ಕಾಂಗ್ರೆಸ್ ಬಿನ್ನಮತದಲ್ಲಿ ಅರಳಿದ ಕಮಲ
ಹರಪನಹಳ್ಳಿ:ಸ್ಥಳೀಯ ಪುರಸಭೆ ಅಧ್ಯಕ್ಷರಾಗಿ ಹಾರಳು ಅಶೋಕ್ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ ಡಾ.ಶಿವಕುಮಾರ ಬಿರಾದಾರ ಘೋಷಣೆ ಮಾಡಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷರ ಚುನಾವಣೆ ಶುಕ್ರವಾರ ನಡೆದಿದ್ದು, ಅಧ್ಯಕ್ಷ ಸ್ಥಾನ ಬಯಸಿ ಬಿಜೆಪಿ ಅಭ್ಯರ್ಥಿ ಹೆಚ್.ಎಂ.ಅಶೋಕ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಅಬ್ದುಲ್ ರೇಹಮಾನ ಸಾಬ್ ನಾಮಪತ್ರ ಸಲ್ಲಿಸಿದ್ದರು.
ಒಟ್ಟು ೨೭ ಸದಸ್ಯರ ಪೈಕಿ ೧೮ ಸದಸ್ಯರು ಹಾಜರಾಗಿದ್ದು, ಈ ಪೈಕಿ ಬಿಜೆಪಿ ಸಂಸದ ಹಾಗೂ ಶಾಸಕರು ಸೇರಿ ಒಟ್ಟು ೧೧ಜನರಿದ್ದು, ಕಾಂಗ್ರೆಸ್‌ನ ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು ೯ ಜನರಿದ್ದು, ಕಾಂಗ್ರೆಸ್‌ನ ೮ ಜನ ಸದಸ್ಯರುಗಳಾದ, ೧. ಸತ್ತೂರು ಯಲ್ಲಮ್ಮ, ೨.ಶೋಭಾ, ೩.ಉಳ್ಳಂಗಿ ನಿಂಗಮ್ಮ, ೪.ಜೋಗಿನರ ಭರತೇಶ್, ೫. ಎಸ್. ಜಾಕೀರ್ ಹುಸೇನ್. ೬.ಕೆ.ಸಾಹೆರಾ ಬಾನು, ೭. ಹೆಚ್.ಕೊಟ್ರೇಶ್, ೮. ಟಿ. ಲಕ್ಕವ್ವ, ಬಿಜೆಪಿಯ ಭೀಮವ್ವ ಗೈರು ಹಾಗಿದ್ದರು, ಹಾಜರಿದ್ದ ೧೮ ಸದಸ್ಯರಲ್ಲಿ ೧೧ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬಿನ್ನತದಿಂದ ಬಿಜೆಪಿ ಮತ್ತೆ ೨ನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾ ಯಿತು.
ಬೆಳಿಗ್ಗೆ ೧೦.೩೦ರಿಂದ ನಾಮಪತ್ರ ಸಲ್ಲಿಸಲು ಆರಂಭವಾಗಿದ್ದು ಮೊದಲಿಗೆ ಎಚ್.ಎಂ. ಅಶೋಕರವರು ನಾಮಪತ್ರ ಸಲ್ಲಿಸಿ ತೆರಳಿದರು, ಬಳಿಕ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು.
೧೨.೩೦ಕ್ಕೆ ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದ್ದರು ಯಾರು ನಾಮಪತ್ರ ಹಿಂಪಡೆಯಲಿಲ್ಲ, ಬಳಿಕ ಚುನಾವಣೆಯಲ್ಲಿ ಕಾಂಗ್ರೆಸ್, ಪಕ್ಷೇತರರು ಸೇರಿ ೯ ಜನ ಸದಸ್ಯರು ಹಾಜರಿದ್ದು, ೧೨.೩೦ರ ಬಳಿಕ ಸಂಸದರು ಮೊದಲಿಗೆ ಆಗಮಿಸಿ, ನಂತರ ಟೆಂಪೋ ಟ್ರಾವೆಲ್‌ನಲ್ಲಿ ಶಾಸಕರ ನೇತೃತ್ವದಲ್ಲಿ ಬಿಜೆಪಿ ಸದಸ್ಯರನ್ನು ಕರೆತಂದು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಬಹುಮತ ಸಂಖ್ಯೆ ಬಲವನ್ನು ಹೊಂದಿದ್ದರು ಸಹ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಹಾಗೂ ಹೈಕಮಾಂಡ ಪಕ್ಷೇತರ ಅಭ್ಯರ್ಥಿಗೆ ಮಣೆ ಹಾಕಿದ್ದಕ್ಕೆ, ಅಸಮಧಾನಗೊಂಡ ಕೆಲ ಕಾಂಗ್ರೆಸ್ ಸದಸ್ಯರು ಚುನಾವಣೆ ಪ್ರಕ್ರಿಯೆ ಯಿಂದ ದೂರ ಉಳಿಯುವುದರೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು.
