ರಾಷ್ಟ್ರೀಯ ಲೋಕ ಅದಾಲತ್: ೧೪೩೬ ಪ್ರಕರಣಗಳು: ೧೧೧೯ ಇತ್ಯರ್ಥ
ಹರಪನಹಳ್ಳಿ:ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲೂಕಿನಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಡೆದ ಒಟ್ಟು ೧೪೩೬ ಪ್ರಕರಣಗಳನ್ನು ಕೈಗೆತ್ತಿಕೊಂಡು, ೧೧೧೯ ಪ್ರಕರಣಗಳನ್ನು ಉಭಯ ನ್ಯಾಯಾ ಲಯದನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕಿರವ್ವ ಕೆಳಗೇರಿ, ನ್ಯಾಯಾಧೀಶರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಲೋಕ ಅದಾಲತ್ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ,ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡ೦ತೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ೭೯೧ ಪ್ರಕರಣಗಳ ಪೈಕಿ ೬೧೦ ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು ೮೯,೬೦,೩೭೦-೦೦ ರೂ.ಗಳು ಮತ್ತು ಬ್ಯಾಂಕ್ ದಾವ ಪೂರ್ವ ಪ್ರಕರಣಗಳಲ್ಲಿ ೯.೭೧ ಸಾವಿರ ರೂ. ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು.
ಕಿರಿಯ ಸಿವಿಲ್ ನ್ಯಾಯಾಲಯ ದಲ್ಲಿ ಒಟ್ಟು ೬೬೪ ಪ್ರಕರಣಗಳ ಪೈಕಿ ೫೦೯ ಪ್ರಕಣಗಳನ್ನು ಇತ್ಯರ್ಥ ಪಡೆಸಿ, ಒಟ್ಟು ೧೫,೩೦,೮೬೬-೦೦ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾಲದಲ್ಲಿ ಒಟ್ಟು ೧೧೧೯ ಪ್ರಕರಣಗಳು, ಮತ್ತು ೧,೧೪,೯೧,೨೩೬.-೦೦ ರೂ. ಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ತಾಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದ ಉಭಯ ನ್ಯಾಯಾದೀಶರುಗಳು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಪದಾಧಿಕಾರಿಗಳಿಗೆ, ಹಿರಿಯ ಮತ್ತು ಹಿರಿಯ ನ್ಯಾಯಾವಾದಿಗಳಿಗೆ, ಹಾಗೂ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡ ಎಲ್ಲಾ ಕಕ್ಷಿದಾರರಿಗೆ ಉಭಯ ನ್ಯಾಯಾ ಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಪಕ್ಕಿರವ್ವ ಕೆಳಗೇರಿ, ನ್ಯಾಯಾಧೀಶರುಗಳು ಅಭಿನಂಧನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ, ಕೆ.ಜಗದಪ್ಪ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಸರ್ಕಾರಿ ಅಭಿಯೋಜಕ ರುಗಳಾದ ಮೀನಾಕ್ಷಿ ಎನ್, ನಿರ್ಮಲ, ಹಿರಿಯ ವಕೀಲರಾದ ಗಂಗಾಧರ್ ಗುರುಮಠ್, ಕೆ. ಚಂದ್ರಗೌಡು, ಕೆ.ಬಸವರಾಜ್, ಪಿ. ಜಗಧೀಶ್ ಗೌಡ್ರು, ಆರ್. ರಾಮನಗೌಡ, ಬಿ. ಹಾಲೇಶ್, ಎಸ್.ರುದ್ರಮನಿ, ಕೆ. ಪ್ರಕಾಶ್, ವೀರುಪಾಕ್ಷಪ್ಪ , ಬಿ, ಗೋಣಿಬಸಪ್ಪ, ಬಂಡ್ರಿ, ಆನಂದ, ಮುತ್ತಿಗಿ. ರೇವಣಸಿದ್ದಪ್ಪ, ಎಂ.ಮೃAತಜಯ್ಯ, ಇದ್ಲಿ ರಾಮಪ್ಪ, ಕೆ.ಎಸ್. ಮಂಜ್ಯಾನಾಯ್ಕ, ಜಿ. ಹಾಲೇಶ್, ಓ.ತಿರುಪತಿ, ಕೆ.ಕೊಟ್ರೇಶ್, ಕೆ.ನಾಗರಾಜ್, ನ್ಯಾಯಾಲಯದ ಸಿಬ್ಬಂಧಿಗಳಾದ ಮಂಜುನಾಥ್ ಜನವಾಡೆ, ಶಿವನಂದ್, ಮೇಘ ರಾಜ್, ಮಾರುತಿ, ಜಾಖೀರ್, ವಾಮದೇವ, ಕಂಡ್ಯಪ್ಪ, ತಿಪ್ಪೇಶ್, ಸಿದ್ದೇಶ್, ಮಂಜುನಾಥ್, ಎ.ಮಲ್ಲಪ್ಪ, ರೇವಣಸಿದ್ದಪ್ಪ, ಕೊಟ್ರೇಶ್, ಬಸವರಾಜ್, ಮತ್ತು ಇತರರು ಇದ್ದರು.