ಪಂಪ್ ಸೆಟ್ ವಿತರಣೆ
ದೇವದುರ್ಗ:ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವಿವಿಧ ಸಾಲಿನ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರು ಪಂಪ್ ಸೆಟ್ ವಿತರಣೆ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಂಗಾ ಕಲ್ಯಾಣ ಯೋಜನೆಯ ಹದಿನಾಲ್ಕು ಫಲಾನುಭವಿಗಳಿಗೆ ಪಂಪ್ ಸೆಟ್ ಹಸ್ತಾಂತರಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2019-20ನೇ ಸಾಲಿನ 12 ಫಲಾನುಭವಿ ಗಳಾದ ಗೂಗಲ್ ಗ್ರಾಮದ ರಾಮಯ್ಯ ತಂ. ಪಾಲಿಕೆಯ್ಯ, ನೀಲವಂಜಿಯ ಮಾರುತಿ ತಂ. ಶಂಕ್ರಣ್ಣ, ಜಾಗಟಗಲ್ ಗ್ರಾಮದ ವೀರೇಶ ತಂ. ಶಿವಮಾನಪ್ಪ, ಹುಲಿಗುಡ್ಡದ ಯಲ್ಲಪ್ಪ ತಂ. ಸಿದ್ದಣ್ಣ, ಕರಡಿಗುಡ್ಡದ ಮಲ್ಲಪ್ಪ ತಂ. ಹುಯಾಳಪ್ಪ, ಕೊತ್ತದೊಡ್ಡಿಯ ಹನುಮಂತ್ರಾಯ ತಂ. ಜಂಬಣ್ಣ, ಗಬ್ಬೂರಿನ ಸಾಯಿಬಣ್ಣ ತಂ. ದೊಡ್ಡ ಬಾಳಪ್ಪ, ಜಾಲಹಳ್ಳಿಯ ಪಾರ್ವತಿ ಗಂ. ಶಾಂತಗೌಡ, ಲಿಂಗದಹಳ್ಳಿಯ ಶರಣಮ್ಮ ಗಂ. ಜಗದೀಶ, ಗೋಪಾಳ ಪುರದ ದೇವಮ್ಮ ಗಂ.‌ ಶಾಂತಗೌಡ, ಎಚ್.ಜಾಡಲದಿನ್ನಿಯ ತಾಯಣ್ಣ ತಂ. ಹನುಮಪ್ಪ, ಅನ್ವರದ ಹನು ಮಂತ್ರಾಯ ತಂ. ಮಲ್ಲಪ್ಪ ಹಾಗೂ 2018-19ನೇ ಸಾಲಿನ ಫಲಾನುಭವಿಗಳಾದ ದೇವದುರ್ಗದ ಕೆ.ಗುಳ್ಳಪ್ಪ ತಂ. ಚಿನ್ನಪ್ಪ ಮತ್ತು ರಾಮದುರ್ಗದ ದೇವಮ್ಮ ಗಂ. ಮಲ್ಲಪ್ಪ ಅವರಿಗೆ ಗಂಗಾ ಕಲ್ಯಾಣದ ಪಂಪ್ ಸೆಟ್ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ದೇವಿಂದ್ರಪ್ಪ ಸಾಸ್ವಿಗೇರಾ, ಬಿಜೆಪಿ ಹಿರಿಯ ಮುಖಂಡರಾದ ನಾಗರಾಜ ಪಾಟೀಲ್ ಗೋಪಾಳಪುರ, ದೇವಿಂದ್ರಪ್ಪ ಚಿಕ್ಕಬುದೂರು, ರವಿಗೌಡ ಮಾತ್ಪಳ್ಳಿ, ಜಹೀರ್ ಪಾಷಾ, ಶಿವಕುಮಾರ್ ಬಳೆ, ಶಿವಕುಮಾರ ಅಕ್ಕರಕಿ, ಗೋಪಾಲಕೃಷ್ಣ ಮೇಟಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ನಿಗಮದ ಸಿಬ್ಬಂದಿ ಉಪಸ್ಥಿತರಿದ್ದರು.