ಬೆಂಕಿ ಅವಘಡ: ಮನೆ ಕಳೆದುಕೊಂಡ ರೈತ ಕುಟುಂಬಕ್ಕೆ ಧನ ಸಹಾಯ
ಹರಪನಹಳ್ಳಿ:ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನಹೊನ್ನೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಗ್ರಾಮದ ರೈತ ಆನಂದಪ್ಪ ಎಂಬುವವರಿಗೆ ಸೇರಿದ ಮನೆಯು ಶುಕ್ರವಾರ ತಡರಾತ್ರಿ ಮನೆ ಯಲ್ಲಿ ಯಾರು ಇಲ್ಲದ ಪರಿಣಾಮ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ, ಈ ವೇಳೆ ಮನೆಯಲ್ಲಿ ದ್ದ ಕುರಿಗಳು, ಬಟ್ಟೆ, ಅಡುಗೆ ಪರಿಕರಗಳು ಹಾಗೂ ದವಸ ಧಾನ್ಯಗಳು ಸಂಪೂರ್ಣ ಸುಟ್ಟು ಹೋಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಕುಟುಂಬದ ಮುಖ್ಯಸ್ಥರಾದ ರೈತ ಆನಂದಪ್ಪ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ನಿವೃತ್ತ ಇಂಜಿನಿಯರ್ ಹೆಚ್.ಎಂ.ಮಲ್ಲಿ ಕಾರ್ಜುನ್ ಅವರು ಭೇಟಿ ನೀಡಿ ರೈತ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಇದೇ ವೇಳೆ ಹಾಜರಿದ್ದ ಕಂದಾಯ ಅಧಿಕಾರಿಗಳಿಗೆ ವಸ್ತುಸ್ಥಿತಿ ವರದಿಯನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಲು ಮಲ್ಲಿಕಾರ್ಜುನ್ ಹೇಳಿದರು. ನಂತರ ಸಂಬ0ಧಿಸಿದ ಮೇಲಾಧಿಕಾರಿ ಗಳಿಗೆ ದೂರವಾಣಿ ಕರೆ ಮಾಡಿ ಶೀಘ್ರವೇ ಪರಿಹಾರ ವಿತರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪರುಸಪ್ಪ, ಭೀಮಣ್ಣ, ಲೋಕಪ್ಪ, ನಾಗರಾಜ್, ರಾಮಪ್ಪ, ರಾಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ ಮತ್ತಿತರರು ಹಾಜರಿದ್ದರು.