ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ : ಕೆಪಿಸಿಸಿ ವೀಕ್ಷಕಿ ಕವಿತಾ ರೆಡ್ಡಿ
ಹರಪನಹಳ್ಳಿ:ಪುರಸಭಾ ಅಧ್ಯಕ್ಷ ರ ಚುನಾವಣೆಯಲ್ಲಿ ಬಹುಮತವಿದ್ದರೂ ಸೋಲು ಕಾಣುವಂತಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ದ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ವೀಕ್ಷಕಿ ಕವಿತಾರೆಡ್ಡಿ ತಿಳಿಸಿದ್ದಾರೆ.
ಅವರು ಪುರಸಭಾ ಅಧ್ಯಕ್ಷರ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಡಿ.ಅಬ್ದುಲ್ ರಹಿಮಾನ್ ಸಾಹೇಬರನ್ನು ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ ರವರೇ ಆಯ್ಕೆ ಮಾಡಿ ಘೋಷಣೆ ಮಾಡಿದ್ದರು ಎಂದು ತಿಳಿಸಿದರು.
ಕೆಪಿಸಿಸಿಗೆ ಎಸ್. ಜಾಕೀರ್ ಹುಸೇನ್, ಜೋಗಿನರ ಭರತೇಶ್, ಡಿ.ಅಬ್ದುಲ್ ರಹಿಮಾನ್ ಹೀಗೆ ಒಟ್ಟು ಮೂರು ಜನ ಅಭ್ಯರ್ಥಿಗಳ ಹೆಸರುಗಳನ್ನು ಕೆಪಿಸಿಸಿಗೆ ಸಿಪಾರಸ್ಸ್ನ್ನು , ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸೇರಿದಂತೆ ಇಲ್ಲಿಯ ಎಲ್ಲಾ ಮುಖಂಡ ರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಭ್ಯರ್ಥಿ ಡಿ.ಅಬ್ದುಲ್ ರಹಿಮಾನ್ ರನ್ನು ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು ಎಂದು ಹೇಳಿದರು.
ವಿಪ್ ಉಲ್ಲಂಘಿಸಿ ಪಕ್ಷಕ್ಕೆ ದ್ರೋಹ ಮಾಡಿ ೮ ಜನ ಸದಸ್ಯರು ಗೈರಾಗಿದ್ದಾರೆ, ಕಾಂಗ್ರೆಸ್ ಪಕ್ಷದ ಚಿಹ್ನೆ ನೋಡಿ ಇವರುಗಳಿಗೆ ಜನರು ಮತ ಹಾಕಿದ್ದಾರೆ, ವಿಪ್ ಉಲ್ಲಂಸಿದ್ದಾರೆ, ಈ ಬಾರಿ ಖಂಡಿತ ಕ್ರಮ ಆಗುತ್ತದೆ ಎಂದು ಹೇಳಿದರು. ಗೈರಾದ ೮ ಜನ ಕಾಂಗ್ರೆಸ್ ಸದಸ್ಯರು ಹಾಗೂ ಅವರುಗಳಿಗೆ ಬೆಂಬಲ ಕೊಟ್ಟವರ ವಿರುದ್ದ ಕ್ರಮಕ್ಕೆ ನಾನು ಕೆಪಿಸಿಸಿಗೆ ಶಿಪಾರಸ್ಸು ಮಾಡುತ್ತೇನೆ ಎಂದು ಹೇಳಿದರು.
ನಮ್ಮ ಅಭ್ಯರ್ಥಿ ಅಬ್ದುಲ್ ರಹಿಮಾನ್ ರವರು ಈ ಹಿಂದೆ ಪುರಸಭಾ ವಾರ್ಡ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದರೂ ಕಾಂಗ್ರೆಸ್ ಪಕ್ಷದಲ್ಲಿಯೇ ಗುರುತಿಸಿಕೊಂಡಿದ್ದರು ಎಂದರು. ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳಿವೆ, ಸಮಗ್ರ ವರದಿಯನ್ನು ಕೆಪಿಸಿಸಿಗೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರೇಮಕುಮಾರ, ಕೆಪಿಸಿಸಿ ಮಾದ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ.ಶುಭಾಶ್ಚAದ್ರ, ಪುರಸಭೆ ಸದಸ್ಯರುಗಳಾದ ಎಂ.ವಿ ಅಂಜಿನಪ್ಪ, ಟಿ. ವೆಂಕಟೇಶ್, ಅಬ್ದುಲ್ ರಮಾನ್ ಸಾಬ್, ಗೊಂಗಡಿ ನಾಗರಾಜ್, ಗಣೇಶ್, ಚಿಕ್ಕೇರಿ ಬಸಪ್ಪ, ಮುಖಂಡ ರಾದ ಕಾನಹಳ್ಳಿ ರುದ್ರಪ್ಪ, ಎಲ್ .ಮಂಜನಾಯ್ಕ, ಇರ್ಫಾನ್ ಮುದುಗಲ್ , ತೆಲಿಗಿ ಮಂಜುನಾಥ, ಚಿಕ್ಕೇರಿಬಸಪ್ಪ, ನೀಲಗುಂದ ಮಂಜುನಾಥ, ತೆಲಗಿ ಉಮಾಕಾಂತ್, ಸೇರಿದಂತೆ ಪುರಸಭಾ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.