ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು
ಸಿರವಾರ :ತಾಲೂಕಿನ ತಿಪ್ಪಲದಿನ್ನಿ ಕ್ರಾಸ್ ಹತ್ತಿರ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದಾರೆ.
ರಾಯಚೂರಿನಿಂದ ಮಲ್ಲದಗುಡ್ಡಕ್ಕೆ ತೆರಳುತ್ತಿದ್ದ ವಿರುಪಾಕ್ಷಿ, ಅಕ್ಕಮಹಾದೇವಿ ಎಂಬುವವರು ಹಾಗೂ ವಡವಟ್ಟಿಯಿಂದ ರಾಯಚೂರಿಗೆ ತೆರಳುತ್ತಿದ್ದ ವೆಂಕೋಬಾ ಸಾಗರ್ ಎಂಬುವವರ ವಾಹನದ ನಡುವೆ ಡಿಕ್ಕಿ ಜರುಗಿ ಸ್ಥಳದಲ್ಲೆ ಮೂವರು ಮೃತಪಟ್ಟಿದ್ದಾರೆ. ಇನ್ನೋರ್ವ ಹುಡುಗನಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಸ್ಥಳಕ್ಕೆ ಪಿಎಸ್‌ಐ ಗೀತಾಂಜಲಿ ಶಿಂಧೆ ಭೇಟಿ ನೀಡಿದ್ದಾರೆ.