ಜು.೯ರಂದು ಕನ್ನಡ ಸಾಹಿತ್ಯ ಪರಿಷತ್ ಪದಗ್ರಹಣ, ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
ಬಸವನಬಾಗೇವಾಡಿ:ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಭಸವ ಭವನದಲ್ಲಿ ಶನಿವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಪಧಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆಎಂದು ನೂತನ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯ ಕ್ರಮದ ನಿಮಿತ್ಯ ಶನಿವಾರ ಸಂಜೆ  ಗಂಟೆಗೆ ಸಕಲ ವದ್ಯಾ ವೃಂದದೊ0ದಿಗೆ ಬಸವೇಶ್ವರ ದೇವಸ್ಥಾನದಿಂದ ಬಸವ ಭವನದ ವರೆಗೆ ಅಕ್ಕನ ಬಳಗದ ಮಾತೆಯರಿಂದ ಬಸವಾದಿ ಶರಣರ ವಚನ ಗ್ರಂಥ ಮೆರವಣಿಗೆ ನಡೆಯುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಶಿವಾನಂದ ಪಾಟೀಲ. ನಾಡದೇವತೆಗೆ ಪುಷ್ಪಾರ್ಚನೆಯನ್ನು ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಅಧ್ಯಕ್ಷತೆಯನ್ನು ಹಾಸಿಂಪೀರ ವಾಲೀಕಾರ, ಸಾನಿಧ್ಯವನ್ನು ಚನ್ನಬಸವ ಮಹಾಸ್ವಾಮಿಗಳು, ಸಿದ್ದರಾಮ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು, ವೀರ ರುದ್ರಮುನಿ ಸ್ವಾಮಿಗಳು, ಬೃಂಗೇಶ್ವರ ಲಿಂಗಶಿವಾಚಾರ್ಯ ಸ್ವಾಮಿಗಳು, ಶಿವಕುರಾ ಸ್ವಾಮಿಗಳು ಸೇರಿದತೆ ವಿವಿಧ ಮಠಾಧೀಶರು ವಹಿಸಲಿದ್ದು. ಮುಖ್ಯ ಅಥಿತಿಗಳಾಗಿ ಸಹಕಾರಿ ಮಹಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಿ,ಕೆ ಕಲ್ಲೂರ, ಶಿವನಗೌಡ ಬಿರಾದಾರ, ಚಂದ್ರಶೇಖರಗೌಡ ಪಾಟೀಲ ಶ್ರಿಮತಿ ಇಂದುಮತಿ ಲಮಣಿ, ಆರ್, ಜೆ.ಅಳ್ಳಗಿ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.
ಕಸಪಾ ಗೌರವ ಕಾರ್ಯದರ್ಶಿಗಳಾದ ವಾಯ್, ಎನ್ ಮಿಣಜಗಿ, ಶ್ರೀಶೈಲ ಹಾದಿಮನಿ, ಪರಿಶಿಷ್ಟ ಜಾತಿ ಪ್ರತಿನಿಧಿ ರವಿ ರಾಠೋಡ, ಮಾಧ್ಯಮ ಪ್ರತಿನಿಧಿ ಬಸವರಾಜ ನಂದಿಹಾಳ ಕಾಶಿನಾಥ ಅವಟಿ, ಪ್ರಭಾಕರಖೇಡದ, ರವಿ ಬೈಚಬಾಳ ಸೇರಿದಂತೆ ಮುಂತಾ ದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.