ಜನರು ಮತ್ತೊಮ್ಮೆ ಶಾಸಕ ಜಿ.ಕರುಣಾಕರ ರೆಡ್ಡಿಯವರನ್ನು ಆಶೀರ್ವಾದ ಮಾಡಿ: ಮುಖ್ಯ ಮಂತ್ರಿ ಬೊಮ್ಮಾಯಿ
ಹರಪನಹಳ್ಳಿ:ಮತ್ತೊಮ್ಮೆ ಶಾಸಕ ಜಿ.ಕರುಣಾಕರ ರೆಡ್ಡಿ ಯವರನ್ನು ೨೦೨೩ ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ತಾಲೂಕಿನ ಜನರು ಆರಿಸಿ ಕಳಿಸಿದರೆ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿಹೇಳಿದರು.
ಪಟ್ಟದ ಪಾಟೇಲ್ ಸಿದ್ದನಗೌಡ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಶಾಸಕ ಜಿ. ಕರುಣಾಕರೆಡ್ಡಿ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸೀತಾರಾಮ ಕಲ್ಯಾಣ ಮಹೋತ್ಸವ ಹಾಗೂ ಷಷ್ಠಾö್ಯಬಿದ್ದ,ಹಾಗೂ ಶಾಸಕ ಜಿ. ಕರುಣಾಕರ ರೆಡ್ಡಿ ಅವರ ೬೦ ನೇ ಹುಟ್ಟುಹಬ್ಬದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ದೀಪ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಂಬರುವ ೨೦೨೩ ಸಾರ್ವತ್ರಿಕಾ ವಿಧಾನ ಸಭೆ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನ ಸಭೆ ಕ್ಷೇತ್ರದಿಂದ ಶಾಸಕ ಜಿ. ಕರುಣಾಕರ ರೆಡ್ಡಿಯವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಬಿಜೆಪಿ ಯಿಂದ ಟೀಕೆಟ್ ಖಚಿತ ಪಡಿಸಿದರು.
ಹರಪನಹಳ್ಳಿ ತಾಲೂಕಿನ ಕೆಲವು ಯೋಜನೆಗಳು ನೆನೆಗುದಿಗೆ ಬಿದ್ದರುವ ಅಭಿವೃದ್ದಿಕಾರ್ಯಗಳನ್ನು ನಾನು ಇನ್ನು ೩-೪ ತಿಂಗಳಲ್ಲಿ ಪೂರ್ಣಗೊಳಿಸಿ ನಾನು ನನ್ನ ಕೈಯಿಂzಲೇÀ ಪೂರ್ಣಗೊಂಡಿರುವ ಎಲ್ಲಾ ಅಭಿವೃದ್ಧಿ ಗೊಂಡಿರುವ ಎಲ್ಲಾ ಕಾರ್ಯಗಳನ್ನು ಉದ್ಘಾಟಿಸುತ್ತೇನೆ ಎಂದು ಗಂಡ ಘೋಷವಾಗಿ ಹೇಳಿದರು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿ0ದಲೂ ಅನೇಕ ಜನಪರವಾದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಅಭಿವೃದ್ಧಿ ಸುತ್ತ ಜನರಿರಬೇಕು ಜನರ ಸುತ್ತ ಅಭಿವೃದ್ದಿಯಾಗಿರಬಾರದು ಕಾಂಗ್ರೆಸ್ ನವರು ಸುಳ್ಳಿನಿಂದ ಅಭಿವೃದ್ಧಿ ಪಡಿಸುತ್ತಾರೆ ಆದರೆ ಬಿಜೆಪಿ ಮಾತು ಕಡಿಮೆ ಕೆಲಸ ಜಾಸ್ತಿ ಹಾಗಾಗಿ ರಾಜ್ಯದ ಜನ ಬಿಜೆಪಿ ಆಡಳಿತವನ್ನು ಮೆಚ್ಚುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ರಾಜ್ಯ ಸಾರಿಗೆ ಸಚಿವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀ ರಾಮುಲು ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತೀರುವುದು ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ರಾಮರಾಜ್ಯವನ್ನಾಗಿ ಮಾಡಲು ಎಲ್ಲಾರೂ ಅಭಿವೃದ್ಧಿ ಕಡೆಗೆ ಕೊಂಡೊಯ್ಯಬೇಕಾಗಿದೆ ಎಂದರು.
ಶಾಸಕ ಜಿ. ಕರುಣಾಕರೆಡ್ಡಿಯವರು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಜನರ ಆಶ್ರೀðವಾದಿಂದ ಶಾಸಕರಾದ ಮೇಲೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೋಮ್ಮ ಬಿಜೆಪಿ ಸರ್ಕಾರದ ಆಡಳಿತ ನಡೆಸುವಲ್ಲಿ ಯಾವುದೇ ರೀತಿ ಅನುಮಾನವಿಲ್ಲ ಎಂದು ಖಚಿತ ಪಡಿಸಿದರು.
