ತಂಬಾಕಿನ ಕೆಡುಕು ಸುಖ ಸಂತೋಷಕ್ಕೆ ತೊಡಕು : ಪ್ರವೀಣ್ ಕುಮಾರ್
ಸಿರವಾರ :ಇಂದಿನ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ ಅದರಲ್ಲಿ ತಂಬಾಕು ಸಂಬಂಧಿಸಿದ ಸಿಗರೇಟ್, ಬೀಡಿ, ಗುಟುಕಾ ಮಾರಕವಾದ ಚಟುವಟಿಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ, ತಂಬಾಕು ಸೇವನೆಯಿಂದದೂರವಿರುವಂತೆ ಅಮರೇಗೌಡ ಬಯ್ಯಪೂರು ಪದವಿ ಕಾಲೇಜಿನ ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ಪಿ ಪ್ರವೀಣ್‌ಕುಮಾರ್ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ವತಿಯಿಂದ ಅಮರೇಗೌಡ ಬಯ್ಯಪೂರು ಪದವಿ ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಹಂಗವಾಗಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ದರು.
ದೇಶದಲ್ಲಿ ತಂಬಾಕು ಬೆಳೆದು ರಫ್ತು ಮಾಡುವುದರಲ್ಲಿ ೨ನೇ ಸ್ಥಾನದಲ್ಲಿದೆ ದೂಮ ಪಾನದಿಂದ ಪಕ್ಕದ ವ್ಯಕ್ತಿಗೆ ಸಹ ಹಾನಿಕರ ವಾಗಿದ್ದು, ಇದರಿಂದ ಹೃದಯಾಘಾತ, ಪಾರ್ಶ್ವವಾಯೂ, ಕ್ಯಾನ್ಸರ್‌ದಂತಹ ಮಾರಕವಾದ ರೋಗಗಳು ಜೀವಕ್ಕೆ ಹಾನಿ ಉಂಟುಮಾಡುತ್ತದೆ, ಇದರಿಂದ ವಿಧ್ಯಾರ್ಥಿಗಳು ದೂರವಿರಬೇಕೆಂದು ಅವರು ಹೇಳಿದರು.
ನಂತರ ಪ್ರಾಸ್ತವಿಕವಾಗಿ ಮಾತನಾಡಿದ ತಾಲೂಕ ಯೋಜನಾಧಿಕಾರಿ ಹರೀಶ್‌ಕುಮಾರ್ ಎ, ಪ್ರಪಂಚದಲ್ಲಿ ಮಾರಣಾಂತಿಕ ಮಾರಕ ದೂಮಪಾನವಾಗಿದ್ದು, ಇದರಿಂದ ಹೆಚ್ಚು ಜನರು ಸಾವುಗೀಡಾಗಿದ್ದಾರೆ. ಇದರಲ್ಲಿ ೧೮ ವರ್ಷದ ಯುವಕರೇ ಹೆಚ್ಚಾಗಿ ಮಾರಕ ವ್ಯಸನಕ್ಕೆ ತುತ್ತಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಂಡಿದ್ದಾರೆ,
ಈ ಸಂಧರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಲಯ ಮೇಲ್ವೀಚಾರಕ ಕುಬೇಂದ್ರ ಕುಮಾರ ಎಚ್, ಪತ್ರಕರ್ತರಾದ ರಾಜು ಗಿಂಡಿ, ಎಸ್.ಎ ವೀರೇಶ್, ಶಿವುಕುಮಾರ್ ಜಗ್ಲಿ, ಮತ್ತು ಸೇವಾ ಪ್ರತಿನಿಧಿ ಗಂಗಯ್ಯ ಸ್ವಾಮಿ, ಯಲ್ಲಮ್ಮ ಸೇರಿದಂತೆ ಕಾಲೇ ಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು.