ಭಾರತ ಸಂಸ್ಕೃತಿ ಬೀಡು: ಪಿಎಸೈ ಅಶೋಕ ನಾಯಕ
ಇಂಡಿ:ಭಾರತ ದೇಶ ಸಂಸ್ಕೃತಿ ಬೀಡು ಇಲ್ಲಿ ಅನೇಕ ಆಚಾರ ವಿಚಾರಗಳನ್ನು ಹೊಂದಿದ ವಿವಿಧತೆಯಲ್ಲಿ ಏಕತೆ ಹೊಂದಿದ ಶ್ರೀಮಂತ ದೇಶ ಎಂದು ಗ್ರಾಮೀಣ ಪಿ.ಎಸೈ ಅಶೋಕ ನಾಯಕ ಹೇಳಿದರು.
ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಕರೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇತೀಚಿನ ದಿನಗಳಲ್ಲಿ ಸಾಮಾಜಿಕ ಜಲತಾಣಗಳಲ್ಲಿ ಕೋಮು ಗಲಭೆ ಉಂಟು ಮಾಡುವ ವಿಷಯ ಗಳನ್ನು ಕೀಡಿಗೇಡಿಗಳು ಹರಿಬಿಡುತ್ತಿದ್ದಾರೆ ಇದು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತದೆ. ಹೀಗಾಗಿ, ಇಂತಹ ಶಾಂತಿ ಭಂಗ ಮಾಡುವವರಿಗೆ ಇಲಾಖೆ ಹದ್ದಿನ ಕಣ್ಣು ಇಟ್ಟು ಅವರ ಮೇಲೆ ಕಾನೂನುಕ್ರಮ ಜರುಗಿಸಲು ಇಲಾಖೆ ಸದಾ ಸನ್ನದ್ದವಾಗಿದೆ.
ಸರಕಾರದ ಮಾರ್ಗ ಸೂಚಿಗಳನ್ವಯ ಬಕ್ರೀದ್ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸ ಬೇಕು. ಸರಕಾರದ ಮಾರ್ಗಸೂಚಿಗಳನ್ನು ಉಲಂಘನೆ ಮಾಡಬಾರದು. ಇಂಡಿ ತಾಲೂಕಿನ ಎಲ್ಲಾ ಸಮುದಾಯದವರು ಗ್ರಾಮೀಣ ಭಾಗದಲ್ಲಿ ಬೇಧಭಾವ ಮಾಡದೆ ಅನ್ಯೋನ್ಯತೆ ಯಿಂದ ಬದುಕು ಸಾಗಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಯಾವುದೇ ಅಹಿತಕರ ಘಟನೆಗಳನ್ನು ಮಾಡಿದರೆ ಅವರನ್ನು ಇಲಾಖೆ ಕಾನೂನು ಕ್ರಮ ಜರುಗಿಸಿ ಶಿಸ್ತು ಕ್ರಮ ಕೈಗೋಳ್ಳಲಾಗುತ್ತದೆ ಎಂದರು.
ಡಿ.ಎಸ್.ಎಸ್ ಸಂಚಾಲಕ ವಿನಾಯಕ ಗುಣಸಾಗರ. ಜಟ್ಟೆಪ್ಪ ರವಳಿ, ಪರಶುರಾಮ . ಧರ್ಮು ವಾಲೀಕಾರ, ಸಿದ್ದರಾಮ ತಳವಾರ ಮಾತನಾಡಿ ಎಲ್ಲಾ ಸಮುದಾಯವದರು ತಾಲೂಕಿನ ಗ್ರಾಮೀಣ ಭಾಗ ಹಾಗೂ ಪಟ್ಟಣದಲ್ಲಿ ಭೇದ ಭಾವ ಮಾಡದೆ ಸಾಮರಸ್ಯ ದಿಂದ ಸಹೋದರ ಭಾವದಿಂದ ಬಾಳುವುದರ ಜೊತೆ ಪವಿತ್ರಿ ಬಕ್ರೀದ್ ಹಬ್ಬ ಆಚರಿಸೋಣ ಎಂದು ಜಂಟಿ ಹೇಳಿಕೆ ನೀಡಿದರು.
ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಗಣ್ಯರು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.