ಪುನೀತ್ ಅಭಿಮಾನಿಗಳಿಂದ ಕುಡಿಯುವ ನೀರಿನ ವ್ಯವಸ್ಥೆ
ಚಿಂಚೋಳಿ:ತೆಲಂಗಾಣ ರಾಜ್ಯದ ಗಡಿ ಭಾಗಕ್ಕೆ ಹಂದಿಕೊಂಡಿರುವ ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಅತಿಯಾದ ಬಿಸಿಲಿಗೆ ಸಾರ್ವಜನಿಕರು, ವೃದ್ಧರು, ಮಕ್ಕಳು ಹಾಗೂ ಸುಸ್ತಾಗಿ ಬಂದವರು ಬಾಯಾರಿಕೆ ನೀಗಿಸಿಕೊಳ್ಳಲು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗದ ಸದಸ್ಯ ಸುಧಾಕರ್ ಗೌಡ್ ಬೈರಂಪಳ್ಳಿ ಅವರ ನೇತೃತ್ವದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ತಾಲೂಕಿನ ಮಿರಿಯಾಣ ಗ್ರಾಮದ ಅಪ್ಪು ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮಣ್ಣಿನ ಮಡಿಕೆಗಳು ಇಟ್ಟು ಜನರಿಗೆ ಕುಡಿಯಲು ತಂಪಾದ ನೀರಿನ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ. ಅಭಿಮಾನಿಗಳ ಕಾರ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತ ವಾಗುತ್ತಿದೆ.
ಸಿಪಿಐ ಮಹಾಂತೇಶ ಪಾಟೀಲ್ ಅವರು ಮಾತನಾಡಿ, ಮಿರಿಯಾಣ ಗ್ರಾಮದ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗವು ಸಾರ್ವಜನಿಕರು ಬಾಯಾರಿಕೆ ನೀಗಿಸಿಕೊಳ್ಳಲು ಸಮಾಜಮುಖಿ ಕೆಲಸ ಮಾಡಿದ್ದಾರೆ.
ಇದೇ ರೀತಿ, ತಾಲೂಕಿನ ಎಲ್ಲ ಗ್ರಾಮದ ಯುವಕರು ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಬೇಸಿಗೆಯಲ್ಲಿ ಆದಷ್ಟು ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಯುವ ಅಧ್ಯಕ್ಷ ಸಂಜೀವಕುಮಾರ ಪಾಟೀಲ್,  ನರೇಂದ್ರ ಗೌಡ, ಸುದರ್ಶನ್ ಪಾಟೀಲ್ ಕಲ್ಲೂರ್, ಅನೀಲಕುಮಾರ ಕಂಟ್ಲಿ, ರವೀಂದ್ರ ಬಂಡೆಪ್ಪನೂರ್, ನಾಗರಾಜ್ ಸೀಳಿನ್, ಮಿರಿಯಾಣ ಗ್ರಾಮದ ಮುಖಂಡರಾದ ಪಂಚಾಕ್ಷರಯ್ಯ ಸ್ವಾಮಿ, ಆಂಜನೇಯಲು ಗೌಡ ಸೇರಿದಮತೆ ಅನೇಕ ಡಾ.ಪಿನೀತ್ ಅಭಿಮಾನಿಗಳ ಬಳಗ ಹಾಗೂ ಮಿರಿಯಾಣ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.