ದ್ವೇಷದಿಂದ ಏನು ಸಾಧಿಸಲು ಸಾಧ್ಯ: ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ.ಅ0ಜಿನಪ್ಪ
ಹರಪನಹಳ್ಳಿ :ಕಾಂಗ್ರೆಸ್ ಪಕ್ಷದಲ್ಲಿ ದ್ವೇಷ, ಅಸೂಯೆ ರಾಜಕಾರಣ ತಾಂಡವವಾಡುತ್ತಿದ್ದು ಎಲ್ಲರನ್ನು ಒಟ್ಟುಗೂಡಿಸಿ ಕೊಂಡು ಹೋಗುವುದು ಹಿರಿಯ ಮುಖಂಡರಲ್ಲಿ ಬಂದಿಲ್ಲ ಎಂದು ಪುರಸಭಾ ಮಾಜಿ ಅದ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ವಿ.ಅ0ಜಿನಪ್ಪಹೇಳಿದರು.
ತಾಲ್ಲೂಕಿನ ಬಾಗಳಿ ಗ್ರಾಮದ ಶಂಕ್ರಪ್ಪ, ಕೆಂಚಪ್ಪ ಸಮುದಾಯ ಭವನದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಹಾಗೂ ನಿವೃತ್ತ ಕಾರ್ಯಪಾ ಲಕ ಇಂಜಿನಿಯರ್ ಎಚ್ .ಎಂ.ಮಲ್ಲಿಕಾರ್ಜುನ ದಂಪತಿಗಳಿಗೆ ಮತ್ತು ಕಸಾಪ ತಾಲೂಕು ಅದ್ಯಕ್ಷ ಕೆ.ಉಚ್ಚೆಂಗೆಪ್ಪ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆದಿ ಶಕ್ತಿಯಾಗಿ ಬಂದು ಹರಪನಹಳ್ಳಿ ಕಾಂಗ್ರೆಸ್ ಗೆ ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಜೀವ ತುಂಬಿದ್ದಾರೆ. ತಾಲ್ಲೂಕಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡAತೆ ತಿರುಗಿ ಕಾಂಗ್ರೆಸ್ ಪಕ್ಷವನ್ನು ಎಂ.ಪಿ.ಲತಾ ಸಂಘಟಿಸಿದ್ದಾರೆ. ನಾಟಿ ವೈದ್ಯ ಹೊಸೂರಪ್ಪ ಕೀಳು ಮೂಳೆ ತಜ್ಞರಾಗಿ ಹೆಸರು ಮಾಡಿದ್ದಾರಲ್ಲದೆ, ರಾಜಕೀಯ ರಂಗದಲ್ಲೂ ಚಾಪು ಮೂಡಿಸಿದ್ದಾರೆ ಎಂದರು.
ಸನ್ಮಾನಿತರಾಗಿ ಮಾತನಾಡಿದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಚ್ .ಎಂ.ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಕಾರ್ಯ ಕರ್ತನಾಗಿ ಕೆಲಸ ಮಾಡಿ ನಿಮ್ಮ ಜೊತೆಗಿದ್ದು ಪಕ್ಷ ವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು. ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಮಾತನಾಡಿ ನಮ್ಮ ಯಜಮಾನರು ನಿವೃತ್ತಿಯಾಗಿ ರಾಜಕೀಯಕ್ಕೆ ಬಂದಿರುವುದು ನನಗೆ ಬಹಳಷ್ಚು ಸಹಾಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ನಾಟಿ ಹೆಸರಂತ ವೈದ್ಯರು ಹಾಗೂ ಸಮಾಜ ಸೇವಾಕರಾದ, ಕಾಂಗ್ರೆಸ್ ಮುಖಂಡ ಬಿ.ಬಿ.ಹೊಸೂರಪ್ಪ ಅದ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ, ಕುರಬ ಸಮಾಜದ ಅಧ್ಯಕ್ಷ ಬಿ.ಗೋಣಿಬಸಪ್ಪ, ಪುರಸಭಾ ಸದಸ್ಯರುಗಳಾದ ಟಿ. ವೆಂಕಟೇಶ, ಗೊಂಗಡಿ ನಾಗರಾಜ, ಗ್ರಾ.ಪಂ ಅಧ್ಯಕ್ಷೆ ಕೊಟ್ರಮ್ಮ, ಉಪಾದ್ಯಕ್ಷೆ ಗೀತಮ್ಮ, , ಬಾಗಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ. ಮಂಜುನಾಥ, ಮುಂಡರುಗಳಾದ ಬಡಮ್ಮನವರ ಸಣ್ಣ ಹನುಮಂತಪ್ಪ, ಎಚ್ .ಮಹಮದ್ ಇಬ್ರಾಹಿಂ, ಹುಲಿಕಟ್ಟಿ ಚಂದ್ರಪ್ಪ, ಭರಮನಗೌಡ, ಹರಿಯಮ್ಮನಹಳ್ಳಿ ಶಿವರಾಜ, ಉದಯಶಂಕರ, ಪ್ರಸಾದ್ ಕಾವಡಿ, ಕನಕನಬಸ್ಸಾಪುರ ಮಂಜುನಾಥ, ಎಚ್ .ವಸಂತಪ್ಪ, ಮಾಗಳದ ನೀಲಮ್ಮ, ರೇಣುಕಮ್ಮ, ಚಿಕ್ಕಳ್ಳಿ ಮಂಜಣ್ಣ,ಎಚ್ .ಗೌರಮ್ಮ ಸೇರಿದಂತೆ ಇತರರಿದ್ದರು.