ಈ ಸಂದರ್ಭದಲ್ಲಿ ದಾವಣಗೇರಿ ಜಿಲ್ಲಾ ಸಂಸದ ಜಿ.ಎಂ. ಸಿದ್ದೇಶ್, ಬಳ್ಳಾರಿ ಸಂಸದ ವೈ.ದೇವಿಂದ್ರಪ್ಪ, ಶಾಸಕರಾದ ಜಿ. ಕರುಣಾಕರ ರೆಡ್ಡಿ ವೀರು ಪಾಕ್ಷಪ್ಪ, ಪ್ರೋ|| ನಿಂಗಣ್ಣ, ಸೋಮಲಿಂಗಪ್ಪ, ಸೋಮಸೇಖರ ರೆಡ್ಡಿ, ಗೋಪಾಲಕೃಷ್ಣ, ಎಸ್.ವಿ.ರಾಮಚಂದ್ರಪ್ಪ,ಮಾಜಿ ಶಾಸಕರಾದ ಚಂದ್ರನಾಯ್ಕ, ನೇಮಿರಾಜ್ ನಾಯ್ಕ ಮಾತನಾಡಿದರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡ, ಮುಖಂಡರಾದ ಎಂ.ಪಿ.ನಾಯ್ಕ, ಪುರಸಭೆ ಅಧ್ಯಕ್ಷರಾದ ಮಂಜುನಾಥ್ ಇಂಜತ್ಕರ್, ಹರಾಳು ಅಶೋಕ್, ಆರ್. ಲೋಕೇಶ್, ಬಾಗಳಿ ಕೋಟ್ರಪ್ಪ, ಕಣವಿಹಳ್ಳಿ ಮಂಜುನಾಥ್, ಕೆ. ಪ್ರಕಾಶ್, ಸತ್ತೂರು ಹಾಲೇಶ್, ಎಸ್.ಪಿ.ಲಿಂಭ್ಯಾನಾಯ್ಕ, ಮತ್ತು ಇತರರು ಇದ್ದರು.
ಮುಂಬರುವ ಚುನಾವಣೆಯಲ್ಲಿ ಸಹೋದರ ಜಿ. ಕರುಣಾಕರೆಡ್ಡಿ ಗೆಲುವಿಗೆ ಶ್ರಮಿಸುತ್ತೇನೆ
ರಾಜ್ಯದಲ್ಲಿ ಮುಂಬರುವ ೨೦೨೩ ನಡೆಯಲಿರುವ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದ ಜೋತೆಗೆ ನನ್ನ ಅಣ್ಣದ ಹಾಲಿ ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿಯವರನ್ನು ಗೆಲ್ಲಿಸಿಕೊಂಡು ರಾಜ್ಯದಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಿಸುವಲ್ಲಿ ನಾನು ಕೂಡ ರಾಜ್ಯ ಬಿಜೆಪಿ ನಾಯಕರ ಜೋತೆ ಕೈ ಜೋಡಿಸುತ್ತೇನೆ ಎಂದು ಫೋಷಿಸಿದರು.
ಭಾನುವಾರ ಪಾಟೇಲ್ ಸಿದ್ದನ ಗೌಡ ಪದವಿ ಪೂರ್ವ ಮಹಾವಿಧ್ಯಾಲಯದಲ್ಲಿ ಶಾಸಕ ಜಿ. ಕರುಣಾಕರ ರೆಡ್ಡಿ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸೀರಾಮ ಕಲ್ಯಾಣ ಮಹೋತ್ಸವ ಹಾಗೂ ಷಷ್ಠಾö್ಯಬಿದ್ದ,ಹಾಗೂ ಶಾಸಕ ಜಿ. ಕರುಣಾಕರ ರೆಡ್ಡಿ ಅವರ ೬೦ ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾನಾಡಿದ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲಿಸಲು ನಾನು ೧೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲುವಿಗಾಗಿ ನಾನು ಕೂಡ ತಮ್ಮ ಜೋತೆಯಲ್ಲಿ ನಾನು ಕೈ ಜೋಡಿಸುತ್ತೇನೆ. ನಾನು ರಾಜಕೀಯದಲ್ಲಿ ಬೆಳೆದು ದೊಡ್ಡ ವ್ಯಕ್ತಿಯಾಗಬೇಕು ಎಂದು ನಾನು ಬಯಸುವುದಿಲ್ಲ ನನ್ನ ಗುರಿ ಮತ್ತೊಮ್ಮೆ ರಾಜ್ಯಕ್ಕೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವುದು ನನ್ನ ಗುರಿಯಾಗಿದೆ.
ಈ ಹಿಂದೆ ಬಿ.ಎಸ್.ವೈ ರವರನ್ನು ರಾಜ್ಯದ ಮುಖ್ಯ ಮಂತ್ರಿ ಮಾಡಬೇಕೆನ್ನುವ ನನ್ನ ಉದ್ದೇಶವಾಗಿತ್ತು ಮುಖ್ಯ ಮಂತ್ರಿಯನ್ನಾಗಿ ಮಾಡಿದ್ದೇವೆ ಈಗ ಮುಖ್ಯ ಮಂರಿ ಬಸವರಾಜ್ ಬೊಮ್ಮಾಯಿ ಅವರ ಜೊತೆಗೂಡಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನಾನು ಸನ್ನದ್ಧನಾಗಿದ್ದೇನೆ. ಮುಂಬರುವ ಚುನಾಣೆಯಲ್ಲಿ ಮತ್ತೋಮ್ಮೆ ರಾಜ್ಯದಲ್ಲಿ ಕಮಲ ಅರಳಲಿದೆ ಎಂದು ಜನಾರ್ದನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಹೋಗಿ ನನ್ನ ಅಣ್ಣನ ಹೆಜ್ಜೆಗೆ ಹೆಜ್ಜೆಯನ್ನಿಟ್ಟು ೨೦೨೩ ರಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಲ್ಲಿ ಮತ್ತೋಮ್ಮ ನನ್ನ ಅಣ್ಣನಾದ ಜಿ. ಕರುಣಾಕರ ರೆಡ್ಡಯವರನ್ನು ಈ ಕ್ಷೇತ್ರದ ಶಾಸಕ ಸಚಿವರನ್ನಾಗಿ ಮಾಡಬೇಕೆನ್ನುವ ನನ್ನ ಮಹಾದಾಸೆ ನನ್ನದಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.