ರಸ್ತೆ ಕಾಮಗಾರಿಗೆ ಆರ್ ವಿ ಎನ್ ಶಂಕುಸ್ಥಾಪನೆ
ಸಿರವಾರ:ತಾಲ್ಲೂಕಿನ ಹೀರಾ- ಹುಸೇನಪುರ ಅವಳಿ ಗ್ರಾಮಗಳಲ್ಲಿ ನಡೆದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯೋಜನೆ ಅಡಿಯಲ್ಲಿ ಸುಮಾರು 4 ಕೋಟಿ 76 ಲಕ್ಷ ರೂ.ಗಳ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಚುನಾವಣೆಯಲ್ಲಿ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ವಿಶ್ವಾಸವಿಟ್ಟು ಗೆಲ್ಲಿಸಿದ್ದೀರಿ ತಮ್ಮ ಬಯಕೆಯಂತೆ ನನ್ನ ಮತ ಕ್ಷೇತ್ರದಲ್ಲಿ ಬರುವ ಪ್ರತಿಯೊಂದು ಗ್ರಾಮಕ್ಕೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೆನೆ ಎಂದರು.
ನನ್ನ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತೆನೆ. ಬಹುದಿನಗಳ ಬೇಡಿಕೆಯಾದ ಈ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಮಾಡಿದ್ದು ಬಹಳ ಸಂತೋಷದ ವಿಚಾರ ಹೀರಾ, ಹುಡಾ ಮತ್ತು ಹುಸೇನಪುರ ಗ್ರಾಮಕ್ಕೆ ಸಂಪರ್ಕಿಸುವ ಈ ರಸ್ತೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ,ಹಿಂದುಳಿದ ಘಟಕದ ಜಿಲ್ಲಾ ಧ್ಯಕ್ಷ ಜಂಬುನಾಥ ಯಾದವ, ಎಸ್ ಯಕೋಬ, ಲಕ್ಷ್ಮಣ ಯಾದವ, ಹನುಮಂತ ಭೋವಿ,ಪಿ ರವಿಕುಮಾರ್, ಜಸ್ವಂತ ಸೇಠ್, ಗೋಪಾಲ ನಾಯಕ ಹರವಿ ಸೇರಿದಂತೆ ಕಾರ್ಯಕರ್ತರಿದ್ದರು.