ಮೇ 20ರಂದು ಮಾನ್ವಿ ಬಂದ್
ಮಾನ್ವಿ:ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ತಾ.ಘಟಕ ವತಿಯಿಂದ ತಿಪ್ಪಣ್ಣ ಬಗಲವಾಡ ವಕೀಲರು ಮಾತನಾಡಿ ರಾಜ್ಯದಲ್ಲಿನ ಸಮಿಶ್ರ ಸರಕಾರದ ಅವಧಿಯಲ್ಲಿ ರಚಿಸಿದ ನಿವೃತ್ತನ್ಯಾಯಾಮೂರ್ತಿ ಹೆಚ್.ಎನ್.ನಾಗಮೋಹನದಾಸ್‌ರವರ ಅಧ್ಯಕ್ಷತೆಯಲ್ಲಿನ ಅಯೋಗವು ನೀಡಿದ ವರದಿ ಜಾರಿ ಮಾಡುವ ಮೂಲಕ ಪಾ.ಜಾತಿ ಯವರಿಗೆ ಶೇ.15ರಿಂದ ಶೇ17ರವರೆಗೆ ಹಾಗೂ ಪ.ಪಂಗಡದವರಿಗೆ ಶೇ3ರಿಂದ ಶೇ7.5ಗೆ ಮೀಸಲಾತಿಯನ್ನು ಹೆಚ್ಚಿಸಬೇಕು ಹಾಗೂ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಮೇ 20ರಂದು ರಾಜ್ಯಾಧ್ಯಂತ ಬಂದ್‌ಗೆ ಕರೆನೀಡಿರುವುದರ ಅಂಗವಾಗಿ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಮಾನ್ವಿ ಬಂದ್‌ಗೆ ಕರೆನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಮೀಸಲಾತಿಯನ್ನು ಹೆಚ್ಚಿಸುವಂತೆ ಧರಣಿ ನಡೆಸುತ್ತಿದ್ದರು ಕೂಡ ರಾಜ್ಯ ಸರಕಾರ ಸ್ಪಂದನೆ ತೋರದೆ ಇರುವು ದನ್ನು ಪ್ರತಿಭಟಿಸಿ ಮೇ 20ರಂದು ಬೆಳಿಗ್ಗೆ ಪಟ್ಟಣದ ವಾಲ್ಮೀಕಿ ವೃತ್ತ ಹಾಗೂ ಡಾ.ಅಂಬೇಡ್ಕರ್ ವೃತ್ತಗಳಲ್ಲಿನ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಸವ ವೃತ್ತದಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಸಲಾಗುವುದು ಆದ್ದರಿಂದ ಸಾರ್ವಜನಿಕರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವ ಮೂಲಕ ಮಾನ್ವಿ ಬಂದ್‌ಗೆ ಸಹಕಾರ ನೀಡುವಂತೆ ಕೋರಿದರು.
ವಾಲ್ಮೀಕಿ ಸಮಾಜದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಬುಡ್ಡಪ್ಪನಾಯಕ, ಮಾದಿಗ ಮಹಾಸಭಾದ ರಾಜ್ಯ ಕಾರ್ಯದರ್ಶಿ ಪ್ರಭುರಾಜ್ ಕೊಡ್ಲಿ ಮಾತನಾಡಿದರು
ಶಿವರಾಜ ಉಮಳಿ ಹೊಸೂರು, ಪಿ.ರವಿಕುಮಾರ, ಶರಣಯ್ಯನಾಯಕ, ಕೆ.ವೈ.ಬಸವರಾಜ, ರಾಮಣ್ಣನಾಯಕ, ಶರಣಬಸವ ನಾಯಕ ಜಾನೆಕಲ್, ಹನುಮೇಶನಾಯಕ, ಮೌನೇಶನಾಯಕ ಸೇರಿದಂತೆ ಇನ್ನಿತರರು ಇದ್ದರು.