ಕಾಡಿನಿಂದ ನಾಡಿನ ಕಡೆಗೆ ಬಂದು, ಸಂಸ್ಕೃತಿಯ ಕಡೆ ಹೆಜ್ಜೆ ಇಟ್ಟ ಬಂಜಾರರು
282 ನೇ ವರ್ಷದ ಸಂತ ಶ್ರೀಸೇವಾಲಾಲ್ ಮಹಾರಾಜರ ವ್ರತಯಾತ್ರೆ
ಹರಪನಹಳ್ಳಿ:ಊರುಗಳಿಂದ ದೂರದಲ್ಲಿ ತಾಂಡಾಗಳನ್ನು ಕಟ್ಟಿಕೊಂಡು ವಾಸವಾಗಿರುವ ಲಂಬಾಣಿಗರು ತಮ್ಮದೇ ಆದ ಸಾಂಸ್ಕೃತಿಕ ಪರಂಪರೆ ಯನ್ನು ಹೊಂದಿದ್ದಾರೆ. ಆಧುನಿಕತೆಯ ಪ್ರಭಾವದಿಂದ್ದಾರೆ. ಆಧುನಿಕತೆಯ ಪ್ರಭಾವದಿಂದ ಭಾರತದ ಅನೇಕ ಬುಡಕಟ್ಟುಗಳನ್ನು ತಮ್ಮ ಅನನ್ಯತೆ ಯನ್ನು ಕಳೆದುಕೋಳ್ಳುತ್ತೀರುವ ಈ ಸಂದರ್ಭದಲ್ಲಿ ಲಂಬಾಣಿ ಬುಡಕಟ್ಟು ತನ್ನ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಎಂದು ರಾಜ್ಯಯುವ ಕಾಂಗ್ರೆಸ್ ಕಾರ್ಯದರ್ಶಿ ಪಿ.ಟಿ.ಭರತ್ ಪ್ರತಿಪಾದಿಸಿದರು.
ಪಟ್ಟಣದ ಬಾಣಗೇರಿಯ ಮುಖ್ಯ ರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿ ಯಿಂದ ಆಯೋಜಿಸಲಾಗಿದ್ದ ೨೮೨ನೇ ಸಂತ ಶ್ರೀ ಸೇವಾಲಾಲ್ ಮಹಾರಾಜ್ ರವರ ಭಾವ ಚಿತ್ರಕ್ಕೆ ಪುಷ್ಟನಮನ ಅರ್ಫಿಸಿ ಬಳಿಕ ಮಾತನಾಡಿದ ಅವರು, ಬಂಜಾರ್ ಸಮುದಾಯ ಕಾಡಿನಿಂದ ನಾಡಿನ ಕಡೆ ತಮ್ಮ ಸಂಸ್ಕೃತಿ ಯನ್ನು ವಸ್ತ್ರದಲ್ಲಿ ತೋರಿಸುತ್ತಾ ರಂಗುರಂಗಿನ ಬಟ್ಟೆಯನ್ನು ಬಟ್ಟೆಯುಟ್ಟು ಮೈತುಂಬ ಆಭರಣಗಳನ್ನು ಧರಿಸಿರುವ ಈ ಜನಾಂಗದ ಸ್ತ್ರೀಯರನ್ನು ಗಮನಿಸಿದರೆ ಸಾಕು ಅವರ ಸಂಸ್ಕೃತಿಯು ಕಣ್ಣಿಗೆ ಕಟ್ಟುತ್ತದೆ. ಉತ್ತರ ಭಾರತದ ರಾಜಸ್ಥಾನದ ಮೂಲದವರಾದ ಬಂಜಾರರು ಯಾವುದೋ ಕಾರಣದಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಪಸರಿಸಿದ್ದು, ತಮ್ಮದೇ ಆದ ವಿಶಿಷ್ಟ ಸಂಸ್ಕೃತಿತಿ ಹಾಗೂ ಪರಂಪರೆಗಳನ್ನು ಕಾಪಾಡಿ ಕೊಂಡು ಬಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರಾಗಿದ್ದರೂ ಸಾಹಿತ್ಯ, ಸಂಸ್ಕೃತಿತಿ ಕಲೆಗಳಿಗೆ ಬಂಜಾರರಲ್ಲಿ ಬರವಿಲ್ಲ.ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಹೆಚ್. ಪಿ.ಪರಶುರಾಮಪ್ಪ ಮಾತನಾಡಿ, ಬಂಜಾರರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಹೆಸರಿನಲ್ಲಿ ಮಾಲೆಯನ್ನು ಧರಿಸಿಕೊಂಡು ಪಾದಯಾತ್ರೆ ವ್ರತವನ್ನು ಮಾಡುತ್ತಾ ಬಂಜಾರ್ ಭಜನಿ ಗಾಯನದ ಮೂಲಕ ಅನ್ಯಧರ್ಮಿಯ ಬಂಧುಗಳು ತಮ್ಮ ಸಂಸ್ಕೃತಿಯನ್ನು ಖುಷಿಯಿಂದ ಅಚಾರ ವಿಚಾರವನ್ನು ಹಂಚಿಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರೇಮ್ ಕುಮಾರ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶಶಿಧರ್ ಪೂಜಾರ್, ಹೆಚ್.ಕೆ. ಹಾಲೇಶ್, ತಿಮ್ಮನಾಯ್ಕ, ಪುರಸಭೆ ಸದಸ್ಯರಾದ ಜಾಕೀರ್ ಸರ್ಕಾವಸ್, ಭರತ್, ಗಿಡ್ಡಳ್ಳಿ ನಾಗಾರಜ್, ಕುಲಮಿ ಅಬ್ದುಲ್, ಖುಷಿದ್ ಅಹಮದ್, ರಿಯಾಜ್ ಅಹ್ಮದ್, ಯುವ ಮುಖಂಡ, ಟಿ. ಪ್ರವೀಣ್ ಕುಮಾರ್, ಟಿ. ಯರಿಸ್ವಾಮಿ, ಮಾಂತೇಶ್ ನಾಯ್ಕ, ಆರ್. ಮಂಜುನಾಥ್, ರಂಜಿತ್ ಪೂಜಾರ್, ಮತ್ತು ಇತರರು ಹಾಜರಿದ್ದರು.