ಮೇಗಾ ಮಾರುಕಟ್ಟೆ ಅಂಗಡಿ ಕಳೆದುಕೊಂಡವರಿಗೆ ಆದ್ಯತೆ: ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ:ಪಟ್ಟಣದ ಅಭಿವೃದ್ದಿ ಜೊತೆ ಈ ತಾಲೂಕು ಜಿಲ್ಲೆ ಮಾಡುವ ಕನಸು ಹೊಂದಿದ್ದೇನೆ. ರಸ್ತೆಗಳ ಅಗಲೀಕರಣ ಮಾಡುವಾಗ ವ್ಯಾಪಾರಸ್ಥರ ಮನ ಒಲಿಸಿ ತೆರವು ಕಾರ್ಯ ಮಾಡಲಾಗಿದೆ.
ಮೇಗಾ ಮಾರುಕಟ್ಟೆ ನಿರ್ಮಾಣದ ನಂತರ ಅಂಗಡಿ ಕಳೆದುಕೊಂಡವರಿಗೆ ಮಳಿಗೆ ನೀಡುವುದಾಗಿ ಭರವಸೆ ನೀಡಿರುವೆ ಕೂಡಲೆ ಮೇಗಾ ಮಾರುಕಟ್ಟೆ ನಿರ್ಮಾಣ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಗೆ ಸೂಚಿಸಿದರು.
ಪಟ್ಟಣದಪ್ರವಾಸಿ ಮಂದಿರದಲ್ಲಿ ಮೇಗಾ ಮಾರುಕಟ್ಟೆ ನಿರ್ಮಾಣದ ಕುರಿತು ಕರೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮಿನಿ ವಿಧಾನಸೌಧಾ ಬೆಂಗಳೂರ ಮಾದರಿಯತೆ ಅತ್ಯಂತ ಸುಂದರವಾಗಿ ಹಾಗೂ ಗಣಮಟ್ಟದಾಗಿ ಕಟ್ಟಿದ ಗುತ್ತಿಗೆದಾರ ರಿಗೆ ಧನ್ಯವಾದಗಳು ತಿಳಿಸಿದ ಅವರು ಮೇಗಾ ಮಾರುಕಟ್ಟೆ ನಿರ್ಮಾಣ ಸಹಿತ ಅದೆ ಗುತ್ತಿಗೆ ದಾರರಿಗೆ ನೀಡಲಾಗಿದೆ. ಅದಕ್ಕಿಂತ ಚೆನ್ನಾಗಿ ಕಟ್ಟಿ ಒಳ್ಳೆಯ ಹೆಸರು ಪಡೆದು ಶ್ರೀಭೀಮಾ ಶಂಕರ ಸಹಕಾರಿ ಕಾರ್ಖಾನೆಯಂತೆ, ಮಿನಿವಿಧಾನಸೌಧಾಂತೆ, ಮೇಗಾ ಮಾರುಕಟ್ಟೆ ಸಹಿತ ಇಂಡಿ ಗಡಿಭಾಗದಲ್ಲಿ ಮುಕುಟಪ್ರಾಯವಾಗಿ ಕಂಗೋಳಿಸಲಿ ಎಂದರು.
ನಂತರ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿ.ಸಿ ಎಂ ಇಲಾಖೆಯ ಅಧಿಕಾರಿಗಳಿಗೆ ಮತ್ತು ನಿಲಯ ಮೇಲ್ವೀಚಾರಕರ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿ.ಸಿ.ಎಂ ಇಲಾಖೆಗಳು ರುವುದೇ ಬಡವರ ದೀನದುರ್ಬಲ ಮಕ್ಕಳ ಶ್ರೇಯೋಭಿವೃದ್ದಿಗಾಗಿ ನೀವು ಮಕ್ಕಳನ್ನು ದೇವರಂತೆ ಸೇವೆ ಮಾಡಿ ಮೇಲ್ವೀಚಾಕರರು ತಮ್ಮ ವಸತಿ ನಿಲಯಗಳಲ್ಲಿ ಸ್ವಚ್ಛತೆಯ ಹಾಗೂ ಶುದ್ದ ಕುಡಿ ಯುವ ನೀರಿನ ಬಗ್ಗೆ ಸದಾ ಗಮನ ಹರಿಸಬೇಕು. ಪ್ರತಿ ವಸತಿ ನಿಲಯಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಕೂಡಿಸಲಾ ಗಿದೆಯೇ ? ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಮ್ಯಾಜೇರ ಸಿ.ಚೌದರಿ ಎಲ್ಲಾ ಕಡೆ ಕೂಡಿಸಲಾಗಿದೆ ಸ್ವಚ್ಛತೆ ಬಗ್ಗೆ ಮೇಲ್ವೀರಾಕರು ಕಾಳಜಿ ವಹಿಸುತ್ತಾರೆ ಎಂದರು.
