ಪ್ರತಿಭಾವಂತ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ : ಶಾಸಕ ತುಕಾರಾಂ
ತಾಲೂಕಿನ ಮತದಾರರು ಆಶೆ ಆಮೀಷಕ್ಕೆ ಬಲಿಯಾಗದಿರಿ
ಹರಪನಹಳ್ಳಿ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಜನತೆ ಆಶೆ ಆಮೀಷಕ್ಕೆ ಬಲಿ ಯಾಗದೆ ಉತ್ತಮ ತೀರ್ಮಾನ ಕೈಗೊಳ್ಳಿ ಎಂದು ಸಂಡೂರು ಶಾಸಕ ತುಕಾರಾಂ ಸಲಹೆ ನೀಡಿದರು.
ಅವರು ಪಟ್ಟಣ ಸಮೀಪ ದೇವರ ತಿಮಲಾಪುರ ಗ್ರಾಮದಲ್ಲಿ ಹಗರಿಬೊಮ್ಮನಹಳ್ಳಿ ಗ್ರಾಮದ ಶ್ರೀ ವೇದ ವ್ಯಾಸ ಮಹರ್ಶಿ ಚಾರಿಟಬಲ್ ಟ್ರಸ್ಟ್ ನವರು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ರಾಜಕೀಯ ಎಂದರೆ ಸಮಾಜಸೇವೆ, ದೇವರ ಕೆಲಸ, ಬಡವರಿಗೆ ಬೇಕಾದ ಕೆಲಸ ಮಾಡಬೇಕು ಅಂತಹ ಉತ್ತಮ ನಾಯಕರನ್ನು ಆರಿಸಿಕೊಳ್ಳಬೇಕು, ಆಶೆ, ಆಮೀಷಕ್ಕೆ ಬಲಿಯಾಗದೆ ಉತ್ತಮ ತೀರ್ಮಾನ ಮಾಡಿ ಎಂದು ಅವರು ಹೇಳಿದರು.
ಸಾಮೂಹಿಕ ವಿವಾಹಗಳು ಸಮಾಜದ ಕಣ್ಣಾಗಿವೆ ಎಂದ ಅವರು ಬಡವರು ವಿವಾಹ ನೋಡಿ ನೋವು ಪಡಬಾರದು ಎಂದು ಹೇಳಿದರು. ಅನ್ನ, ನೀರು, ಹಣ ಗೌರವಿಸಿ, ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು ಎಂದ ಅವರು ಆರತಿಗೊಂದು, ಕೀರ್ತಿಗೊಂದು ಎಂಬAತೆ ಎರಡೆ ಮಕ್ಕಳನ್ನು ಹೊಂದಬೇಕು ಎಂದು ನವ ದಂಪತಿಗಳಿಗೆ ಸಲಹೆ ನೀಡಿದರು.
ದುಶ್ಟಟಕ್ಕೆ ಬಲಿಯಾಗದೆ ಶಿವ ಪಾರ್ವತಿಯರಂತೆ ಜೀವನ ಸಾಗಿಸಿ ಎಂದು ಹೇಳಿದರು. ಎಂ.ಪಿ.ಪ್ರಕಾಶ್ ಹಾಗೂ ಸಂತೋಷ ಲಾಡ್ ಅವರು ನನಗೆ ಗಾಡ್ -Áದರ ಆಗಿದ್ದಾರೆ, ನಾನು ಸಂಸದೀಯ ಪಟುವಾಗಿ ಬೆಳೆಯಲು ಅವರೇ ಕಾರಣ ಎಂದು ಸ್ಮರಿಸಿದರು.
ಪ್ರಸ್ಥಾವಿಕವಾಗಿ ಮಾತನಾಡಿದ ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾದ್ಯಕ್ಷ ಅಂಬಾಡಿ ನಾಗರಾಜ ಅವರು ಸೇವೆಯಲ್ಲಿ ಸ್ಪರ್ದೆ ಇರಬೇಕು ಹೊರತು ಗುಂಪುಗಾರಿಕೆ ಮಾಡಬಾರದು, ಟಿಕೆಟ್ ಆಕಾಂಕ್ಷಿಗಳೆಲ್ಲಾ ಸೌಹಾರ್ದಯುತವಾಗಿ ಇದ್ದು, ಈ ಕ್ಷೇತ್ರದ ಜನತೆಯ ಸೇವೆ ಮಾಡೋಣ ಎಂದು ಹೇಳಿದರು.
ಧರ್ಮ ಒಡೆಯುವ ರಾಜಕಾರಣ ಮಾಡಬಾರದು ಎಂದರು. ಕೆರೆಗಳಿಗೆ ನದಿ ನೀರು ತುಂಬಿಸುವುದು, ಗರ್ಭಗುಡಿ ಬ್ರಿಡ್ಜ ಕಂ ಬ್ಯಾರೇಜು ಯೋಜನೆಗಳ ವಿಳಂಬ ನೀತಿ ಖಂಡಿಸಿ ಮುಂದಿನ ತಿಂಗಳು ಜನಜಾಗೃತಿ ಪಾದ ಯಾತ್ರೆ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.ನವಂಬರ, ಡಿಸೆಂಬರ್ ನಲ್ಲಿ ಪುನಃ ತಾಲೂಕಿನ ವಿವಿಧ ಐದು ಕಡೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.೯ ಜೋಡಿ ನವ ವಧುವರರು ದಾಂಪತ್ಯಕ್ಕೆ ಕಾಲಿಟ್ಟರು. ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿಗಳು ಸಾನಿದ್ಯ ವಹಿಸಿದ್ದರು.
ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ, ಮೌಲಾನ ಖಾಜಿ ಮುಷ್ತಾಕ ಅಹಮದ್ ರಜ್ಜಿವ, ಮಹಿಳಾ ಕಾಂಗ್ರೆಸ್ ಜಿಲ್ಲಾದ್ಯಕ್ಷೆ ಆಶಾ ಲತಾ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಕವಿತಾ ರೆಡ್ಡಿ, ಯುವ ಮುಖಂಡ ಅರಸಿಕೇರಿ ಅಣ್ಣಪ್ಪ, ಪ್ರಶಾಂತ ಪಾಟೀಲ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಯಶವಂತಗೌಡ, ಮತ್ತಿಹಳ್ಳಿ ಅಜ್ಜಣ್ಣ , ಪವಾಡಿ ಹನುಮಂತಪ್ಪ ಇತರರು ಹಾಜರಿದ್ದರು.