ಕ್ರೀಡೆಯಿಂದ ಆರೋಗ್ಯ ವೃದ್ಧಿ: ಶಶಿಧರ್ ಪೂಜಾರ್
ಹರಪನಹಳ್ಳಿ:ನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯರಾಗಬೇಕು. ನಿರಂತರ ಕ್ರೀಡಾಬ್ಯಾಸದಿಂದ ಮಾನವನ ಬೌದ್ಧಿಕ ವಿಕಾಸದ ಜತೆ ಸಾಮಾಜಿಕ ಆಧ್ಯತ್ಮಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಎಂದು ಫರ್ಲ್ ಪಬ್ಲೀಕ್ ಸಂಸ್ಥೆಯ ಅಧ್ಯಕ್ಷ ಶಶಿಧರ್ ಪೂಜಾರ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರವಿವಾರ ಪ್ರಕೃತಿ ವಿದ್ಯಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಫರ್ಲ್ ಕ್ರಿಕೆಟ್ ಕಾರ್ನಿವಲ್‌ನ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಕ್ರಿಕೆಟ್ ಯುವಕರಿಗೆ ಸ್ಪೂರ್ತಿ ನೀಡಿದ ಅವರು ಕ್ರೀಡೆಯಲ್ಲಿ ಸೋಲು-ಗೆಲುವು ಸಹಾಜ ಅದನ್ನೂ ಯಾರುಕೂಡ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ಕ್ರೀಡಾ ಯುವಕರಿಗೆ ಸ್ಪೂರ್ತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಯುವ ವಕೀಲರಾದ ಎಂ.ಮೃತAಜ್ಯö, ವಿರುಪಾಕ್ಷಪ್ಪ, ಎಂ. ನಾಗೇಂದ್ರಪ್ಪ, ಕೆ. ಪ್ರಕಾಶ್, ಎಸ್. ಜಾಕೀರ್, ಬಿ.ಸಿದ್ದೇಶ್, ಜನವಾಡೆ ಮಂಜುನಾಥ್, ಖಂಡ್ಯಪ್ಪ, ಸಿ. ಹನುಮಂತಪ್ಪ, ತಿಪ್ಪೇಶ್, ಸಿದ್ದೇಶ್, ಶ್ರೀನಿವಾಶ್, ರಾಮಚಂದ್ರ ನಾಯ್ಕ, ಮಾರುತಿ ಮತ್ತು ಇತರರು ಇದ್ದರು.