ಪಕ್ಷ ಸಂಘಟನೆಯಲ್ಲಿ ಎಲ್ಲರೂ ತೊಡಗಿಕೊಳ್ಳಿ : ಬಾಲರಾಜ್ ಗುತ್ತೇದಾರ್
ಸೇಡಂ:ಸೇಡಂ ವಿಧಾನಸಭಾ ಮತಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸೇಡಂ ಜೆಡಿಎಸ್ ಪಕ್ಷದ ಮುಖಂಡ ಬಾಲ ರಾಜ್ ಅ.ಗುತ್ತೇದಾರ್ ಅವರು, ಪ್ರತಿಯೊಬ್ಬ ನಾಯಕರು, ಮುಖಂಡರು, ಕಾರ್ಯಕರ್ತರು ಪಕ್ಷದ ಕಾರ್ಯಚಟುವಟಿಗೆಗಳಿಗೆ ಹಾಜರಾಗಬೇಕು. ಪಕ್ಷದ ಸಂಘಟನೆಯಲ್ಲಿ ಹೆಚ್ಚಿನ  ಪಾತ್ರ ವಹಿಸಬೇಕು. ಬೂತ್ ಕಮಿಟಿಗಳನ್ನು ಸಕ್ರಿಯ ವಾಗಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.
ಪ್ರತಿ ಗ್ರಾಮದಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪಕ್ಷದ ವತಿಯಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿ ಕೊಳ್ಳವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಆರ್ ಆರ್ ಪಾಟೀಲ್. ಜಿಲ್ಲಾ ಉಪಾಧ್ಯಕ್ಷ ಪ್ರಲ್ಹಾದ ಕುಲಕರ್ಣಿ, ಮಾಜಿ ತಾಲೂಕಾ ಧ್ಯಕ್ಷ ಜಗನ್ನಾಥ ರೆಡ್ಡಿ ಗೊಟೂರ್, ಕಾರ್ಯಾ ಧ್ಯಕ್ಷ  ಶಿವರಾಮರೆಡ್ಡಿ ಗೊಟೂರ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಪುತ್ರ ಮೊಘ, ಎಸ್ ಸಿ ಘಟಕ ಅಧ್ಯಕ್ಷ ಹಸನಪ್ಪ ಮೇತ್ರೆ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಚಾಂದ ಪಾಶಾ, ಓ ಬಿ ಸಿ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಮುತ್ಯಾಲ್, ಯುವ ಘಟಕ ಅಧ್ಯಕ್ಷ ಪ್ರವೀಣ್ ಕೇರಿ, ಮಹಿಳಾ ಘಟಕ ಅಧ್ಯಕ್ಷ ಶ್ರೀ ಮತಿ ಪುಷ್ಪಾವತಿ ಗೊಬ್ಬುರ್, ಭೀಮಶಪ್ಪ ಬಳ್ಳಾರಂ, ಪಕ್ಷದ ಹಿರಿಯ ಮುಖಂಡರಾದ ಹುಸೇನ್ ಸಾಬ, ಭೀಮರೆಡ್ಡಿ ಹಂದರಕಿ, ಸೂರ್ಯಪ್ರಕಾಶ ಕಾವಲಿ, ಶಿವು ಜಾಡೂರ ಕೊಡ್ಲಾ, ನರಸಪ್ಪ ಮುಧೋಳ್, ಶಿವಶಂಕ್ರಯ್ಯ ಸ್ವಾಮಿ, ವಿರೇಶ್ ಗುತ್ತೇದಾರ, ಸುರೇಶ ಬಂಡೆ, ಸಿದ್ದಯ್ಯ ಸ್ವಾಮಿ, ಕನಿಜ್ ಫಾತಿಮಾ, ರೆಹಮತ ಬೇಗಮ್, ಸಂಗೀತಾ ಬೆನಕನಹಳ್ಳಿ, ಹಾಗೂ ಇನ್ನಿತರ ಮಹಿಳಾ ಪ್ರತಿನಿದಿಗಳು ಯುವ ಕಾರ್ಯ ಕರ್ತರು ಇನ್ನಿತರರು ಉಪಸ್ಥಿತರಿದ್ದರು.
