ಉತ್ತಮ ನ್ಯಾಯದಾನವಿದ್ದರೆ ಅಲ್ಲಿ ಸಮಾಜ ಸುಭದ್ರ: ನ್ಯಾ.ಆರ್.ದೇವದಾಸ್
ಹರಪನಹಳ್ಳಿ:ಸುಭೀಕ್ಷವಾದ ಸಮಾಜದಲ್ಲಿ ಉತ್ತಮ ನ್ಯಾಯದಾನವಿದ್ದರೆ ಅಲ್ಲಿ ಸಮಾಜ ಸುಭದ್ರ ವಾಗಿರುತ್ತದೆ ಎಂದು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಆರ್.ದೇವದಾಸ್ ಹೇಳಿದರು.
ಪಟ್ಟಣದ ಗೋಸಾಯಿ ಗುಡ್ಡದ ಮೇಲೆ ಗುರುತಿಸಿರುವ ನೂತನ ಹಿರಿಯ ಸಿವಿಲ್ ನ್ಯಾಯಾಲಯ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದವರು ಹರಪನಹಳ್ಳಿ ನ್ಯಾಯಾಲಯವು ಸುಂದರವಾದ ಸ್ಥಳದಲ್ಲಿ ನಿರ್ಮಾಣವಾಗುತ್ತಿದ್ದು, ಇಲ್ಲಿ ನ್ಯಾಯಾಧೀಶರುಗಳು ಹಾಗೂ ಕಕ್ಷಿದಾರರುಗಳಿಗೆ ಇದರ ಉಪಯೋಗ ಆಗಲೀ, ಕಟ್ಟಡಗಳು ಸುಸಜ್ಜಿತವಾಗಿದ್ದರೆ ಕಕ್ಷಿದಾರರು ಮತ್ತು ನ್ಯಾಯ ದೀಶರು ನೆಮ್ಮದಿ ಮತ್ತು ಶಾಂತಿಯಿAದ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು.
ನ್ಯಾಯಾಲಯದ ಕಟ್ಟಡ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಮುಗಿದು ಭಾಗದ ಜನರಿಗೆ ಸದುಪಯೋಗ ಆಗ ಬೇಕು. ಜೊತೆಗೆ ಕಟ್ಟಡ ನಿರ್ಮಾಣವಾದ ನಂತರ ಅದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಕಕ್ಷಿದಾರರು ಸೇರಿದಂತೆ ಎಲ್ಲರ ಮೇಲೆ ಇದೆ ಎಂದು ಹೇಳಿದರು. ಈ ನೂತನ ನ್ಯಾಯಾಲಯ ಕಟ್ಟಡ ವಿಚಾರ ನಮ್ಮ ಗಮನಕ್ಕೆ ತಂದಾಗ ತಕ್ಷಣ ಸ್ಪಂಧಿಸಲಾಯಿತು ಜೊತೆಗೆ ನ್ಯಾಯಾಲಯ ಕಟ್ಟಡ ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತ್ತೆAದು ಹೇಳಿದರು.
ಉಚ್ಚನಯ್ಯಾಲಯದ ಮತ್ತೋರ್ವ ನ್ಯಾಯಮೂರ್ತಿ ಹಾಗೂ ದಾವಣಗೆರೆ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾದ ಕೆ.ನಟರಾಜನ್ ಮಾತ ನಾಡಿ, ಹರಪನಹಳ್ಳಿಯಲ್ಲಿ ನ್ಯಾಯಾಲಯ ನಿರ್ಮಾಣ ವಾಗುತ್ತಿರುವುದು ಈ ಭಾಗದ ಜನರಿಗೆ ಉಪಯೋಗವಾಗಲಿದೆ, ನಾನು ಹರಪನಹಳ್ಳಿ ಸೇರಿದಂತೆ ಈ ಭಾಗದಲ್ಲಿ ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸಿದ್ದೇನೆ, ಹರಪನಹಳ್ಳಿ ಮಣ್ಣಿನ ಋಣ ನನ್ನ ಮೇಲೆ ಇದೆ ಎಂದ ಅವರು ನಾನು ಈ ಕಾರ್ಯಕ್ರಮದ ಅತಿಥಿ ಅಲ್ಲ. ಒಬ್ಬ ನ್ಯಾಯದೀಶ ಎಂದು ಹೇಳಿದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ತಾಲೂಕಿನಲ್ಲಿ ನೂತನ ನ್ಯಾಯಾಲಯ ನಿರ್ಮಾಣ ಸಂಬAಧ ಮೊದಲ ಬಾರಿಗೆ ೫ ಕೋಟಿ ರೂ ಅನುದಾನ ಬಿಡುಗಡೆ ಯಾಗಿತ್ತು, ಇಷ್ಟು ಅನುದಾನ ನ್ಯಾಯಾಲಯ ನಿರ್ಮಾಣಕ್ಕೆ ಸಾಲುವುದಿಲ್ಲ ಎಂಬ ವಿಚಾರ ತಿಳಿದಾಗ ಮತ್ತೆ ೨ ಕೋಟಿ ಅನುದಾನವನ್ನು ಬಿಡುಗಡೆ ಗೊಳಿಸಿ ಒಟ್ಟು ೭ ಕೋಟಿ ರೂ ವೆಚ್ಚದಲ್ಲಿ ನ್ಯಾಯಾಲಯ ನಿರ್ಮಾಣವಾಗಲಿದೆ ಎಂದ ಅವರು ನೂತನ ನ್ಯಾಯಾಲಯ ಸೇರಿದಂತೆ ಶಾಲಾ ಕಾಲೇಜು ಬಿಲ್ಡಿಂಗ್ ನಿರ್ಮಾಣಕ್ಕೆ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆಂದರು.
