ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಯವರ ಯೋಗ ಕ್ಷೇಮ ವಿಚಾರಿಸಿದ ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್
ಹರಪನಹಳ್ಳಿ:ರಾಜ್ಯದಲ್ಲಿ ಮೀಸಲಾತಿಗಾಗಿ ಐತಿಹಾಸಿಕ ಧರಣಿ ಸತ್ಯಗ್ರಾಹ ಮಾಡುತ್ತೀರುವುದು ಸ್ವಾಮೀಜಿಗಳಲ್ಲ ಅವರು ಸಮಾಜದ ದೊಡ್ಡ ಶಕ್ತಿಯಾಗಿ ಧರಣಿ ಸತ್ಯಗ್ರಹವನ್ನು ಮಾಡುತ್ತಿದ್ದಾರೆ. ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಪೊರ್ಸ್ ಸಮಿತಿಯಸದಸ್ಯರು, ಯುವ ಕಾಂಗ್ರೆಸ್ ಮುಖಂಡರಾದ ಶಶಿಧರ್ ಪೂಜಾರ್ ಆಗ್ರಾಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಸುಮಾರು ೪೮ ದಿನಗಳಿಂದ ಬಡ ಸಮಾಜದ ಮೀಸಲಾತಿಗಾಗಿ ಧರಣಿ ನಡೆಸುತ್ತಿರುವ ಸ್ವಾಮೀಜಿ ಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಕಣ್ಣು, ಕಿವಿ, ಇಲ್ಲಿದ ಬಿಜೆಪಿ ಸರ್ಕಾರ ಮೀಸ ಲಾತಿ ವಿಚಾರದಲ್ಲಿ ನಿರ್ಲಕ್ಷೆ ತೋರುತ್ತಿರುವುದು ಸರಿಯಲ್ಲ ವಾಲ್ಮೀಕಿ ಸಮಾಜದ ಗುರುಗಳು ಕೇಳುತ್ತಿರುವುದು ಯಾರ ಮನೆಯ ಸ್ವತ್ತನಲ್ಲ ಅವರು ಸವಿಂಧಾನ ಬದ್ದವಾದ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾನವನ್ನು ಕ್ರಮವಾಗಿ ೧೫ ರಿಂದ ೧೭ ಮತ್ತು ಶೇಕಡಾ ೩ ರಿಂದ ೭.೫ ಕ್ಕೆ ಹೆಚ್ಚಿಸಲು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿ ಯನ್ನು ಅನುಷ್ಠಾಗೊಳಿಸುವಂತೆ ಧರಣಿ ಸತ್ಯಾಗ್ರಹ ಕೈಗೊಂಡಿರುವ ಕಾನೂನಿನ ಹಕ್ಕು ಕೇಳುತ್ತಿದ್ದಾರೆ. ಎಂದು ಉಲ್ಲೇಖಿಸಿದರು.
ರಾಜ್ಯದ ಅತ್ಯಾಂತ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ0ತಹ ವಾಲ್ಮೀಕಿ ಸಮಾಜವು ಆರ್ಥಿವಾಗಿ, ಸಾಜಿಕ ವಾಗಿ, ಶೈಕ್ಷಣಿವಾಗಿ,ರಾಜಕೀಯವಾಗಿ ಹಿಂದು ಳಿದಿರುವ ಸಮಾಜವನ್ನು ಮೀಸಲಾತಿಯ ಪ್ರಮಾನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮೀನಾ ವೇಷ ಮಾಡುತ್ತೀರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಪಂ ಮಾಜಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮುತ್ತಿಗಿ ಜಂಬಣ್ಣ, ಎಂ.ಬಿ.ಯಶವAತಗೌಡ, ಚಿಗಟೇರಿ ಜಂಬಣ್ಣ, ಮುಖಂಡರಾದ ನೀಲಗುಂದ ಬಿ.ವಾಗೀಶ್, ಪಿ.ಪ್ರೇಮಕುಮಾರ, ಅಲಮರಸಿಕೆರಿ ಪರಶುರಾಮ, ಮಹಾಂತೇಶ್‌ನಾಯ್ಕ, ಸೇರಿದಂತೆ ಇತರರು ಉಪಸ್ಥಿತರಿದ್ದರು.