ತಾಲೂಕಿನ ತಡವಲಗಾ ಗ್ರಾಮದ ಕಸ್ತೂರ ಬಾ ವಸತಿ ಶಾಲೆಯಲ್ಲಿ ಮಕ್ಕಳಿಗೆ ವಾಂತಿ ಭೇದಿ ಸಂಭವಿಸಿತು ಇಲ್ಲಿಯವರೆಗೆ ಕಾರಣ ಕೇಳಿದರೂ ಸಮರ್ಪಕ ಉತ್ತರ ನೀಡಿಲ್ಲ. ಅಲ್ಲಿನ ಎಲ್ಲಾ ವಿಷಯಗಳು ಇಂಚಿ0ಚಿ ನನಗೆ ಗೊತ್ತಿದೆ. ಇನ್ನೋಮ್ಮೆ ಮರುಕಳಿಸಿದರೆ ತಕ್ಷಣ ಮುಲಾಜೀಲ್ಲದೆ ಕ್ರಮಕೈಗೊಳ್ಳುವೆ . ಮಕ್ಕಳ ಜೀವದ ಜೊತೆ ಚೆಲ್ಲಾಟವೇ ನಿಮ್ಮನ್ನು ನಂಬಿದ ತಂದೆ ತಾಯಿಗಳ ಪಾಡೇನು ? ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಖಡಕ್ಕಾಗಿ ಹೇಳಿದರು.
ಮಳೆಗಾಲ ನೀರಿನ ಬಗ್ಗೆ ಗಮನ ಇರಲಿ ಕಳಪೆ ಮಟ್ಟದ ಆಹಾರ ಪೂರೈಕೆ ಆಗುತ್ತಿದ್ದರೆ ನನ್ನ ಗಮನಕ್ಕೆ ತರಬೇಕು. ಪ್ರತಿ ನಿತ್ಯ ಸರಕಾರದ ಮೇನು ಪ್ರಕಾರ ಆಹಾರ ನೀಡಿ ವಸತಿ ನಿಲಯಗಳ ಸುತ್ತು ಮುತ್ತಲಿನ ಪರಿಸರ ಸುಂದರವಾಗಿರುವ0ತೆ ಗಿಡಮರ ಗಳನ್ನು ಬೆಳೆಸಿ. ವಸತಿ ನಿಲಯಗಳಿಗೆ ಬಡವರ ಮಕ್ಕಳು ಬರುತ್ತಾರೆ ಸ್ಥಿತಿವಂತರು ಇರುವುದಿಲ್ಲ ಇಂತಹವರಿಗೆ ಕಾಳಜಿ ಮಾಡಿ ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದನ್ನು ಕರಣಿಸುತ್ತಾನೆ.
ಪ್ರತಿ ೨ ತಿಂಗಳಿಗೂಮ್ಮೆ ನಿಲಯ ಮೇಲ್ವೀಚಾರಕರ ಸಭೆ ಕರೇದು ಕುಂದು ಕೊರತೆಗಳ ಬಗ್ಗೆ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೋಳ್ಳುವಂತೆ ಮಾಡಿ ಎಂದು ಶಾಸಕ ಪಾಟೀಲ ತಾ.ಪಂ ಅಧಿಕಾರಿ ಸುನೀಲ ಮದ್ದಿನ ಇವರಿಗೆ ಸೂಚಿಸಿದರು. ವಸತಿ ನಿಲಯ ಗಳ ಸಮಸ್ಯಗಳ ಕುರಿತು ವಾರ್ಡನಗಳು ತಾ.ಪಂ ಅಧಿಕಾರಿಗೆ ಪತ್ರದ ಮೂಲಕ ತಿಳಿಸಿ ಎಂದರು.
ಜಿಲ್ಲಾ ಯೋಜನಾಧಿಕಾರಿ ರಾಜಶೇಖರ ಡಂಬಳ, ಪುರಸಭೆ ಅಧಿಕಾರಿ ಕೆ.ಎಸ್ ಲಕ್ಷ್ಮೀಶ, ತಾ.ಪಂ ಅಧಿಕಾರಿ ಸುನೀಲ ಮದ್ದಿನ , ಚೌದರಿ ,ಬಿಸಿಎಂ ಅಧಿಕಾರಿ ವಿಜಯಕುಮಾರ ಕೌಲಗಿ, ಬಿ.ಈ ಓ ವಸಂತ ರಾಠೋಡ, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾ ರ್ಯರು, ನಿಲಯ ಪಾಲಕರು,ಕಸ್ತೂರಬಾ ವಸತಿ ಶಾಲೆ ಮುಖ್ಯ ಗುರುಗಳು ನಿಲಯ ಪಾಲಕರು, ಸಮಾಜ ಕಲ್ಯಾಣ, ಹಾಗೂ ಬಿಸಿಎಂ ನಿಲಯ ಮೇಲ್ವೀಚಾರಕರು ಉಪಸ್ಥಿತರಿದ್ದರು.