ಕರ್ನಾಟಕ ರಾಜ್ಯ ವಕೀಲರ ಸಂಘದ ಸದಸ್ಯ ಕೆ.ಅನಿಲ್ ಮಾತನಾಡಿ ಈ ಭಾಗಕ್ಕೆ ನೂತನ ನ್ಯಾಯಾಲಯದ ಅವಶ್ಯಕತೆ ಇತ್ತು ಇದಕ್ಕೆ ಈಗ ಕಾಲ ಕೂಡಿ ಬಂದಿದೆ. ಇನ್ನು ಈ ಭಾಗಕ್ಕೆ ಹೆಚ್ಚುವರಿ ನ್ಯಾಯಾಲಯದ ಅವಶ್ಯಕತೆ ಇದೆ ಎಂದು ಹೇಳಿದರು. ಇದೇ ವೇಳೆ ತಾಲೂಕು ವಕೀಲರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕೆಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಎಲ್ಲಾ ಹಿರಿಯ ಮತ್ತು ಕಿರಿಯ ವಕೀಲರ ಅನ್ವಯ ಪ್ರಾಣಿಕ ಪ್ರಯತ್ನದಿಂದ ತಾಲೂಕಿನ ಸಾರ್ವಜನಿಕ ಕಕ್ಷಿದಾರಿಗೆ ಮತ್ತು ತಾಲೂಕಿನ ಜನತೆಗೆ ಅನುಕೂಲವಾಗುವಂತ ನೂತನ ಸಿವಿಲ್ ನ್ಯಾಯಾಲಯದ ಕಟ್ಟಡವನ್ನು ಗೌರವಾನ್ವಿತ ಉಭಯ ನ್ಯಾಯಾಮೂರ್ತಿಗಳು ಶಂಕುಸ್ಥಾಪನೆ ನೆರವೆರಿಸಿದ್ದರೆ. ಮುಂದಿನ ದಿನಗಳಲ್ಲಿ ತಾಲೂಕಿನ ವಕೀಲರ ಸಂಘದ ಕೆಲಸ ಕಾರ್ಯಗಳಿಗೆ ಹಿರಿಯ ನ್ಯಾಯಾವಾದಿಗಳ ಮಾರ್ಗದರ್ಶನದಲ್ಲಿ ಪ್ರಮಾಣಿಕ ಕೆಲಸ ಮಾಡುತ್ತೇನೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯದೀಶರಾದ ಪುಷ್ಪಾಂಜಲಿ ಹರಪನಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ, ಕಿರಿಯ ನ್ಯಾಯಧೀಶರಾದ ಪಕ್ಕೀರವ್ವ ಕೆಳಗೇರಿ, ಕಣವಿಹಳ್ಳಿ ಮಂಜುನಾಥ, ಲೋಕೋಪಯೋಗಿ ಇಲಾಖೆಯ ಹಡಗಲಿ ವಿಭಾಗದ ಅಭಿಯಂತರುರಾದ ರವೀಂದ್ರ ಕತ್ತಿ ವಕೀಲರ ಸಂಘದ ಕಾರ್ಯದರ್ಶಿ ಎಸ್. ಜಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಡಿ.ಬಿ. ವಾಸುದೇವ, ಜಂಟಿ ಕಾರ್ಯದರ್ಶಿ ನಾಗೇಂದ್ರಪ್ಪ, ಖಾಜಾಂಚಿ ಹುಲಿಯಪ್ಪ, ಹಿರಿಯ ವಕೀಲರುಗಳಾದ ಬಿ. ಕೃಷ್ಣಮೂರ್ತಿ, ಎಂ. ಅಜ್ಜಪ್ಪ, ಗಂಗಧರ್ ಗುರುಮಠ್, ಕೆ. ಚಂದ್ರ ಗೌಡು, ಬಿ. ರೇವನಗೌಡ, ಬಿ.ರಾಮನಗೌಡ, ಕೆ.ಎಂ.ಚAದ್ರಮೌಳಿ, ಕೆ. ಬಸವರಾಜ್, ಬಿ. ಹಾಲೇಶ್, ಕೆ. ದ್ರಾಕ್ಷಾಯಣಮ್ಮ, ಜೆ. ಸೀಮಾ, ರೇಣುಖಾ ಮೇಟಿ, ಎಂ. ಮೃಂಜಯ್ಯ, ಬಿ. ಗೋಣಿಬಸಪ್ಪ, ಬಂಡ್ರಿ ಆನಂದ, ಸೇರಿದಂತೆ ಇತರರು ಇದ್ದರು.