ಮಾನವನಿಗೆ ಪಂಚೇಂದ್ರಿಗಳಂತೆ ನಾಗರೀಕ ಪ್ರಜ್ಞೆ ಬಹಳ ಮುಖ್ಯ: ನ್ಯಾಯಾಧೀಶೆ ಎಂ.ಭಾರತಿ
ಹರಪನಹಳ್ಳಿ:ಮಾನವನಿಗೆ ಪಂಚೇಂದ್ರಿಯಗಳಂತೆ ನಾಗರೀಕ ಪ್ರಜ್ಞೆ ಕೂಡಾ ತುಂಬಾ ಮಹತ್ವದ್ದಾಗಿದೆ. ಶಿಕ್ಷಕನಲ್ಲಿ ಪೌರತ್ವ ಗುಣದ ಮಹತ್ವ ಹಾಗೂ ಗೌರವ ಎರಡೂ ಹೇರಳವಾಗಿರಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿಹೇಳಿದರು.
ಪಟ್ಟಣದ ಜ್ಞಾನಗಂಗೋತ್ರಿ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹರಪನಹಳ್ಳಿ ಹಾಗೂ ಟಿ.ಎಂ.ಎ.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಹರಪನಹಳ್ಳಿ ಇವರ ಸಂಯುಕ್ತಾ ಶ್ರಯದಲ್ಲಿ ಪೌರತ್ವ ತರಬೇತಿ ಶಿಬಿರ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆಯಿಂದ ಸಾರುವುದೇ ಪ್ರಜಾಪ್ರಭುತ್ವ ಇಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ರವರು ಸೇರಿದಂತೆ ಅನೇಕ ಮಹಾನೀಯರು ದೇಶಕ್ಕಾಗಿ ಅನೇಕ ಕೊಡುಗೆಯನ್ನು ನೀಡಿದ್ದಾರೆ ಅವರ ಅನುಯಾಯಿಗಳಾಗಿ ನಾವು ಆದರ್ಶ ಬಧುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆಯಿಂದ ಜೊತೆಗೆ ಶಿಕ್ಷಕರ ಸನ್ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರಿ ಮುಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಹಾಗೂ ಸಿವಿಲ್ ನ್ಯಾಯಾಲಯದ ನ್ಯಾಯಾ ಧೀಶರಾದ ಫಕ್ಕಿರವ್ವ ಕೆಳಗೇರಿ ಮುಖ್ಯತಿಥಿಯ ನೂಡಿಯನ್ನಾಡಿದ ಅವರು, ಸಮಾಜದಲ್ಲಿ ಯಾವುದೇ ವ್ಯಕ್ತಿ ಅತ್ತö್ಯತ್ತಮವಾಗಿ ಉನ್ನತ ಹುದ್ದೆ ಅಲಂಕರಿಸಿದರು ಶಿಕ್ಷಕರ ಪಾತ್ರ ಬಹಳ ಮುಖ್ಯ. ಪ್ರಶಿಕ್ಷಣಾರ್ಥಿಗಳು ಆತ್ಮವಿಶ್ವಾಸದಿಂದ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಸೃಜನಶೀಲ ವ್ಯಕ್ತಿಯಾಗಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಪೌರತ್ವ ತರಬೇತಿಯ ಶಿಬಿರದ ಉದ್ದೇಶ ಸಮುದಾಯದ ಜೀವನದ ಅರಿವನ್ನುಂಟುಮಾಡುವುದು, ಗ್ರಾಮೀಣ ಜನರೊಂದಿಗೆ ಬೆರೆಯುವುದು ಮತ್ತು ಗ್ರಾಮೀಣ ಜನರ ಜೀವನ ಮತ್ತು ಸಮಸ್ಯೆಗಳನ್ನು ತಿಳಿಯುವ ಅವಕಾಶ ನೀಡವುದು, ಸಹಕಾರ ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆಯ ಮನೋ ಭಾವನೆಯನ್ನು ಬೆಳೆಸುವುದು, ಪ್ರಶಿಕ್ಷಣಾರ್ಥಿಗಳಲ್ಲಿ ಸಂಘಟನೆ, ಸಹಭಾಗಿತ್ವ ಮತ್ತು ಸಮಾನತೆಯ ಗುಣಗಳನ್ನು ಬೆಳಸುವುದೇ ಪೌರತ್ವ ತರಬೇತಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ವಕೀಲರ ಸಂಘದಅಧ್ಯಕ್ಷರಾದ ಕೆ. ಜಗದಪ್ಪ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಹಕ್ಕು ಹಾಗೂ ಕರ್ತವ್ಯಗಳನ್ನು ಅರಿಯಬೇಕು, ಪ್ರಶಿಕ್ಷಣಾರ್ಥಿ ಗಳು ದೇಶದ ಭಾವಿ ಪ್ರಜೆಗಳಾಗಿದ್ದಾರೆ. ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಟಿ.ಎಂ.ಎ.ಇ. ಶಿಕ್ಷಣ ಸಂಸ್ಥೆಯ ಕಾರ್ಯಧರ್ಶಿ ಟಿ.ಎಂ. ಚಂದ್ರಶೇಖರಯ್ಯ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್‌ಗೌಡ, ಬಿ.ಇಡಿ.ಕಾಲೇಜ್ ಪ್ರಾಚಾ ರ್ಯರು ಟಿ.ಎಂ. ರಾಜಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕರಾದ, ಮಿನಾಕ್ಷಿ ಎನ್. ನಿರ್ಮಲ.ಡಿ. ವಕೀಲರ ಸಂWದ, ಕಾರ್ಯದರ್ಶಿ, ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಎಂ.ಮೃತAಜಯ್ಯ, ಬಿ. ಗೋಣಿಬಸಪ್ಪ, ದ್ರಾಕ್ಷಯಣಿ, ಬಂಡ್ರಿ ಕೆ.ಆನಂದ ಕೆ. ಕೋಟ್ರೇಶ್, ನ್ಯಾಯಾಲಯದ ರೇವಣಸಿದ್ದಪ್ಪ, ಬಸವರಾಜ, ಕೋಟ್ರೇಶ್, ಮತ್ತು ಇತರರು ಉಪಸ್ಥಿತರಿದ್ದರು.