ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡಾಕೂಟ ಪ್ರಮುಖ ಪಾತ್ರ
ಕೊಲ್ಹಾರ:ಕ್ರೀಡಾಕೂಟಗಳು ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗ್ರಾಮೀಣ ವಿದ್ಯಾವರ್ಧಕ ಸಂಘದಪ್ರೌಢ ಶಾಲೆಯ ಮುಖ್ಯ ಗುರುಗಳಾದ ಆರ್.ಎಸ್ ತುಂಗಳ ಹೇಳಿದರು.
ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತ ನಾಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳು ಉತ್ತಮ ಆಟವನ್ನು ಆಡುವುದರ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹೆಸರು ಮಾಡಬೇಕು ಎಂದು ಹೇಳಿದರು.
ಕೊಲ್ಹಾರ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಆಯ್ ಗೊಡ್ಯಾಳ ಮಾತನಾಡುತ್ತಾ ದೈಹಿಕ ಹಾಗೂ ಮಾನಸಿಕ ಸದೃಡತೆಗೆ ಕ್ರೀಡೆಗಳು ಅತ್ಯಮೂಲ್ಯ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.
ಯುವ ಮುಖಂಡ ಸಂಗಮೇಶ ಕುಬಕಡ್ಡಿ, ಗ್ರಾ.ಪಂ ಸದಸ್ಯ ನಿಂಗಪ್ಪ ಹಳ್ಳೂರ ಮಾತ ನಾಡಿದರು. ಶಾಲಾ ಮೇಲ್ವುಸ್ತುವಾರಿ ಸಮೀತಿ ಅಧ್ಯಕ್ಷ ಸಂಗಪ್ಪ ಮಾದರ ಹಾಗೂ ಕ್ರೀಡಾಕೂಟಕ್ಕೆ ಪ್ರಶಸ್ತಿ ಪತ್ರಗಳನ್ನು ಕೊಡುಗೆ ನೀಡಿದ ಮಲ್ಲಿಕಾರ್ಜುನ ಕುಬಕಡ್ಡಿಯ ವರನ್ನು ಶಾಲೆಯ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಮೂರ್ತಿ ರುದ್ರಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿದ್ದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂಗಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶರಣಗೌಡ ಪಾಟೀಲ್, ಆರ್ ಎಸ್ ತುಂಗಳ, ಸಗರಪ್ಪ ಮುರನಾಳ, ಗ್ರಾಪಂ ಸದಸ್ಯರಾದ ನಿಂಗಪ್ಪ ಹಳ್ಳೂರ, ಮಹೇಶ ತೋಟಗೇರ, ತೇಜಾ ಕುಬಕಡ್ಡಿ ಅತಿಥಿಗಳಾಗಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ದಾನೇಶ್ವರಿ ಕುಬಕಡ್ಡಿ ಸದಸ್ಯರಾದ ಸುರೇಶ ನರಿಯವರ, ಯಲಗೂರದಪ್ಪ ಬೈಲಕೂರ, ಶ್ರೀಶೈಲ ಹೊಸಮನಿ, ಮಹಾದೇವಿ ಕಂದಗಲ್, ಪೀರಪ್ಪ ಮಾದರ, ಮೌಲಾಸಾಬ ಬಿದರಿ, ಮುಖ್ಯ ಗುರುಗಳಾದ ವ್ಹಿ ಎಸ್ ದೇಸಾಯಿ ಶಿಕ್ಷಕರಾದ ವಿ ಎಲ್ ಭಜಂತ್ರಿ ಶಿಕ್ಷಕಿಯರಾದ ಪೊನಮ್ ಔರಸಂಗ, ಅಕ್ಕಮಹಾದೇವಿ ನ್ಯಾಮಗೊಂಡ ಮುಂತಾದವರು ಇದ್ದರು.