನವನ ನಿರ್ಮಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ , ಸಿಪಿಐ ನಾಗರಾಜ ಎಂ.ಕಮ್ಮಾರ, ಪಿಎಸ್‌ಐ ಪ್ರಕಾಶ್, ಪ್ರಶಾಂತ, ನಾಗರಾಜ, ಪುರಸಭಾ ಮುಖ್ಯಾಽಕಾರಿ ಎರಗುಡಿ ಶಿವಕುಮಾರ,ಸದಸ್ಯರಾದ ಕಿರಣ್ ಶಾನ್ ಬಾಗ್, ರೊಕ್ಕಪ್ಪ, ಜಾವೇದ್ , ಬಿಜೆಪಿ ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ನಿಟ್ಟೂರು ಸಣ್ಣ ಹಾಲಪ್ಪ, ಆರ್ .ಲೋಕೇಶ, ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ.ಕಣವಿಹಳ್ಳಿ ಮಂಜುನಾಥ, ಡಿಸ್ ವೆಂಕಟೇಶ ಇತರರು ಪಾಲ್ಗೊಂಡಿದ್ದರು.