ದತ್ತಿ ಉಪನ್ಯಾಸದಿಂದ ಕನ್ನಡ ಪರಂಪರೆ ಉಳಿವು: ಶಂಕರಯ್ಯ ಸ್ವಾಮಿ
ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ
ಸಿರವಾರ :ದತ್ತಿ ಉಪನ್ಯಾಸಗಳಿಂದ ಎಲ್ಲಾ ವಿದ್ಯಾರ್ಥಿಗಳು ಕನ್ನಡ ಮಾತನಾಡು ವುದರಿಂದ ಅವರಲ್ಲಿ ಕನ್ನಡದ ಬಗ್ಗೆ ಅಭಿ ಮಾನ ಮೂಡುತ್ತದೆ ಇದರಿಂದ ಕನ್ನಡ ನಾಡಿನ ಸಂಸ್ಕೃತಿ ಪರಂಪರೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸ ಕನ್ನಡ ಪಂಡಿತರು ಸ.ಪ್ರೌ.ಶಾ ಹೀರಾ ಶಂಕರಯ್ಯ ಸ್ವಾಮಿ ಕವಿತಾಳ ಹೇಳಿದರು.
ಇಂದು ಪಟ್ಟಣದ ಅಮರೇಗೌಡ ಬಯ್ಯಾಪು ರ ಪದವಿಪೂರ್ವ ಮಹಾವಿದ್ಯಾಲಯ ಕಾಲೇಜಿನಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾ ಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯವಹಾರಿಕ ಲಾಭಕ್ಕಾಗಿ ಆಂಗ್ಲ ಭಾಷೆ ಕಲಿ ಯಬೇಕೆ ವಿನಃ ಆಂಗ್ಲ ಅಥವಾ ಇತರ ಕನ್ನ ಡೇತರ ಭಾಷೆಗಳನ್ನು ನಮ್ಮ ನಿತ್ಯದ ಭಾಷೆ ಯನ್ನಾಗಿ ಮಾಡಿಕೊಳ್ಳಬಾರದು. ಬೇರೆ ರಾಜ್ಯಗಳಿಂದ ಬಂದು ನೆಲೆಸುವ ಅನ್ಯ ಭಾಷಿಗರಿಗೂ ಕನ್ನಡದಲ್ಲೆ ವ್ಯವಹಾರ ಮಾಡು ವಂತೆ ತಿಳಿಸಿ ಅವರಿಗೂ ಕೂಡ ಕನ್ನಡ ಭಾಷೆ ಕಲಿಸುವ ಪ್ರಯತ್ನ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳೂರು ಮಾತನಾಡಿದರು. ಪ್ರಸ್ತಾವಿಕವಾಗಿ ವೆಂಕಟ ರೆಡ್ಡಿ ಬಲ್ಕಲ್ ಮಾತನಾಡಿದರು.ನಿರೂಪಣೆ ಚಂದ್ರಮತಿ ಮಾಡಿದರು.
ಪತ್ರಕರ್ತರು ಕಸಾಪ ಗೌರವ ಕಾರ್ಯದರ್ಶಿ ಎಂ.ಗುಂಡಪ್ಪ ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಕಸಾಪ ನಿಕಟ ಪೂರ್ವ ಅಧ್ಯಕ್ಷ ಟಿ. ಬಸವರಾಜ,ಅಮರೇಶ ನಂದರೆಡ್ಡಿ, ಶಿವಜಾತಯ್ಯಸ್ವಾಮಿ, ಮೌನೇಶ ಸೇರಿ ದಂತೆ ಉಪಸ್ಥಿತರಿದ್ದರು.