ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಸವಲತ್ತು ಪಡೆಯಲು ತಹಸೀಲ್ದಾರ ಕರೆ
ದೇವದುರ್ಗ:ರಾಜ್ಯ ಸರ್ಕಾರದ ಕಂದಾಯ ಸಚಿವರ ನಿರ್ಧೆಶನದಂತೆ ಮಹಾತ್ವಾಕಾಂಕ್ಷಿ ಯೋಜನೆಯಾದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಜನ ಸಾಮಾನ್ಯರು ಕಛೇರಿಗಳಿಗೆ ಅಲೆದಾಡುವುದು ಮತ್ತು ಇಂದು ನಾಳೆ ಎಂದು ಸುತ್ತಾಡುವುದನ್ನು ತಪ್ಪಿಸಲು ನೂತನವಾಗಿ ಜಾರಿಗೆ ತಂದಿರುವ 72 ಗಂಟೆಯಲ್ಲಿ ನಿಮ್ಮ ಮನೆಯ ಬಾಗಿಲಿಗೆ ಪಿಂಚಣಿ ಆದೇಶದ ಸದುಪಯೋಗ ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದು ತಾಲೂಕು ದಂಡಾಧಿಕಾರಿ ಮತ್ತು ತಹಸೀಲ್ದಾರ ಶ್ರೀನಿವಾಸ್ ಚಾಪೆಲ್ ಹೇಳಿದರು.
ಅವರಿಂದು ತಮ್ಮ ತಹಸೀಲ್ದಾರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಾಲೂಕಿನ ನಾಗರೀಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯ 32 ಸಾವಿರ ಕ್ಕಿಂತ ಕಡಿಮೆ ಇರುವ ವೃದ್ಧರು ವಿಶೇಷ ಚೇತನರು ವಿಧವೆಯರು ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೇಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಸಂಖ್ಯೆ 155245 ಗೆ ಉಚಿತವಾಗಿ ದೂರವಾಣಿ ಕರೆ ಮೂಲಕ ಕಡ್ಡಾಯವಾಗಿ ತಮ್ಮ ಅಧಾರ್ ಕಾರ್ಡ್ ಸಂಖ್ಯೆ ಒದಗಿಸಿ ಪಿಂಚಣಿ ಕೋರಿಕೆ ಅರ್ಜಿ ಸಲ್ಲಿಸಬಹುದು.
ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಬೇಟಿ ನೀಡಿ ನವೋದಯ ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಅಂಚೆ ಪಾಸ್ ಬುಕ್ ದಾಖಲೆಗಳ ಪಡೆದು ಆದೇಶ ಪತ್ರವನ್ನು ನೀಡುತ್ತಾರೆ ಎಂದು ತಹಸೀಲ್ದಾರ ಹೇಳಿದರು.