ಸಂಸದ ಜಿ.ಎಂ.ಸಿದ್ದೇಶ್ವರ ಚುನಾವಣೆಯಲ್ಲಿ ಭಾಗವಹಿಸಿ ನಂತರ ಮಾತನಾಡಿ ಕಾಂಗ್ರೆಸ್ ವೈಪಲ್ಯವೋ, ವಿಫಲವೊ ಗೊತ್ತಿಲ್ಲ, ನಮ್ಮ ಪಕ್ಷ ಮತ್ತೆ ಅಧಿಕಾರ ಹಿಡಿದಿದ್ದು, ನೀರು, ಚರಂಡಿ, ವಿದ್ಯುತ್ ಸೇರಿದಂತೆ ಉತ್ತಮ ಆಡಳಿತ ನೀಡಲಿದೆ ಎಂದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಚುನಾವಣೆಯಲ್ಲಿ ಬಹುಮತ ಮುಖ್ಯ, ಈ ಚುನಾವಣೆಯಲ್ಲಿ ನಮಗೆ ಸದಸ್ಯರ ಬಹುಮತವಿತ್ತು, ಆದ್ದರಿಂದ ಬಿಜೆಪಿಗೆ ಸುಲಭವಾಗಿದೆ ಎಂದ ಅವರು ತಮ್ಮ ಪಕ್ಷದ ಹಾಲಿ ಪುರಸಭೆ ಉಪಾಧ್ಯಕ್ಷರು ಗೈರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದು ನಮಗೆ ಮಾಹಿತಿ ಇಲ್ಲ ಎನ್ನುವ ಮೂಲಕ ಜಾಣೆ ನಡೆ ತೋರಿದರು. ಇರುವ ಅವಧಿ ಯೊಳಗೆ ಪಟ್ಟಣದ ಅಭಿವೃದ್ಧಿಗೆ ಉತ್ತಮ ಆಡಳಿತ ನೀಡಲು ಸಂಸದರು, ನಾನು ಬೆಂಬಲ ನೀಡುವುದಾಗಿ ಹೇಳಿದರು.
ನೂತನ ಪುರಸಭೆ ಅಧ್ಯಕ್ಷ ಹಾರಳು ಅಶೋಕ ಮಾತನಾಡಿ ನನಗೆ ಸಂಸದ, ಶಾಸಕರ ಮಾರ್ಗದರ್ಶನದಲ್ಲಿ ಪುರಸಭೆ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿದ್ದು, ಪಟ್ಟಣವನ್ನು ಸುಂದರೀಕರಣ ಮಾಡುವುದು, ಹಾಗೂ ವಿದ್ಯುತ್, ಚರಂಡಿ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳಿಗೆ ಅಧ್ಯತೆ ನೀಡುವುದಾಗಿ ಎಂದ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಧ್ಯಕ್ಷರ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಪುರಸಭೆ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಅಧ್ಯಕ್ಷರನ್ನು ಹೊತ್ತು ಸಂಭ್ರಾಮಾಚರಣೆ ನಡೆಸಿದರು.
ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ, ಚುನಾವಣಾ ಸಹಾಯಕ ಅಧಿಕಾರಿ ಅರವಿಂದ, ಡಿವೈಎಸ್‌ಪಿಇ ವಿ.ಎಸ್.ಹಾಲಮೂರ್ತಿ, ಸಿಪಿಐ ನಾಗರಾಜ ಕಮ್ಮಾರ, ಹರಪನಹಳ್ಳಿ ಪಿಎಸ್‌ಐ ಸಿ. ಪ್ರಕಾಶ್, ಪಿಎಸ್‌ಐ ಸತೀಶ್, ಸೇರಿದಂತೆ ಪೋಲಿಸ್ ಸಿಬ್ಬಂದಿ ಇದ್ದರು.
ಹರಪನಹಳ್ಳಿ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಹೆಚ್.ಎಂ.ಅಶೋಕ ರವರು ಆಯ್ಕೆಯಾಗಿರುವುದು.