ಚಿನ್ನದ ಹುಡುಗನಿಗೆ ಸನ್ಮಾನಿಸಿದ ಆರುಂಡಿ ನಾಗರಾಜ್
ಹರಪನಹಳ್ಳಿ:ಥೈಲ್ಯಾಂಡಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಗುರುವಾರ ಸ್ವಗ್ರಾಮ ಹಲುವಾಗಲು ಗ್ರಾಮಕ್ಕೆ ಆಗಮಿಸಿದ ಯುವ ಕುಸ್ತಿಪಟು ಮಲ್ಲಿಕಾರ್ಜುನ್ ಇವರಿಗೆ ಹರಪನಹಳ್ಳಿ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ, ರಾ.ರ.ಸಾ.ನಿ.ನಿರ್ದೇಶಕ ಆರುಂಡಿ ನಾಗರಾಜ್ ದಂಪತಿಗಳು ಯುವಕನ ಮನೆಗೆ ಬೇಟಿ ನೀಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈಚೇಗೆ ಥೈಲ್ಯಾಂಡಿನ ಬ್ಯಾಂಕಾಕ್ ರಾಜ್ಯದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ೭೦ ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಮಲ್ಲಿಕಾರ್ಜುನ್ ಜಪಾನ್, ಇಂಡೊನೇಷನ್, ಥೈಲ್ಯಾಂಡ್, ಅಮೇರಿಕಾ ದೇಶಗಳ ಕುಸ್ತಿ ಪುಟಗಳನ್ನು ಬಗ್ಗು ಬಡೆದು ಚಿನ್ನದ ಪದಕ ಮುಡಿಗೇರಿಕೊಂಡಿದ್ದರು.
ಚಿತ್ರ: ಹರಪನಹಳ್ಳಿ: ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕದ ಯುವ ಕುಸ್ತಿಪಟು ಮಲ್ಲಿಕಾ ರ್ಜುನ್‌ನನಿಗೆ ಆರುಂಡಿ ನಾಗರಾಜ್ ಹಾಗೂ ಜಿಲ್ಲಾ ಪಂ. ಮಾಜಿ ಸದಸ್ಯೆ ಸುರ್ವಣ ಆರುಂಡಿ ನಾಗರಾಜ್ ಚಿನ್ನದ ಹುಡುಗನಿಗೆ ಸನ್ಮಾನಿಸಿದರು.